ಕೇಂದ್ರ ಸಚಿವ ವಿ.ಮುರಳೀಧರನ್ ನಿವಾಸಕ್ಕೆ ಕಲ್ಲೆಸೆತ

ತಿರುವನಂತಪುರಂ,ಫೆ.9: ಅಜ್ಞಾತ ವ್ಯಕ್ತಿಗಳ ಗುಂಪೊಂದು ಕೇಂದ್ರ ಸಚಿವ ವಿ. ಮುರಳೀಧರನ್(V. Muraleedharan) ಅವರ ತಿರುವನಂತಪುರದ ನಿವಾಸದ ಮೇಲೆ ಕಲ್ಲೆಸೆದಿದ್ದು, ಕಿಟಕಿ ಗಾಜುಗಳಿಗೆ ಹಾನಿಯುಂಟು ಮಾಡಿದ್ದಾರೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಊಳೂರ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿನ ಕಾರು ನಿಲುಗಡೆ ಸ್ಥಳದ ಬಳಿಯಿರುವ ಕಿಟಕಿ ಗಾಜು ಕಲ್ಲೆಸೆತದಿಂದ ಒಡೆದುಹೋಗಿರುವುದನ್ನು ಅವರ ಕಚೇರಿ ಸಿಬ್ಬಂದಿ ಗುರುವಾರ ಬೆಳಗ್ಗೆ 11 ಗಂಟೆಗೆ ಕಂಡಿದ್ದರು. ಸಚಿವರ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನನೆ ನಡೆಸಿದರು.
ಘಟನೆಯ ಹಿಂದಿರುವ ದುಷ್ಕರ್ಮಿಳನ್ನು ಸೆರೆಹಿಡಿಯಲು ಹಾಗೂ ಅವರ ಉದ್ದೇಶವನ್ನು ಕಂಡುಹಿಡಿಯಲು ತನಿಖೆಯನ್ನು ಆರಂಭಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
Next Story





