ವಿಧಾನಸೌಧದಲ್ಲಿ 2 ವರ್ಷದಿಂದ ಕೆಲಸ ಮಾಡದ ಸ್ಕ್ಯಾನಿಂಗ್ ಯಂತ್ರಗಳು: ಸರ್ಕಾರ ಮೇಲೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್

ಬೆಂಗಳೂರು: ವಿಧಾನಸೌಧದೊಳಗೆ ಪ್ರವೇಶಿಸುವ ವೇಳೆ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್ ಮಾಡುವ ಯಂತ್ರಗಳು ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ @INCKarnataka ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ , 'ವಿಧಾನಸೌಧ ಸರ್ಕಾರವೇ ಕೆಲಸ ಮಾಡುತ್ತಿಲ್ಲ, ಇನ್ನು ಸ್ಕ್ಯಾನಿಂಗ್ ಯಂತ್ರಗಳು ಕೆಲಸ ಮಾಡುತ್ತವೆಯೇ!?' ಎಂದು ವ್ಯಂಗ್ಯವಾಡಿದೆ.
''ವ್ಯಾಪಾರಸೌಧದಲ್ಲಿ ನಡೆಯುವ ಅವ್ಯವಹಾರ ಸುಗಮವಾಗಲಿ ಎಂದು ಸ್ಕ್ಯಾನಿಂಗ್ ಯಂತ್ರಗಳನ್ನು ಹಾಳುಗೆಡವಲಾಗಿದೆಯೇ? ಇತ್ತೀಚಿಗೆ ವಿಧಾನಸೌಧದಲ್ಲಿ ಸಿಕ್ಕಿಬಿದ್ದ 10 ಲಕ್ಷ ಹಣ ಈ ಅವ್ಯವಹಾರಕ್ಕೆ ಪುಷ್ಠಿ ಕೂಡುತ್ತದೆ'' ಎಂದು ಶಂಕೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ನಿಂದ 10.5 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ವಿಧಾನಸೌಧ ಸರ್ಕಾರವೇ ಕೆಲಸ ಮಾಡ್ತಿಲ್ಲ ಇನ್ನು ಸ್ಕ್ಯಾನಿಂಗ್ ಯಂತ್ರಗಳು ಕೆಲಸ ಮಾಡುತ್ತವೆಯೇ!?
— Karnataka Congress (@INCKarnataka) February 9, 2023
ವ್ಯಾಪಾರಸೌಧದಲ್ಲಿ ನಡೆಯುವ ಅವ್ಯವಹಾರ ಸುಗಮವಾಗಲಿ ಎಂದು
ಸ್ಕ್ಯಾನಿಂಗ್ ಯಂತ್ರಗಳನ್ನು ಹಾಳುಗೆಡವಲಾಗಿದೆಯೇ?
ಇತ್ತೀಚಿಗೆ ವಿಧಾನಸೌಧದಲ್ಲಿ ಸಿಕ್ಕಿಬಿದ್ದ 10 ಲಕ್ಷ ಹಣ ಈ ಅವ್ಯವಹಾರಕ್ಕೆ ಪುಷ್ಠಿ ಕೂಡುತ್ತದೆ! pic.twitter.com/Djl3YkofOF







