ಉಳ್ಳಾಲ: ಉಲಮಾ ಸಂಗಮಾ ಅಸ್ತಿತ್ವಕ್ಕೆ

ಉಳ್ಳಾಲ: ಶಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಅಧೀನದಲ್ಲಿ ಉಲಮಾ ಸಂಗಮಾ ರೂಪೀಕರಣ ಬುಧವಾರ ಕಿನ್ಯದ ವಾದಿತ್ವೈಬಾ ಕಚೇರಿಯಲ್ಲಿ ನಡೆಯಿತು.
ಅಕಾಡೆಮಿ ಅಧ್ಯಕ್ಷ ಸೆಯ್ಯದ್ ಅಮೀರ್ ತಂಙಳ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೆಯ್ಯದ್ ಬಾತಿಷ ತಂಙಳ್ ದುಆ ನೆರವೇರಿಸಿ ಉದ್ಘಾಟಿಸಿದರು. ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಉಲಮಾ ಸಂಗಮದ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಫೈಝಿ ಕೊಡಾಜೆ, ಉಪಾಧ್ಯಕ್ಷ ರಾಗಿ ಆಸೀಫ್ ಅಝ್ ಅರಿ ಮಂಗಳನಗರ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ದಾರಿಮಿ ಗ್ರಾಮ ಚಾವಡಿ, ಕಾರ್ಯದರ್ಶಿಯಾಗಿ ಮುಸ್ತಫಾ ಫೈಝಿ ಎಲ್ಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಇರ್ಫಾನ್ ಅಲ್ ಅಸ್ ಲಮಿ ಕಲಾಯಿ, ಕೋಶಾಧಿಕಾರಿಯಾಗಿ ಅಬೂಬಕರ್ ದಾರಿಮಿ ಅವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಶಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಮೆನೇಜರ್ ಅಬ್ದುಲ್ ಲತೀಫ್ ಮುಸ್ಲಿಯಾರ್ ರೆಂಜಲಾಡಿ,ಕನ್ವಿನರ್ ಬಿ.ಎಂ.ಇದ್ದಿನ್ ಕುಂಞಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಿರಾಜುದ್ದೀನ್ ಅಲಂಕಾರು ಸ್ವಾಗತಿಸಿದರು.ಕೋಶಾಧಿಕಾರಿ ಅಬೂಸಾಲಿ ಹಾಜಿ ಕುರಿಯಕಾರ್ ವಂದಿಸಿದರು.