'ನೀವು ಊಟಕ್ಕೋದ್ರೂ ನಾನ್ ಭಾಷಣ ನಿಲ್ಸಲ್ಲ..': ವೈರಲ್ ಆಯ್ತು ಬಿಜೆಪಿ ರಾಜ್ಯಾಧ್ಯಕ್ಷರ ವಿಡಿಯೋ

ಬೆಂಗಳೂರು: ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾಷಣದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗುತ್ತಿದೆ.
ಫೆಬ್ರವರಿ 6ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ವಿಜಯ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿತ್ತಿದ್ದ ವೇಳೆಗೆ ಕಾರ್ಯಕರ್ತರು ಊಟಕ್ಕೆ ಹೊರಡುತ್ತಾರೆ. ತಕ್ಷಣ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ''ರಾಜ್ಯಾಧ್ಯಕ್ಷರ ಭಾಷಣ ಮುಗಿಯದೇ ಯಾರೂ ಊಟಕ್ಕೆ ಹೋಗುವಂತಿಲ್ಲ'' ಎಂದು ಮೈಕ್ನಲ್ಲಿ ಕಾರ್ಯಕರ್ತರಿಗೆ ಸೂಚನೆ ನೀಡುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ''ನೀವು ಊಟಕ್ಕೋದ್ರೂ ನಾನ್ ಭಾಷಣ ನಿಲ್ಸಲ್ಲ. ನಂದು ಭಾಷಣ ಪೂರ್ತಿ ಮಾಡಿಯೇ ಕೂರೋದು'' ಎಂದಿದ್ದಾರೆ.
ಇದೀಗ ಈ ವಿಡಿಯೋ ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸ್ಯಾಪ್ ಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
''ಬಿಜೆಪಿ ಅಧ್ಯಕ್ಷರ ಭಾಷಣ ತಿರಸ್ಕರಿಸಿದ ಹಾಗೆ ರಾಜ್ಯ ಬಿಜೆಪಿಯ ಬಿಜೆಪಿಯನ್ನು ತಿರಸ್ಕರಿಸುವ ಕಾಲ ದೂರ ಇಲ್ಲ'' ಎಂದು
ಅರ್ಜುನ್ ಗೌಡ ಹಾಸನ @arjungowda_002 ಎಂಬವರು ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
''ಅಧ್ಯಕ್ಷರ ಭಾಷಣ ಕೇಳಿದ್ರೆ ಮಾತ್ರ ಊಟ ಅಂತೆ, ಇಷ್ಟು ಗತಿಗೆಟ್ಟ ಪರಿಸ್ಥಿತಿ'' ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.
''ಬಿಜೆಪಿ ಕಾರ್ಯಕರ್ತರಿಗೆ ಒಂದು ಪೋಸ್ಟ್ ಗೆ ಕೇವಲ 2 ರೂಪಾಯಿ ಕೊಟ್ಟು, ನಾಯಕರ ಭಾಷಣ ಕೇಳಿದ ಮೇಲೆನೇ ಊಟ ಕೊಡೋದು ಅನ್ನೋದು, ಹಸಿವಿನಲ್ಲಿರುವ ಬಡವನ ಮೇಲೆ ದರ್ಪ ತೋರುವ ಬಿಜೆಪಿಗರ ಬ್ರಾಹ್ಮಣ್ಯದ ಮನಸ್ಥಿತಿ ತೋರುತ್ತದೆ ಜೊತೆಗೆ ಬಿಜೆಪಿ ಕಾರ್ಯಕರ್ತರ ಗುಲಾಮಿತನ ಕೂಡ ಎದ್ದು ಕಾಣುತ್ತದೆ'' ಎಂದು ದೀಪು ಗೌಡ @DEEPUVAJRAMUNI ಎಂಬವರು ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಇಂದು ವಿಜಯ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲಾಯಿತು.
— Nalinkumar Kateel (@nalinkateel) February 6, 2023
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @CTRavi_BJP, ಶಾಸಕರಾದ ಶ್ರೀ @kumarbangarappa,ಜಿಲ್ಲಾಧ್ಯಕ್ಷರಾದ ಶ್ರೀ ಟಿ ಡಿ ಮೇಘರಾಜ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. pic.twitter.com/PfuAOmmPro
ಪಿಟಿಲ್ ಕುಯ್ಯುವ ಭಾಷಣ ಕೇಳೋಕೆ ಆಗದೆ ಎದ್ದು ಹೋಗುತ್ತಿರುವ ಬಿಜೆಪಿ ಕಾರ್ಯಕರ್ತರು pic.twitter.com/bEuIQhMttt
— Che_ಕೃಷ್ಣ (@ChekrishnaCk) February 8, 2023
ಬಿಜೆಪಿ ಕಾರ್ಯಕರ್ತರಿಗೆ ಒಂದು ಪೋಷ್ಟಿಗೆ ಕೇವಲ 2 ರೂಪಾಯಿ ಕೊಟ್ಟು, ನಾಯಕರ ಭಾಷಣ ಕೇಳಿದ ಮೇಲೆನೇ ಊಟ ಕೊಡೋದು ಅನ್ನೋದು, ಹಸಿವಿನಲ್ಲಿರುವ ಬಡವನ ಮೇಲೆ ದರ್ಪ ತೋರುವ ಬಿಜೆಪಿಗರ ಬ್ರಾಹ್ಮಣ್ಯದ ಮನಸ್ಥಿತಿ ತೋರುತ್ತದೆ ಜೊತೆಗೆ ಬಿಜೆಪಿ ಕಾರ್ಯಕರ್ತರ ಗುಲಾಮಿತನ ಕೂಡ ಎದ್ದು ಕಾಣುತ್ತದೆ.#BJPFails #slavedog #BjpGulams pic.twitter.com/oD2Xg6X0tE
— DEEPU GOWDRU (@DEEPUVAJRAMUNI) February 7, 2023