ನಾಗ್ಪುರದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಸೂರ್ಯಕುಮಾರ್

ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನವಾದ ಗುರುವಾರ ನಾಗ್ಪುರದಲ್ಲಿ 32 ವರ್ಷ ವಯಸ್ಸಿನ ಸೂರ್ಯಕುಮಾರ್ ಯಾದವ್ ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಲಾಯಿತು. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರ ತಾಳ್ಮೆಗೆ ಕೊನೆಗೂ ಪ್ರತಿಫಲ ಲಭಿಸಿತು.
2022 ರ ಅವಧಿಯಲ್ಲಿ ಟಿ-20 ಕ್ರಿಕೆಟ್ ನಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಾದವ್, ಕ್ರೀಡಾ ಇತಿಹಾಸದಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ 304 ನೇ ಭಾರತೀಯ ಎನಿಸಿಕೊಂಡರು.
ಬೆನ್ನುನೋವಿನಿಂದ ಚೇತರಿಸಿಕೊಳ್ಳಲು ಶ್ರೇಯಸ್ ಅಯ್ಯರ್ ವಿಫಲವಾದ ಕಾರಣ ಸೂರ್ಯಕುಮಾರ್ ಗೆ ಭಾರತಕ್ಕಾಗಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ಲಭಿಸಿದೆ. ನಾಗ್ಪುರದಲ್ಲಿ ಮಧ್ಯಮ ಕ್ರಮಾಂಕದ ಸ್ಥಾನಕ್ಕಾಗಿ ಶುಭಮನ್ ಗಿಲ್ ಅವರೊಂದಿಗಿನ ಪೈಪೋಟಿಯನ್ನು ಹಿಮ್ಮೆಟ್ಟಿಸಲು ಅವರಿಗೆ ಸಾಧ್ಯವಾಯಿತು.
ಟಾಸ್ ಜಯಿಸಿದ ಆಸ್ಟ್ರೇಲಿಯವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆಸ್ಟ್ರೇಲಿಯದ ಆರಂಭಿಕ ಆಟಗಾರರಾದ ಉಸ್ಮಾನ್ ಖ್ವಾಜಾ(1) ಹಾಗೂ ಡೇವಿಡ್ ವಾರ್ನರ್ (1)ವಿಕೆಟನ್ನು ಉರುಳಿಸಿದ ಮುಹಮ್ಮದ್ ಸಿರಾಜ್ ಹಾಗೂ ಮುಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದ್ದಾರೆ.