Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬಡವರನ್ನು ಕಾಡುತ್ತಿರುವ ಸಂಕಷ್ಟವೇ ...

ಬಡವರನ್ನು ಕಾಡುತ್ತಿರುವ ಸಂಕಷ್ಟವೇ ಬಿಜೆಪಿಯ ಭಾವನಾತ್ಮಕ ರಾಜಕಾರಣಕ್ಕೆ ಉತ್ತರ ಕೊಡುತ್ತದೆ: ಬಿ.ಎಲ್. ಶಂಕರ್

ವಾರ್ತಾಭಾರತಿ ಚುನಾವಣಾ ವಿಶೇಷ ಸಂದರ್ಶನ ಸರಣಿ

ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ9 Feb 2023 10:34 AM IST
share
ಬಡವರನ್ನು ಕಾಡುತ್ತಿರುವ ಸಂಕಷ್ಟವೇ  ಬಿಜೆಪಿಯ ಭಾವನಾತ್ಮಕ ರಾಜಕಾರಣಕ್ಕೆ  ಉತ್ತರ ಕೊಡುತ್ತದೆ: ಬಿ.ಎಲ್. ಶಂಕರ್
ವಾರ್ತಾಭಾರತಿ ಚುನಾವಣಾ ವಿಶೇಷ ಸಂದರ್ಶನ ಸರಣಿ

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿಯ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬದುಕಿನ ಸಂಕಷ್ಟ ಎಷ್ಟು ದೊಡ್ಡದೆಂದರೆ, ನೋಟು ಅಮಾನ್ಯೀಕರಣದ ನಂತರ, ತರಾತುರಿಯಲ್ಲಿ ಜಿಎಸ್‌ಟಿ ತಂದ ನಂತರ, ಕೋವಿಡ್ ವೇಳೆ ದಿಢೀರಾಗಿ ಲಾಕ್‌ಡೌನ್ ಹೇರಿಕೆಯ ನಂತರ ಬಿಜೆಪಿಯವರು ಅನುಸರಿಸುತ್ತಿರುವ ಅನೇಕ ಆರ್ಥಿಕ ನೀತಿಗಳ ಕಾರಣ ಇಂದು ಮಧ್ಯಮ, ಕೆಳಮಧ್ಯಮ ವರ್ಗ, ದುಡಿಯುವ ವರ್ಗ, ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಇವರೆಲ್ಲ ಅಗಾಧ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕರ್ನಾಟಕದಲ್ಲಿ ಬಹುತೇಕ ಬಿಜೆಪಿಯ ಭಾವನಾತ್ಮಕ ರಾಜಕಾರಣವನ್ನು ಮೆಟ್ಟಿ ನಿಲ್ಲುವಷ್ಟು ಪ್ರಬಲವಾಗಿದೆ.

 ನಿಮಗೆ ಪಕ್ಷ ಹೊಸ ಜವಾಬ್ದಾರಿಯನ್ನು ಕೊಟ್ಟಿದೆ. ಚುನಾವಣೆಗೆ ಪಕ್ಷದ ಸಿದ್ಧತೆ ಹೇಗೆ ನಡೆದಿದೆ?

ಬಿ.ಎಲ್. ಶಂಕರ್: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅದರದ್ದೇ ಆದ ಬಲ ಬಹಳ ವರ್ಷಗಳಿಂದ ಇದೆ. ದಯನೀಯವಾಗಿ ಸೋತ ಹೊತ್ತಿನಲ್ಲೂ ಮತ ಶೇ.32ಕ್ಕಿಂತ ಕಡಿಮೆಯಾಗಿಲ್ಲ. ಕಳೆದ ಚುನಾವಣೆಯಲ್ಲೂ ಸುಮಾರು ಶೇ.38ರಷ್ಟು ಮತ ಬಂದಿತ್ತು. ಈ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕಿರುವ ವಿರೋಧಿ ಅಲೆ ಮತ್ತು ಯಡಿಯೂರಪ್ಪರಂತಹ ಪ್ರಭಾವಶಾಲಿ ನಾಯಕ ಮುಖ್ಯಮಂತ್ರಿಯಲ್ಲದೆ ಇರುವುದು ಅಥವಾ ಮುಂಚೂಣಿಯಲ್ಲಿ ಇಲ್ಲದೆ ಇರುವುದು ಮತ್ತು ಜೆಡಿಎಸ್‌ಗಿರುವ ಸೀಮಿತವಾದ ಶಕ್ತಿ ಇವೆಲ್ಲದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಜಾಸ್ತಿ. 

ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರುವುದು ದೊಡ್ಡ ಪ್ರಮಾಣದಲ್ಲಿ ಚುನಾವಣೆಯಲ್ಲಿ ಸಹಾಯಮಾಡಲಿದೆ. ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯಾಗಿ ಕೊಟ್ಟ ಕಾರ್ಯಕ್ರಮ ಮತ್ತು ಅವರು ಜನಸಮೂಹದ ನಾಯಕರಾಗಿ ಬೆಳೆದಿರುವುದು ಕೂಡ ಮತ್ತೊಂದು ಬಹಳ ದೊಡ್ಡ ಶಕ್ತಿ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷವನ್ನು ಸದಾಕಾಲ ಜಾಗೃತ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಎಂ.ಬಿ. ಪಾಟೀಲರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಉತ್ತರ ಕರ್ನಾಟಕ ಭಾಗದಿಂದ ಇದ್ದಾರೆ. 

ಇವೆಲ್ಲವೂ ಬಹುತೇಕ ನಮಗೆ ಪೂರಕವಾಗಿ ಕೆಲಸ ಮಾಡಲಿವೆ. ಇನ್ನು, ಆಡಳಿತ ಪಕ್ಷವಾಗಿರುವ ಬಿಜೆಪಿಯಲ್ಲಿ ಆಂತರಿಕವಾಗಿ ಅನೇಕ ಗೊಂದಲಗಳಿವೆ. ಸಂಪೂರ್ಣ ಸಾಮರಸ್ಯವೂ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಆರೆಸ್ಸೆಸ್ ಪರಿಧಿಯ ಹೊರಗಡೆಯಿಂದ ಬಂದವರಾದ್ದರಿಂದ ಅವರಿಗೆ ಸಂಪೂರ್ಣ ನಿಯಂತ್ರಣ ಆಡಳಿತ ಅಥವಾ ಪಕ್ಷದ ಮೇಲೆ ಸಿಕ್ಕಿದೆ ಎಂಬ ಸ್ಥಿತಿಯಿಲ್ಲ. ಇತ್ತೀಚೆಗೆ ಅಮಿತ್ ಶಾ ಅವರು ಕರ್ನಾಟಕ ಪ್ರವಾಸದ ವೇಳೆ ಮುಂದಿನ ಚುನಾವಣೆಯನ್ನು ಮೋದಿ ನೇತೃತ್ವದಲ್ಲಿಯೇ ಎದುರಿಸುವುದಾಗಿ ಹೇಳಿದರು. ಇದು ದಕ್ಷಿಣ ಭಾರತದಲ್ಲಿ ಅಷ್ಟು ಫಲ ಕೊಡಲಿಕ್ಕಿಲ್ಲ.

 ದೇಶಾದ್ಯಂತ ಮೋದಿಯೇ ಪಕ್ಷ ಗೆಲ್ಲಿಸುತ್ತಿರುವಾಗ ಕರ್ನಾಟಕದಲ್ಲಿ ಆಗದು ಎಂದೇಕೆ ಭಾವಿಸುತ್ತೀರಿ?

ಬಿ.ಎಲ್. ಶಂಕರ್: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಹಳ ಸೀಮಿತವಾದ ಬಲವಿದೆ. ಬಲವಿರುವುದು ಕರ್ನಾಟಕದಲ್ಲಿ ಮಾತ್ರ. ಜನತಾ ಪರಿವಾರ ಛಿದ್ರವಾದ ನಂತರ ಜನತಾ ಪರಿವಾರದಲ್ಲಿದ್ದ ಅನೇಕರು ಬಿಜೆಪಿಗೆ, ಕಾಂಗ್ರೆಸ್‌ಗೆ ಹೋದರು. ಜೆಡಿಎಸ್‌ನಲ್ಲಿ ಉಳಿದವರು ಕೆಲವೇ ಕೆಲವರು. ಜನತಾ ಪರಿವಾರ ದುರ್ಬಲವಾದುದರ ಲಾಭವನ್ನು ಬಿಜೆಪಿ ತೆಗೆದುಕೊಂಡಿತು. ಜನತಾ ಪರಿವಾರದ ಜಾಗಕ್ಕೆ ಕರ್ನಾಟಕದಲ್ಲಿ ಬಿಜೆಪಿ ಬಂತು. ಅವರಿಗೆ ಆ ಬಲ ಇದೆ. ಕಾಂಗ್ರೆಸೇತರ ಅವಕಾಶದ ದೊಡ್ಡ ಜಾಗವನ್ನು ಕರ್ನಾಟಕದ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಆವರಿಸಿಕೊಂಡಿದೆ.

 ಕರ್ನಾಟಕದಲ್ಲಿ ಈ ಬಾರಿಯೂ ಧರ್ಮಾಧಾರಿತವಾಗಿ ಚುನಾವಣೆ ನಡೆಯಲಿದೆಯೇ ಅಥವಾ ವಿಷಯಾಧಾರಿತವಾಗಲಿದೆಯೇ?

ಬಿ.ಎಲ್. ಶಂಕರ್: ಬಿಜೆಪಿ ಉದ್ದೇಶಪೂರ್ವಕವಾಗಿ ಈ ಚುನಾವಣೆಯನ್ನು ಭಾವನಾತ್ಮಕವಾಗಿಸಿ, ಮೂಲಭೂತವಾದವನ್ನೇ ಮುಂಚೂಣಿಗೆ ತಂದು ಅದರ ಆಧಾರದ ಮೇಲೆ ಧ್ರುವೀಕರಣವಾಗಲಿ ಎಂದು ಖಂಡಿತ ಬಯಸುತ್ತದೆ. ರಾಜ್ಯ ಬಿಜೆಪಿ ಅಧ್ಯಕ್ಷರು, ಬಿಜೆಪಿಯ ಅನೇಕ ನಾಯಕರು, ಮಂತ್ರಿಗಳು, ದಿಲ್ಲಿ ನಾಯಕರ ಮಾತುಗಳು ಇದಕ್ಕೆ ಸಾಕ್ಷಿ. ಆದರೆ ಬದುಕಿನ ಸಂಕಷ್ಟ ಎಷ್ಟು ದೊಡ್ಡದೆಂದರೆ, ನೋಟು ಅಮಾನ್ಯೀಕರಣದ ನಂತರ, ತರಾತುರಿಯಲ್ಲಿ ಜಿಎಸ್‌ಟಿ ತಂದ ನಂತರ, ಕೋವಿಡ್ ವೇಳೆ ದಿಢೀರಾಗಿ ಲಾಕ್‌ಡೌನ್ ಹೇರಿಕೆಯ ನಂತರ ಅವರು ಅನುಸರಿಸುತ್ತಿರುವ ಅನೇಕ ಆರ್ಥಿಕ ನೀತಿಗಳ ಕಾರಣ ಇಂದು ಮಧ್ಯಮ, ಕೆಳಮಧ್ಯಮ ವರ್ಗ, ದುಡಿಯುವ ವರ್ಗ, ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಇವರೆಲ್ಲ ಅಗಾಧ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕರ್ನಾಟಕದಲ್ಲಿ ಬಹುತೇಕ ಅವರ ಭಾವನಾತ್ಮಕ ರಾಜಕಾರಣವನ್ನು ಮೆಟ್ಟಿ ನಿಲ್ಲುವಷ್ಟು ಪ್ರಬಲವಾಗಿದೆ.

 ಜನರು ತುಂಬಾ ಸಂಕಷ್ಟದಲ್ಲಿದ್ದಾರೆಂದಾದರೆ ನೀವು ಘೋಷಿಸಿರುವ ‘ಗೃಹಲಕ್ಷ್ಮೀ’, ‘ಗೃಹಜ್ಯೋತಿ’ಯಂತಹ ಯೋಜನೆಗಳು ಸಾಕೇ?

ಬಿ.ಎಲ್. ಶಂಕರ್: ಜನರು ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ತಮಗೆ ಯಾರು ಆಸರೆಯಾಗುತ್ತಾರೆ ಎಂದು ನೋಡುತ್ತಾರೆ. 1985ರಲ್ಲಿ ಜನತಾಪಕ್ಷ 2 ರೂ.ಗೆ ಕೆಜಿ ಅಕ್ಕಿ, ಪಂಚೆ ಸೀರೆ ಕೊಡುವ ತೀರ್ಮಾನ ತೆಗೆದುಕೊಂಡಾಗ 135ರಷ್ಟು ಸೀಟು ಬಂತು. ಆರ್ಥಿಕವಾಗಿ ಗಟ್ಟಿಯಿರುವವರಿಗೆ ಇದು ಸಣ್ಣದು ಅನ್ನಿಸಬಹುದು. ಆದರೆ ಅವರಿಗೆ ಅದು ದೊಡ್ಡ ಸಹಾಯ. ಯಾವುದೇ ಮಧ್ಯಮ, ಕೆಳಮಧ್ಯಮ, ದುಡಿಯುವ ವರ್ಗಕ್ಕೆ ಆರೋಗ್ಯ ಸೇವೆ ಮತ್ತು ಶಿಕ್ಷಣ ಎಷ್ಟು ದುಬಾರಿಯಾಗಿವೆ ಎಂದರೆ, ಯಾರಿಗಾದರೂ ಕಾಯಿಲೆ ಬಂದರೆ ಆ ಸಂಸಾರ ಸಾಲ ಮಾಡದೆ ವಿಧಿಯಿಲ್ಲ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಹಣಕಾಸಿನ ಸಹಾಯ ದೊಡ್ಡ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಅದನ್ನು ಮಾಡಿಯೇ ಮಾಡುತ್ತದೆ. ಪ್ರತಿಯೊಂದು ಪಂಚಾಯತ್‌ಗೆ ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ಸರಕಾರಿ ಶಾಲೆ, ಸಾಧ್ಯವಾದರೆ ವಸತಿ ಶಾಲೆಯನ್ನು ಕೊಡುವ ಚಿಂತನೆ ಇದೆ.

  ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳ ಮಾಲಕರೇ ರಾಜಕಾರಣಿಗಳಾಗಿದ್ದಾರೆ. ಅವರಿಂದ ಜನಪರವಾದದ್ದನ್ನು ನಿರೀಕ್ಷಿಸಬಹುದೆ?

ಬಿ.ಎಲ್. ಶಂಕರ್: ಇವತ್ತಿನ ರಾಜಕಾರಣವೇ ಒಂದು ರೀತಿಯ ಉದ್ಯಮ, ವ್ಯಾಪಾರ ಎಂಬ ಹಣೆಪಟ್ಟಿ ಪಡೆದುಕೊಳ್ಳುವ ಸ್ಥಿತಿ ಬಂದಿದೆ. ಮತ, ಧರ್ಮಗಳೂ ವ್ಯಾಪಾರವೇ ಆಗಿವೆ. ವ್ಯಾಪಾರೀಕರಣ ಸರ್ವವ್ಯಾಪಿಯಾಗಿದೆ. ಅದರರ್ಥ ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಿಲ್ಲ. ಜನರ ಬದುಕನ್ನು ನಿರ್ವಹಿಸಲು ಬೇಕಾದ ಕೆಲಸಗಳನ್ನು ಕಾಂಗ್ರೆಸ್ ಉದ್ದಕ್ಕೂ ಮಾಡಿಕೊಂಡು ಬಂದಿದೆ. ಆಶ್ರಯ ಮನೆ, ಆರಾಧನಾ ಯೋಜನೆ, ಬಿಸಿಯೂಟ, ಬಡ್ಡಿರಹಿತ ಸಾಲ, ಭೂಸುಧಾರಣೆ ಕಾನೂನು ಹೀಗೆ ಸಮಾನತೆ ಸಾಧಿಸಲು ಅಥವಾ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದುಕು ಸುಧಾರಿಸಲು ಹಲವಾರು ಯೋಜನೆಗಳನ್ನು ತಂದಿದೆ. ಅದರ ಲಾಭವೂ ಬಹಳ ವರ್ಷ ಕಾಂಗ್ರೆಸ್‌ಗೆ ಆಗಿದೆ.

 ನಿಮ್ಮ ಪಕ್ಷದ ಅಧ್ಯಕ್ಷರು ತಾನು ಕೃಷಿಕ, ಉದ್ಯಮಿ, ಎಜುಕೇಷನಿಸ್ಟ್, ರಾಜಕಾರಣ ಪ್ಯಾಷನ್ ಎನ್ನುತ್ತಾರೆ. ಹೀಗಿರುವಾಗ ಬಡವರಿಗಾಗಿ ಏನನ್ನು ನಿರೀಕ್ಷಿಸಲು ಸಾಧ್ಯ?

 ಬಿ.ಎಲ್. ಶಂಕರ್: ಪಕ್ಷ ತೀರ್ಮಾನ ತೆಗೆದುಕೊಂಡ ಬಳಿಕ ವ್ಯಕ್ತಿ ಮುಖ್ಯವಾಗುವುದಿಲ್ಲ. ಯಾರೇ ನಾಳೆ ಯಾವುದೇ ಸ್ಥಾನಕ್ಕೆ ಬರಲಿ, ಬಾರದೇ ಇರಲಿ, ಪಕ್ಷದ ತೀರ್ಮಾನ ಮುಖ್ಯವಾಗುತ್ತದೆ. ತಾತ್ವಿಕ ಸಂಘರ್ಷ ಬಂದರೆ, ಪಕ್ಷದ ತೀರ್ಮಾನ ಮೇಲುಗೈಯಾಗುವಂತೆ ಪಕ್ಷ ನೋಡಿಕೊಳ್ಳುತ್ತದೆ. ಸಾರ್ವಜನಿಕವಾಗಿ ಪಕ್ಷ ಕೊಟ್ಟ ಭರವಸೆಗಳಿಗೆ ಅವರು ಬದ್ಧರಾಗಲೇಬೇಕಾಗುತ್ತದೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನೀವು ಹೇಳುತ್ತೀರಿ. ಅವರು ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎನ್ನುತ್ತಿದೆ. ಇದಕ್ಕೆ ಏನೆನ್ನುತ್ತೀರಿ?

ಬಿ.ಎಲ್. ಶಂಕರ್: ಭ್ರಷ್ಟಾಚಾರ ಯಾವುದೇ ಕಾಲದಲ್ಲಿ ಇರಲೇ ಇಲ್ಲ ಎಂದು ಹೇಳುವ ಸ್ಥಿತಿಯಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗದ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆಯಾಗುತ್ತ ಬಂದಿದೆ. ಅದಿಲ್ಲದ ಸ್ಥಿತಿ ಯಾವತ್ತೂ ಇರಲಿಲ್ಲ. ಅದರರ್ಥ ಆಗ ಇತ್ತು, ಈಗಲೂ ಯಾಕಿರಬಾರದು ಎಂದಲ್ಲ. ಆದರೆ ಅದು ಈಗಿರುವ ಹಾಗೆ ಕಾನೂನೇ ಆಗಿರುವ ರೀತಿಯಲ್ಲಿ ಯಾವತ್ತೂ ಇರಲಿಲ್ಲ. ಆದರೆ ಶೇ. 40 ಕಮಿಷನ್ ಇದೆಲ್ಲ ಕಾಂಗ್ರೆಸ್ ಶುರು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘ ಶುರು ಮಾಡಿದ್ದು. ಅವರ ಪಕ್ಷದ ದೊಡ್ಡ ನಾಯಕರಾಗಿರುವ ಯತ್ನಾಳ್ ಮತ್ತು ನಿರಾಣಿ ನಡುವೆ ನಡೆದ ವಾದ ವಿವಾದ ಮತ್ತು ಅನೇಕ ಸಂದರ್ಭದಲ್ಲಿ ಅವರ ಪಕ್ಷದ ಮುಖಂಡರೇ ಕೊಟ್ಟ ಹೇಳಿಕೆಗಳು ಪ್ರತಿ ಹೇಳಿಕೆಗಳು ಇವೆಲ್ಲವೂ ಆ ರೀತಿಯ ವಾತಾವರಣ ನಿರ್ಮಾಣ ಮಾಡಿದೆ. ಕಾಂಗ್ರೆಸ್ ವಿರೋಧಪಕ್ಷವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.

 ಕಾಂಗ್ರೆಸ್‌ನಲ್ಲಿ ನಾಯಕರಿದ್ದಾರೆ, ಕಾರ್ಯಕರ್ತರಿಲ್ಲ ಎಂಬ ಆರೋಪವಿದೆ. ಇದಕ್ಕೇನು ಹೇಳುವಿರಿ?

ಬಿ.ಎಲ್. ಶಂಕರ್: ಕಾಂಗ್ರೆಸ್ ಉದ್ದಕ್ಕೂ ಜನಸಮೂಹದ ಚಳವಳಿ ರೂಪದಲ್ಲಿ ಕಾರ್ಯನಿರ್ವಹಿಸಿದೆಯೇ ಹೊರತು ಕಾರ್ಯಕರ್ತರ ಪಡೆ ಕಟ್ಟಿ ಮಾಡಿಲ್ಲ. ಆದರೆ ಈಗ ಪಂಚಾಯತ್ ರಾಜ್ ವ್ಯವಸ್ಥೆ ಬಂದ ನಂತರ, ಮೀಸಲಾತಿಯ ನಂತರ ಎಲ್ಲಾ ಪಕ್ಷಗಳಿಗೂ ಬೇರು ಮಟ್ಟದಲ್ಲಿ ಕಾರ್ಯಕರ್ತರೂ ಇದ್ದಾರೆ, ಮುಖಂಡರೂ ಇದ್ದಾರೆ. ಹಾಗಾಗಿ ಕಾಂಗ್ರೆಸ್ ಮುಕ್ತ ಎನ್ನುತ್ತಿದ್ದಾರಲ್ಲ, ಹಾಗಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪ್ರಮುಖ ಪಕ್ಷವಾಗಿಯೇ ಇರುತ್ತದೆ. ಆಡಳಿತ ಪಕ್ಷವೂ ಆಗಬಹುದು, ಪ್ರತಿಪಕ್ಷವೂ ಆಗಬಹುದು. ಆದರೆ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂಬ ಮನಃಸ್ಥಿತಿಯಲ್ಲಿ ಅವರಿದ್ದರೆ ಆ ಮನಃಸ್ಥಿತಿಯಲ್ಲೇ ಇರಲಿ. ಇಂದಿರಾ ಗಾಂಧಿ ಹತ್ಯೆ ನಂತರ ರಾಜೀವ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆದಾಗ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತ್ತು. ದಾಖಲೆ ಮಾಡಿತ್ತು. ಆಗಲೂ ಕಾಂಗ್ರೆಸ್ ವಿರೋಧ ಪಕ್ಷ ಮುಕ್ತ ಭಾರತ ಇರಬೇಕು ಎಂದು ಹೇಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಎದುರಾಳಿಗಳು ಎಂದು ನೋಡುವುದಕ್ಕಿಂತ ರಾಜಕೀಯ ಶತ್ರುಗಳು ಎಂದು ನೋಡಲಾಗುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ತಕ್ಕ ನಡವಳಿಕೆ ಆಲ್ಲ.

 ಯಾಕೆ ನೀವು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ?

ಬಿ.ಎಲ್. ಶಂಕರ್: ಇಂದಿನ ದಿನಮಾನದ ಚುನಾವಣಾ ರಾಜಕಾರಣಕ್ಕೆ ಹೊಂದಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ. ವಿಪರೀತ ಜಾತಿ ರಾಜಕಾರಣ, ವಿಪರೀತ ಹಣದ ಪ್ರಭಾವ. ಇವೆರಡರಲ್ಲೂ ನಾನು ಅತ್ಯಂತ ದುರ್ಬಲ. ಅದರೊಂದಿಗೆ ರಾಜಿ ಸಾಧ್ಯವಾಗುವುದಿಲ್ಲ. ಅಸಾಧ್ಯವೇನಲ್ಲ. ಹಣ ಗಳಿಕೆ, ಜಾತಿ ರಾಜಕಾರಣ ಎರಡೂ ಬಹಳ ಸುಲಭ. ಆದರೆ ಅದಕ್ಕೆ ನಾನು ಅನೇಕ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಾಲ್ಕು ದಶಕಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಒಂದು ಸೈದ್ಧಾಂತಿಕ ರಾಜಕಾರಣ ಮಾಡಿ, ನನ್ನ ವಿರುದ್ಧ ನಾನೇ ಹೋರಾಟ ಮಾಡಿ, ಅವಕಾಶ ಮತ್ತು ಸಿದ್ಧಾಂತ ಇವೆರಡರಲ್ಲಿ ಸಿದ್ಧಾಂತವನ್ನೇ ಆಯ್ಕೆ ಮಾಡಿಕೊಂಡು ಅವಕಾಶವನ್ನು ಬಿಟ್ಟಂತಹ ವ್ಯಕ್ತಿತ್ವ ನನ್ನದು.

 ನಿಮ್ಮ ಬದ್ಧತೆ, ಸೈದ್ಧಾಂತಿಕ ನಿಲುವು ನಿಮ್ಮನ್ನು ಅಧಿಕಾರ ರಾಜಕಾರಣದಿಂದ ಹೊರಗಿರುವಂತೆ ಮಾಡಿದೆಯೇ?

ಬಿ.ಎಲ್. ಶಂಕರ್: ಖಂಡಿತ. ನನ್ನ ಸೈದ್ಧಾಂತಿಕ ನಿಲುವು ಮತ್ತು ಕೆಲವು ನಿರ್ಧಾರಗಳು ನನ್ನನ್ನು ಅಧಿಕಾರ ರಾಜಕಾರಣದಿಂದ ದೂರ ಇಟ್ಟಿವೆ ಎಂಬುದು ಗೊತ್ತಿದೆ. ನಾನು ಯಾವತ್ತೂ ಪಕ್ಷನಿಷ್ಠನೇ ಹೊರತು ವ್ಯಕ್ತಿನಿಷ್ಠ ಅಲ್ಲ.

 ನಿಮ್ಮ ಸೈದ್ಧಾಂತಿಕತೆ ಮತ್ತು ಅನುಭವವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿಲ್ಲ ಎಂಬ ಮಾತಿಗೆ ಸಹಮತವಿದೆಯೆ?

ಬಿ.ಎಲ್. ಶಂಕರ್: ಕಾಂಗ್ರೆಸ್‌ನ ನಾಯಕತ್ವಕ್ಕೆ ಅನೇಕ ರೀತಿಯ ಇತಿಮಿತಿಗಳು ಇರಬಹುದು. ಇಂದಿನ ದಿನಮಾನದಲ್ಲಿ ಚುನಾವಣೆ ಗೆಲ್ಲುವುದು ಮುಖ್ಯ ಎಂದು ಎಲ್ಲರೂ ಹೇಳುತ್ತಾರೆ. ಗೆಲ್ಲಬಲ್ಲ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತೇವೆ ಎನ್ನುತ್ತಾರೆ. ಬಹುಶಃ ಅವರ ದೃಷ್ಟಿಯಲ್ಲಿ ನನಗೆ ಗೆಲ್ಲಬಲ್ಲ ಸಾಮರ್ಥ್ಯ ಕಡಿಮೆ.

 ಪರಿಷತ್ ಮೂಲಕವಾದರೂ ನಿಮ್ಮಂಥವರನ್ನು ಉಳಿಸಿಕೊಳ್ಳಬೇಕು. ಅದೇಕೆ ಆಗುತ್ತಿಲ್ಲ?

ಬಿ.ಎಲ್. ಶಂಕರ್: ಕೆಲವು ಸಲ ಸಾಮಾಜಿಕ ನ್ಯಾಯವನ್ನು ಕೊಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನನಗಿಂತ ಸಮರ್ಥರಾದವರು ನನಗಿಂತ ಅವಕಾಶ ವಂಚಿತರಾದವರು ಬಹಳ ಜನ ಇದ್ದಾರೆ. ಕುಟುಂಬ, ಸಂಘಟನೆ ಎಲ್ಲ ಕಡೆಯೂ ಹೀಗಾಗುತ್ತದೆ. ಅದಕ್ಕಾಗಿ ವಿಷಾದವೇನಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಬಹಳ ದೊಡ್ಡವರೊಂದಿಗೆ ಕೆಲಸ ಮಾಡಿದ್ದೇನೆ. ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ.

share
ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ
Next Story
X