Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕ್ಯಾನ್ಸರ್ ರೋಗಿಗಳಿಗೇ ಮೀಸಲಾಗಿದೆ ಈ...

ಕ್ಯಾನ್ಸರ್ ರೋಗಿಗಳಿಗೇ ಮೀಸಲಾಗಿದೆ ಈ ರೈಲು..!

ಡಾ. ಡಿ.ಸಿ. ನಂಜುಂಡಡಾ. ಡಿ.ಸಿ. ನಂಜುಂಡ8 Feb 2023 9:40 AM IST
share
ಕ್ಯಾನ್ಸರ್ ರೋಗಿಗಳಿಗೇ  ಮೀಸಲಾಗಿದೆ ಈ ರೈಲು..!

ಇದನ್ನು ಸ್ಥಳೀಯ ಭಾಷೆಯಲ್ಲಿ ‘ಕ್ಯಾನ್ಸರ್ ರೈಲು’ ಎಂದು ಕರೆಯುತ್ತಾರೆ. ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿರುವ ತುಳಸಿ ರೀಜನಲ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಗೆ ಪಂಜಾಬಿನ ಬಟಿಂಡಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ನಂಬರ್ ಎರಡರಿಂದ ಪ್ರತಿನಿತ್ಯ ಸಂಜೆ 9 ಗಂಟೆಗೆ ಈ ಕ್ಯಾನ್ಸರ್ ರೈಲು ಹೊರಡುತ್ತದೆ. ಸರಿಸುಮಾರು ಒಂಭತ್ತು ಗಂಟೆಗಳ ಈ ಪ್ರಯಾಣದ ಅವಧಿಯಲ್ಲಿ ಕ್ರಮಿಸಬೇಕಾದ ದೂರ ಸುಮಾರು 330 ಕಿಲೋಮೀಟರ್. ಸಾಮಾನ್ಯವಾಗಿ ಈ ರೈಲಿನಲ್ಲಿ ಶೇ. 70 ಮಂದಿ ಕೇವಲ ಕ್ಯಾನ್ಸರ್ ರೋಗಿಗಳು ಇರುತ್ತಾರೆ ಎನ್ನುವುದು ದುಃಖಕರ ಮತ್ತು ಆಶ್ಚರ್ಯಕರ.

ದೇಶದಲ್ಲಿನ ಈ ರೈಲಿನ ವಿಚಾರ ಬೆಳಕಿಗೆ ಬಂದಿದ್ದು ಸುಮಾರು 2016ನೇ ಇಸವಿಯಲ್ಲಿ. ಈ ಕ್ಯಾನ್ಸರ್ ರೈಲು ಹೊರಡುವುದು ಪಂಜಾಬಿನ ಬಟಿಂಡಾ ಜಿಲ್ಲೆಯಿಂದ ರಾಜಸ್ಥಾನದ ಬಿಕನೇರ್ ಜಿಲ್ಲೆಗೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಕ್ಯಾನ್ಸರ್ ರೈಲು’ ಎಂದು ಕರೆಯುತ್ತಾರೆ. ಪಂಜಾಬಿನ ಬಟಿಂಡಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ನಂಬರ್ ಎರಡರಿಂದ ಪ್ರತಿನಿತ್ಯ ಸಂಜೆ 9 ಗಂಟೆಗೆ ಈ ಕ್ಯಾನ್ಸರ್ ರೈಲು ಹೊರಡುತ್ತದೆ. ಸರಿಸುಮಾರು ಒಂಭತ್ತು ಗಂಟೆಗಳ ಈ ಪ್ರಯಾಣದ ಅವಧಿಯಲ್ಲಿ ಕ್ರಮಿಸಬೇಕಾದ ದೂರ ಸುಮಾರು 330 ಕಿಲೋಮೀಟರ್. ಸಾಮಾನ್ಯವಾಗಿ ಈ ರೈಲಿನಲ್ಲಿ ಶೇ. 70 ಮಂದಿ ಕೇವಲ ಕ್ಯಾನ್ಸರ್ ರೋಗಿಗಳು ಇರುತ್ತಾರೆ ಎನ್ನುವುದು ದುಃಖಕರ ಮತ್ತು ಆಶ್ಚರ್ಯಕರ. 12 ಬೋಗಿಗಳ ಈ ರೈಲಿನ ಒಂದು ಟಿಕೆಟ್ ಬೆಲೆ ಸುಮಾರು ರೂ.260. ಕ್ಯಾನ್ಸರ್ ರೋಗಿಗಳಿಗೆ ಶೇ. 75ರಷ್ಟು ರಿಯಾಯಿತಿ ದೊರೆಯುತ್ತದೆ. 

ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿರುವ ತುಳಸಿ ರೀಜನಲ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಅತ್ಯಂತ ಕಡಿಮೆ ದರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ದೇಶದಲ್ಲಿ ಹೆಸರುವಾಸಿಯಾಗಿದೆ. ಇನ್ನೂ ಒಂದು ಪ್ರಮುಖ ಸಂಗತಿ ಎಂದರೆ ಪಂಜಾಬಿನಿಂದ ಬಿಕನೇರ್‌ಗೆ ಹೋಗುವುದು ಇದು ಒಂದೇ ರೈಲು ಮಾತ್ರ. ಇದು ಪಂಜಾಬ್ ಅಲ್ಲದೆ ಹರ್ಯಾಣದ ಕ್ಯಾನ್ಸರ್ ರೋಗಿಗಳನ್ನು ಸಹ ಕರೆದೊಯ್ಯುತ್ತದೆ. ಅಲ್ಲಿ ಚಿಕಿತ್ಸೆ ಪಡೆಯಲು ಪಂಜಾಬ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೋಗಿಗಳಿಗೆ ಸಹಾಯ ಸಿಗುತ್ತಿದೆ. 

ಕ್ಯಾನ್ಸರ್ ರೋಗಿಗಳ ರೇಡಿಯೊ ವಿಕಿರಣ ಚಿಕಿತ್ಸೆಗೆ ಪಂಜಾಬಿನಲ್ಲಿ ಒಂದು ಲಕ್ಷ ತಗಲಿದರೆ ಅದೇ ಚಿಕಿತ್ಸೆಗೆ ಆಚಾರ್ಯ ತುಳಸಿ ಆಸ್ಪತ್ರೆಯಲ್ಲಿ ಕೇವಲ ರೂ. 35,000 ಸಾಕು ಮತ್ತು ಆಚಾರ್ಯ ತುಳಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇತರ ಸೇವೆಗಳು ಸಂಪೂರ್ಣ ಉಚಿತ. ಈ ರೈಲಿನ ಮೊದಲ ಹೆಸರು ಟಿಬಿ (ಕ್ಷಯ) ಟ್ರೈನ್. ಈ ಮೊದಲು ಈ ರೈಲಿನಲ್ಲಿ ಅತಿಹೆಚ್ಚಿನ ಕ್ಷಯರೋಗದ ರೋಗಿಗಳು ರಾಜಸ್ಥಾನಕ್ಕೆ ಚಿಕಿತ್ಸೆಗಾಗಿ ಪ್ರಯಾಣಿಸುತ್ತಿದ್ದರಂತೆ. ಇತ್ತೀಚಿನ ದಿನಗಳಲ್ಲಿ ಪಂಜಾಬಿನಲ್ಲಿ ಹೆಚ್ಚಿನ ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ತೀರಾ ಇತ್ತೀಚಿನ ವರದಿಗಳ ಪ್ರಕಾರ ಪಂಜಾಬಿನಲ್ಲಿ ಪ್ರತಿದಿನ ಕ್ಯಾನ್ಸರ್‌ನಿಂದ ಸುಮಾರು 22 ಮಂದಿ ಮರಣ ಹೊಂದುತ್ತಾರೆ. ಐಸಿಎಂಆರ್ ಸಂಸ್ಥೆಯ ಪ್ರಕಾರ ಪಂಜಾಬಿನಲ್ಲಿ ಅತಿ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಕಳೆದ 20 ವರ್ಷಗಳಿಂದ ವರದಿಯಾಗುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ಇಡೀ ದೇಶದಲ್ಲಿ ಮೊದಲ ಬಾರಿ ಪಂಜಾಬಿನಲ್ಲಿ ಆರಂಭವಾದ ಹಸಿರು ಕ್ರಾಂತಿ. 

ವಿಜ್ಞಾನಿಗಳ ಪ್ರಕಾರ ದೇಶದ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ರೈತರು ಬೆಳೆಗಳಿಗೆ ಕೀಟನಾಶಕಗಳನ್ನು ಬಳಸುತ್ತಾರೆ. ಪಂಜಾಬಿನ ರೈತರು ಪ್ರತೀ ಹೆಕ್ಟೇರ್‌ಗೆ 923 ಗ್ರಾಂ ಕೀಟನಾಶಕಗಳನ್ನು ಬಳಸುತ್ತಾರೆ ಮತ್ತು ಇದು ರಾಷ್ಟ್ರೀಯ ಸರಾಸರಿ 570 ಗ್ರಾಂ/ಹೆಕ್ಟೇರ್‌ಗಿಂತ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಇದಕ್ಕಿಂತಲೂ ಇನ್ನೂ ಕೆಟ್ಟ ವಿಚಾರವೆಂದರೆ ರೈತರು ಖಾಲಿಯಾದ ಕೀಟನಾಶಕ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಆಹಾರ ಮತ್ತು ನೀರನ್ನು ಸಂಗ್ರಹಿಸಲು ಬಳಸುತ್ತಾರೆ. ಇದರಿಂದ ಸೇವಿಸುವ ಆಹಾರ ಹೆಚ್ಚಿನ ಹೆವಿ-ಮೆಟಲ್ ವಿಷತ್ವದಿಂದ ಕಲುಷಿತಗೊಳ್ಳುತ್ತದೆ. ಇಲ್ಲಿನ ಹೆಚ್ಚಿನ ರೈತರಿಗೆ ಕೈಗಾರಿಕಾ ತ್ಯಾಜ್ಯಭರಿತ ಹೆಚ್ಚು ಕಲುಷಿತ ನೀರನ್ನು ಕುಡಿಯುವುದಕ್ಕಿಂತ ಬೇರೆ ಆಯ್ಕೆ ಇಲ್ಲ ಮತ್ತು ಕಾಲುವೆಗಳಿಂದ ಪಡೆದ ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದರಿಂದ ಇಲ್ಲಿನ ಹೆಚ್ಚಿನ ಮಂದಿಗೆ ಕ್ಯಾನ್ಸರ್ ನಿಧಾನವಾಗಿ ಹರಡುತ್ತಿದೆ ಎನ್ನುತ್ತವೆ ಸಂಶೋಧನೆಗಳು. ವೈದ್ಯ ಪ್ರಪಂಚದ ಎಲ್ಲಾ ತರಹದ ಕ್ಯಾನ್ಸರ್‌ಗಳು ಇಂದು ಪಂಜಾಬಿನ ರೈತರಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ದೊಡ್ಡ ದುರ್ದೈವ. ಪಂಜಾಬ್ ರಾಜ್ಯದ ಹತ್ತಿ ಬೆಲ್ಟ್ ಎಂದೂ ಕರೆಯಲ್ಪಡುವ ದಕ್ಷಿಣ ಮಾಲ್ವಾ ಪ್ರದೇಶವು ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳನ್ನು ಹೊಂದಿದೆ ಮತ್ತು ಅವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವಿಪರೀತವಾಗಿ ಬೆಳೆಯುತ್ತಿದೆ. 

ಈ ರಾಜ್ಯದ ಅರ್ಧ ಭಾಗಕ್ಕಿಂತ ಹೆಚ್ಚಿನ ಕ್ಯಾನ್ಸರ್ ರೋಗಿಗಳು ಮಾಲ್ವಾ ಪ್ರದೇಶದವರು. ಪಂಜಾಬ್‌ನ ಮತ್ತೊಂದು ಕ್ಯಾನ್ಸರ್ ಪೀಡಿತ ರೋಗಿಗಳ ಜಿಲ್ಲೆ ಎಂದರೆ ಅದು ಬಟಿಂಡಾ. ಇಲ್ಲಿನ ಕೃಷಿ ಪದ್ಧತಿಗಳಲ್ಲಿ ಕೀಟನಾಶಕಗಳ ಅತಿಯಾದ ಬಳಕೆ, ನೀರಿನಲ್ಲಿ ಯುರೇನಿಯಂ ಸಾಂದ್ರತೆ ಮತ್ತು ಅತಿಯಾದ ತಂಬಾಕು ಮತ್ತು ಮದ್ಯದ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಬಟಿಂಡಾ ಪಂಜಾಬಿನ ಕ್ಯಾನ್ಸರ್ ರಾಜಧಾನಿಯಾಗಿದೆ ಎನ್ನುತ್ತವೆ ವರದಿಗಳು. ಭಾರತದಲ್ಲಿನ ವೈದ್ಯಕೀಯ ಸಂಸ್ಥೆಗಳ ಸಂಶೋಧನೆಯು ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಬಳಸುವ ಹಳ್ಳಿಗಳಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿವೆ ಎಂದು ಕಂಡುಹಿಡಿದಿದೆ. ಮುಖ್ಯವಾಗಿ ಈಗ ನಮ್ಮ ಮುಂದೆ ನಿಂತಿರುವ ಬಹುದೊಡ್ಡ ಪ್ರಶ್ನೆಯೆಂದರೆ ಇಂತಹ ಆಹಾರಗಳನ್ನು ಬಳಸುತ್ತಿರುವ ದೇಶದ ಜನಸಾಮಾನ್ಯರ ಪಾಡೇನು?.

  ಇತ್ತೀಚಿನ ಅಧ್ಯಯನ ವರದಿಗಳೊಂದಿಗೆ, ಭಾರತದ ಅತ್ಯಧಿಕ ಕ್ಯಾನ್ಸರ್ ದರವನ್ನು ಹೊಂದಿರುವ ರಾಜ್ಯಗಳನ್ನು ಪಟ್ಟಿ ಮಾಡಲಾಗಿದೆ. ಕೇರಳ ಭಾರತದಲ್ಲಿ ಹೆಚ್ಚಿನ ಕ್ಯಾನ್ಸರ್ ಪ್ರಮಾಣವಿರುವ ರಾಜ್ಯ. ಇತರ ರಾಜ್ಯಗಳೆಂದರೆ ಮಿಜೋರಾಂ, ಹರ್ಯಾಣ, ದಿಲ್ಲಿ ಮತ್ತು ಕರ್ನಾಟಕ. 2022ರಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಅಂದಾಜು ಸಂಖ್ಯೆ 14,61,427. ಇಂದಿನ ಕಲುಷಿತ ಪರಿಸರದಲ್ಲಿ ಭಾರತದಲ್ಲಿ, ಒಂಭತ್ತು ಜನರಲ್ಲಿ ಒಬ್ಬರಿಗೆ ಅವನ/ಅವಳ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಿಜೋರಾಂನ ಈಶಾನ್ಯ ರಾಜ್ಯದಲ್ಲಿರುವ ಐಜ್ವಾಲ್ ಜಿಲ್ಲೆಯಲ್ಲಿ ಗಂಟಲು ಮತ್ತು ನಾಲಿಗೆ ಕ್ಯಾನ್ಸರ್ ದೇಶದಲ್ಲೇ ಹೆಚ್ಚಾಗಿ ಕಂಡು ಬರುತ್ತಿದೆ. 

ಈ ಜಿಲ್ಲೆಯಲ್ಲಿ ಪುರುಷರಲ್ಲಿ ಹೊಟ್ಟೆಯ ಕ್ಯಾನ್ಸರ್‌ನ ಪ್ರಮಾಣವು ದೇಶದಲ್ಲೇ ಅತ್ಯಧಿಕವಾಗಿದೆ. ಇನ್ನೊಂದು ಪ್ರಮುಖ ದಂಗು ಬಡಿಸುವ ಅಂಶವೆಂದರೆ ಈ ಜಿಲ್ಲೆಯ ಅರ್ಧಕ್ಕಿಂತ ಹೆಚ್ಚಿನ ಮಂದಿ ಧೂಮಪಾನಿಗಳು. ನಮ್ಮ ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 78,381 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತವೆ. ಇತ್ತೀಚಿನ ರಾಷ್ಟ್ರೀಯ ಆರೋಗ್ಯ ಸರ್ವೇ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸ್ತನ ಕ್ಯಾನ್ಸರ್ ಪ್ರಕರಣಗಳು(ಶೇ.27.9) ವರದಿಯಾಗುತ್ತಿದೆ. ಅಲ್ಲದೆ ಕರ್ನಾಟಕದಲ್ಲಿ ಅದರಲ್ಲೂ ಪುರುಷರಲ್ಲಿ ಶ್ವಾಸಕೋಶಗಳು (ಶೇ. 10.1), ಹೊಟ್ಟೆ (ಶೇ. 6.9) ಮತ್ತು ಪ್ರಾಸ್ಟೇಟ್ (ಶೇ. 6.4), ಮಹಿಳೆಯರಲ್ಲಿ, ಗರ್ಭಕೋಶ(ಶೇ. 12) ಮತ್ತು ಅಂಡಾಶಯ (ಶೇ. 6.4) ಕ್ಯಾನ್ಸರ್ ಕಂಡುಬರುತ್ತಿದೆ. ಇತ್ತೀಚಿನ ಐಸಿಎಂಆರ್ ವರದಿಯ ಪ್ರಕಾರ 2025ರ ವೇಳೆಗೆ ಕರ್ನಾಟಕದಲ್ಲಿ ಮಹಿಳಾ ಕ್ಯಾನ್ಸರ್ ರೋಗಿಗಳ ಪ್ರಕರಣ ಶೇ. 12ರಷ್ಟು ಹೆಚ್ಚಾಗಲಿದೆ. 

ಈ ಸಮಯದಲ್ಲಿ ಪುರುಷರಲ್ಲಿನ ಕ್ಯಾನ್ಸರ್ ಪ್ರಮಾಣ ಶೇ. 11 ಹೆಚ್ಚಾಗಲಿದೆ ಎನ್ನುತ್ತದೆ ವರದಿ. ಅದರಲ್ಲೂ ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ ಎನ್ನುವ ಊಹೆ ವಿಜ್ಞಾನಿಗಳದು. ಇತ್ತೀಚಿನ ದಿನಗಳಲ್ಲಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ ಎನ್ನುತ್ತವೆ ಸರ್ವೇ ವರದಿಗಳು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕ್ಯಾನ್ಸರ್ ಪ್ರಮಾಣ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದೆ ಎನ್ನುತ್ತವೆ ಕಿದ್ವಾಯಿ ಆಸ್ಪತ್ರೆಯ ಮೂಲಗಳು. ಈ ಮಧ್ಯೆ ಹೆಚ್ಚುತ್ತಿರುವ ಆರೋಗ್ಯ, ಅರಿವು, ನೈರ್ಮಲ್ಯ ಮತ್ತು ಬಾಲ್ಯ ವಿವಾಹಗಳಲ್ಲಿನ ಕಡಿತಕ್ಕೆ ಗರ್ಭಕೋಶದ ಕ್ಯಾನ್ಸರ್ ಪ್ರಮಾಣ ರಾಜ್ಯದಲ್ಲಿ ಇಳಿಕೆಯಾಗುತ್ತಿರುವುದನ್ನು ಕೆಲವು ವರದಿಗಳು ಗಮನಿಸಿವೆ. ಈ ಮಧ್ಯೆ ಈಶಾನ್ಯದ ಪುಟ್ಟ ರಾಜ್ಯ ಮೇಘಾಲಯ ಈಶಾನ್ಯದ ಕ್ಯಾನ್ಸರ್ ರಾಜ್ಯವಾಗಿ ಪರಿವರ್ತಿತವಾಗಿದೆ. 

ದೇಶದಲ್ಲೇ ಇಲ್ಲಿನ ಹೆಚ್ಚಿನ ಜನರು ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ತಂಬಾಕಿನ ಬಳಕೆಯು ಇಲ್ಲಿನ ಜನಸಂಖ್ಯೆಯ ಅರ್ಧದಷ್ಟು ಜನರಲ್ಲಿ ವರದಿಯಾಗಿದೆ ಮತ್ತು ಸುಮಾರು ಮೂರನೇ ಒಂದು ಭಾಗದಷ್ಟು ಇಲ್ಲಿನ ಪುರುಷರು ಆಲ್ಕೋಹಾಲ್ ಸೇವಿಸುತ್ತಾರೆ. ಇದು ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಜೊತೆಗೆ ಹುದುಗಿಸಿದ ಆಹಾರಗಳ ಹೆಚ್ಚಿನ ಬಳಕೆ ಸಹ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ ಎನ್ನುತ್ತಾರೆ ವಿಜ್ಞಾನಿಗಳು. ಮಹಾನಗರಗಳ ಪೈಕಿ ದಿಲ್ಲಿಯು ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದೆ ಎಂಬುದು ಕೆಲವು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಇಂದು ಕ್ಯಾನ್ಸರ್ ಕೇವಲ ನಗರ ಪ್ರದೇಶ ಜನರ ಸಮಸ್ಯೆಯಾಗಿ ಉಳಿದಿಲ್ಲ. ಬದಲಾಗಿ ಬಡವ, ಶ್ರೀಮಂತ, ನಗರ ಮತ್ತು ಗ್ರಾಮೀಣ ಯಾವುದನ್ನೂ ನೋಡದೆ ಎಗ್ಗಿಲ್ಲದೆ ಮುನ್ನುಗುತ್ತಿದೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿ.ಎಸ್.ಎಸ್.ಇ.ಐ.ಪಿ .ಸಂಶೋಧನಾ ಕೇಂದ್ರ ಸುವರ್ಣ ಆರೋಗ್ಯ ಟ್ರಸ್ಟ್‌ನ ದತ್ತಾಂಶ ಬಳಸಿ ನಡೆಸಿದ ಸಂಶೋಧನೆಯು ಸಹ ಬಡವರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾನ್ಸರ್ ಇರುವುದನ್ನು ಹೇಳುತ್ತದೆ. ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿಗಳು, ಅತಿಯಾದ ಮಾನಸಿಕ ಒತ್ತಡ ಜೆನೆಟಿಕ್ ಅಂಶಗಳು, ಆಹಾರಗಳಲ್ಲಿ ಬಳಸುತ್ತಿರುವ ಯಥೇಚ್ಛ ಪ್ರಮಾಣದ ಕೀಟನಾಶಕಗಳು, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ ಇವೆಲ್ಲವೂ ಸಹ ಕ್ಯಾನ್ಸರ್‌ನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುವುದಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಆಹಾರ ಪದ್ಧತಿಯ ಹೊರತಾಗಿ, ತಡವಾದ ಗರ್ಭಧಾರಣೆ ಮತ್ತು ಸ್ಥೂಲಕಾಯತೆಗೆ ಸಂಬಂಧಿಸಿದ ಅಂಶಗಳು, ಪರಿಸರ ಮಾಲಿನ್ಯ, ಹೆಚ್ಚುತ್ತಿರುವ ಕೈಗಾರಿಕೆಗಳು, ಗಣಿಗಾರಿಕೆ ಇತ್ಯಾದಿ ಅಂಶಗಳು ಇಂದು ದೇಶದಲ್ಲಿ ಕ್ಯಾನ್ಸರ್ ಹೆಚ್ಚಾಗಲು ಕಾರಣವಾಗುತ್ತಿವೆ. 

ವೇಗವಾಗಿ ಅಭಿವೃದ್ಧಿಗೆ ತೆಗೆದುಕೊಳ್ಳುತ್ತಿರುವ ಸಮಾಜವು ಮನುಷ್ಯರು ಆರೋಗ್ಯದ ಮೇಲೆ ಉಂಟು ಮಾಡುತ್ತಿರುವ ಪರಿಣಾಮಗಳ ಬಗ್ಗೆ ಸಮುದಾಯ ಸದಾ ಜಾಗೃತವಾಗಿರಬೇಕು. ಮುಖ್ಯವಾಗಿ ಇಂದಿನ ದಿನಮಾನಗಳಲ್ಲಿ ಜನರ ಜೀವನಶೈಲಿ ಬಹಳ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ತಕ್ಕಂತೆ ಕಾಯಿಲೆಗಳು ಸಹ ಹೆಚ್ಚಾಗಿ ಮತ್ತು ವೇಗವಾಗಿ ಕಾಣಿಸಿಕೊಳ್ಳುತ್ತಿವೆ. ಕ್ಯಾನ್ಸರ್‌ನಂತಹ ಕಾಯಿಲೆಗಳ ವಿಚಾರದಲ್ಲಿ ಜನರ ಮುನ್ನೆಚ್ಚರಿಕೆ ಬಹಳ ಅಗತ್ಯ. ಕುಟುಂಬದಲ್ಲಿ ಕ್ಯಾನ್ಸರ್‌ಗಳ ಇತಿಹಾಸವಿದ್ದರೆ ಅಂತಹವರು ಇನ್ನೂ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ವರ್ಷಕೊಮ್ಮೆ ಸಂಪೂರ್ಣ ದೇಹ ತಪಾಸಣೆ ಮತ್ತು ಆರೋಗ್ಯಕರ ಆಹಾರ ಶೈಲಿಯಿಂದ ನಾವು ಸಾಧ್ಯವಾದಷ್ಟು ಇಂತಹ ಮಾರಕ ಕಾಯಿಲೆಗಳಿಂದ ದೂರವಿರಬಹುದು.

share
ಡಾ. ಡಿ.ಸಿ. ನಂಜುಂಡ
ಡಾ. ಡಿ.ಸಿ. ನಂಜುಂಡ
Next Story
X