ಜೈಲಿನ ಗೋಡೆಗೆ ಹಾನಿ: 20 ಐಸಿಸ್ ಉಗ್ರರು ಪರಾರಿ
ದಮಾಸ್ಕಸ್, ಫೆ.7: ಸೋಮವಾರ ಸಂಭವಿಸಿದ ಭೀಕರ ಭೂಕಂಪದಿಂದ ವಾಯವ್ಯ ಸಿರಿಯಾದ ಜೈಲಿನ ಗೋಡೆ ಮತ್ತು ಬಾಗಿಲಿಗೆ ಹಾನಿಯಾಗಿದ್ದು ಇದರ ಲಾಭ ಪಡೆದ ಸುಮಾರು 20 ಕೈದಿಗಳು ಜೈಲಿನಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಸಿರಿಯಾ-ಟರ್ಕಿ ಗಡಿಭಾಗದಲ್ಲಿರುವ ರಜಾವೊ ನಗರದ ಬಳಿ ಇರುವ ಈ ಜೈಲಿನಲ್ಲಿ ಸುಮಾರು 2000 ಕೈದಿಗಳಿದ್ದು ಇವರಲ್ಲಿ ಸುಮಾರು 1,300ರಷ್ಟು ಶಂಕಿತ ಐಸಿಸ್ ಉಗ್ರರಿದ್ದಾರೆ.ಭೂಕಂಪ ಹಾಗೂ ಆ ಬಳಿಕದ ಸರಣಿ ಪಶ್ಚಾತ್ ಕಂಪನಗಳಿಂದಾಗಿ ಜೈಲಿನ ಗೋಡೆ ಮತ್ತು ಬಾಗಿಲುಗಳು ಬಿರುಕು ಬಿಟ್ಟಿದ್ದು ಆಗ ಕೈದಿಗಳು ಗಲಭೆ ಆರಂಭಿಸಿ ಜೈಲಿನ ಒಂದು ಭಾಗವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ನಂತರ ಹೆಚ್ಚುವರಿ ಸಿಬಂದಿಯನ್ನು ರವಾನಿಸಿ ಪರಿಸ್ಥಿತಿ ನಿಯಂತ್ರಿಸಲಾಗಿದ್ದು ಅಷ್ಟರಲ್ಲಿ ಸುಮಾರು 20 ಕೈದಿಗಳು ಪರಾರಿಯಾಗಿದ್ದರು ಎಂದು ಜೈಲಿನ ಅಧಿಕಾರಿ ಮಾಹಿತಿ ನೀಡಿದ್ದಾರೆ.
Next Story