ಕಬೀರ್ ಕಾಂತಿಲಗೆ ಮಾಧ್ಯಮ ಅಕಾಡೆಮಿ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ
ಬೆಂಗಳೂರು, ಫೆ.9: 2019, 2020, 2021 ಹಾಗೂ 2022ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗುರುವಾರ ಪ್ರಕಟಗೊಂಡಿದ್ದು, 124 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಟಿವಿ 9 ಕನ್ನಡ ವಾಹಿನಿಯ ಕಬೀರ್ ಕಾಂತಿಲ ಅವರು ಮಾಧ್ಯಮ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಹೊಸಂಗಡಿ ಸಮೀಪದ ಮಜೀರ್ಪಲ್ಲ ನಿವಾಸಿಯಾಗಿರುವ ಕಬೀರ್ ಅವರು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (Masters in MCJ) ಪಡೆದಿದ್ದಾರೆ.
ಇವರು 2004ರಿಂದ 2005ರ ವರೆಗೆ 'ವಾರ್ತಾ ಭಾರತಿ' ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. 2006ರಿಂದ ಟಿವಿ9 ಕನ್ನಡದಲ್ಲಿ ಕಾರ್ಯಕ್ರಮಗಳ ಸಂಪಾದಕರಾಗಿ (Editor Programmes) ಸೇವೆ ಸಲ್ಲಿಸುತ್ತಿದ್ದಾರೆ.
Next Story