ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆ

ಮಂಗಳೂರು: ನಗರದ ಫಳ್ನೀರ್ ನ ಲಾಡ್ಜೊಂದರಲ್ಲಿ ಕೇರಳದ ಕಣ್ಣೂರಿನ ದಂಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕೇರಳ ಕಣ್ಣೂರಿನ ರವೀಂದ್ರ (55) ಮತ್ತು ಸುಧಾ (50) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೋತಿಮಹಲ್ ಪಕ್ಕದ ಬ್ಲೂಸ್ಟಾರ್ ಲಾಡ್ಜ್ ನಲ್ಲಿ ಫೆ.6 ರಂದು ಮಧ್ಯಾಹ್ನ ದಂಪತಿ ರೂಮ್ ಪಡೆದಿದ್ದರು. ಬುಧವಾರ ದಂಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ಬಟ್ಟೆ ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.