ವಿಟ್ಲ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ವಿಟ್ಲ: ಪ್ರಕರಣಯೊಂದರಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಕೇರಳ ರಾಜ್ಯದ ಪಯ್ಯನ್ನೂರು ಜಿಲ್ಲೆಯ ಕುಂಞಮಂಗಲ ಪಾಣಚೇರಿ ನಿವಾಸಿ ಸುಜಾತ(42) ಬಂಧಿತ ಮಹಿಳೆ. ಈಕೆಯ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ 2013ರಲ್ಲಿ ಪ್ರಕರಣ ದಾಖಲಾಗಿತ್ತು.
ಈಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ LOCಯನ್ನು ತೆರೆಯಲಾಗಿತ್ತು. ಆರೋಪಿ ನಿನ್ನೆ ವಿದೇಶದಿಂದ ರಾತ್ರಿ 2-30 ಗಂಟೆಗೆ ಕೇರಳ ರಾಜ್ಯದ ಕೋಝಿಕೊಡ್ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಇಮಿಗ್ರೇಷನ್ ಅಧಿಕಾರಿಯವರು ಬಂಧಿಸಿ ಮಾಹಿತಿಯನ್ನು ನೀಡಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ. ಅವರ ಮಾಹಿತಿಯಂತೆ ವಿಟ್ಲ ಪೊಲೀಸ್ ಠಾಣಾ ಎ.ಎಸ್.ಐ. ಜಯರಾಮ ಮತ್ತು ಮಹಿಳಾ ಸಿಬ್ಬಂದಿ ಸಂಗೀತ ಎಂಬವರು ಕೇರಳ ರಾಜ್ಯಕ್ಕೆ ತೆರಳಿ ಆರೋಪಿತೆ ಸುಜಾತಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story