ಬಿಜೆಪಿಗರ ಗೋವಿನ ವೇಷದ ನಾಟಕ ಆ ಮೂಕ ಪ್ರಾಣಿಗಳಿಗೂ ಅರಿವಾಗಿದೆ: ಎಚ್.ಸಿ ಮಹದೇವಪ್ಪ ಟೀಕೆ

ಬೆಂಗಳೂರು: 'ಇರೋ ಬರೋ ಗೋಮಾಳಗಳನ್ನೆಲ್ಲಾ ಆಕ್ರಮಿಸಿ RSS ಸಂಸ್ಥೆಗಳಿಗೆ ಕೊಡುತ್ತಿರುವ ಬಿಜೆಪಿ ಪಕ್ಷದವರು Cow Hug Day ಅಂತ ಮಾಡಿ ತಮ್ಮ ಭೂ ಹಗರಣಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಆರೋಪಿಸಿದ್ದಾರೆ.
ಪ್ರೇಮಿಗಳ ದಿನದಂದು (ಫೆ.14) ಗೋವುಗಳನ್ನು ಅಪ್ಪಿಕೊಳ್ಳಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಸೂಚನೆ ನೀಡಿದ್ದು, ಈ ಸಂಬಂಧ ಗುರುವಾರ ಟ್ವೀಟ್ ಮಾಡಿರುವ ಎಚ್.ಸಿ ಮಹದೇವಪ್ಪ, ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
''ಗೋವುಗಳ ಆಹಾರಕ್ಕೆ ಬೇಕಾದ ಗೋಮಾಳಗಳನ್ನು ಅಕ್ರಮವಾಗಿ ಲಪಟಾಯಿಸಿ, ಗೋಮಾಂಸ ರಫ್ತಿನಲ್ಲಿ ದೇಶವನ್ನು 2 ಸ್ಥಾನಕ್ಕೆ ಏರಿಸಿರುವ ಬಿಜೆಪಿಗರ ಗೋವಿನ ಪ್ರೀತಿಯನ್ನು ಕಂಡರೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ. ಬಿಜೆಪಿಗರೇ ನಿಮ್ಮ ಗೋವಿನ ವೇಷದ ನಾಟಕ ಆ ಮೂಕ ಪ್ರಾಣಿಗಳಿಗೂ ಅರಿವಾಗಿದೆ Cow Hug Day ಅಂತ ಹೋಗಿ ಸುಮ್ಮನೇ ಯಾಕೆ ಒದೆಸಿಕೊಳ್ಳುವಿರಿ'' ಎಂದು ವ್ಯಂಗ್ಯವಾಡಿದ್ದಾರೆ.
ಗೋವುಗಳ ಆಹಾರಕ್ಕೆ ಬೇಕಾದ ಗೋಮಾಳಗಳನ್ನು ಅಕ್ರಮವಾಗಿ ಲಪಟಾಯಿಸಿ, ಗೋಮಾಂಸ ರಫ್ತಿನಲ್ಲಿ ದೇಶವನ್ನು 2 ಸ್ಥಾನಕ್ಕೆ ಏರಿಸಿರುವ ಬಿಜೆಪಿಗರ ಗೋವಿನ ಪ್ರೀತಿಯನ್ನು ಕಂಡರೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ
— Dr H.C.Mahadevappa (@CMahadevappa) February 9, 2023
ಬಿಜೆಪಿಗರೇ ನಿಮ್ಮ ಗೋವಿನ ವೇಷದ ನಾಟಕ ಆ ಮೂಕ ಪ್ರಾಣಿಗಳಿಗೂ ಅರಿವಾಗಿದೆ
Cow Hug Day ಅಂತ ಹೋಗಿ ಸುಮ್ಮನೇ ಯಾಕೆ ಒದೆಸಿಕೊಳ್ಳುವಿರಿ pic.twitter.com/I2xKjAhUUA
ಇರೋ ಬರೋ ಗೋಮಾಳಗಳನ್ನೆಲ್ಲಾ ಆಕ್ರಮಿಸಿ RSS ಸಂಸ್ಥೆಗಳಿಗೆ ಕೊಡುತ್ತಿರುವ @BJP4Karnataka ಪಕ್ಷದವರು Cow Hug Day ಅಂತ ಮಾಡಿ ತಮ್ಮ ಭೂ ಹಗರಣಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ pic.twitter.com/Lg3MCBOvEq
— Dr H.C.Mahadevappa (@CMahadevappa) February 9, 2023







