ತಲಪಾಡಿ ಬದ್ರಿಯಾ ಜುಮಾ ಮಸೀದಿ: ಫೆ. 15, 16ರಂದು ಸ್ವಲಾತ್ ವಾರ್ಷಿಕ, ಮತಪ್ರಭಾಷಣ

ಬಂಟ್ವಾಳ: ತಲಪಾಡಿ ಬದ್ರಿಯಾ ಜುಮಾ ಮಸೀದಿ ಮತ್ತು ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ. 15, 16ರಂದು ಸ್ವಲಾತ್ ವಾರ್ಷಿಕ ಮತ್ತು 2 ದಿನಗಳ ಮತಪ್ರಭಾಷಣ ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆ. 15ರಂದು ರಾತ್ರಿ 8:30ಕ್ಕೆ ಬಿಜೆಎಂಟಿಯ ಖತೀಬರಾದ ಹಂಝ ಫೈಝಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾಸರಗೋಡಿನ ಝುಬೈರಿ ದಾರಿಮಿ ಪೈಕಂ ಮತಪ್ರಭಾಷಣ ಮಾಡುವರು. ಫೆ. 16ರಂದು ಮಗರಿಬ್ ನಮಾಝಿನ ಬಳಿಕ ಕೊಡಗಿನ ಮೊಯ್ದೀನ್ ಫೈಝಿ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಬಳಿಕ ಅಂತಾರಾಷ್ಟ್ರೀಯ ಖ್ಯಾತ ವಾಗ್ಮಿ ಹಾಫಿಲ್ ಅಬೂ ಶಮ್ಮಾಸ್ ಬಾಖವಿ ಮತಪ್ರಭಾಷಣ ಮಾಡುವರು. ಅಸ್ಸಯ್ಯಿದ್ ಸಫ್ವಾನ್ ತಂಙಳ್ ಏಳುಮಲೆ ಅವರು ದುಆ ಆಶೀರ್ವಚನ ಮಾಡುವರು ಎಂದು ತಲಪಾಡಿ ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.
Next Story