ಶಿರ್ವ: ಪಿಕ್‌ಅಪ್ ವಾಹನ ಢಿಕ್ಕಿ; ಬೈಕ್ ಸವಾರ ಮೃತ್ಯು

ಶಿರ್ವ: ಪಿಕ್‌ಅಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಫೆ.9ರಂದು ಬೆಳಗ್ಗೆ ಮೂಡುಬೆಳ್ಳೆ -ಕಟ್ಟಿಂಗೇರಿ ರಸ್ತೆಯ ಗಣಪನಕಟ್ಟೆ ಬಳಿ ನಡೆದಿದೆ.
ಮೃತರನ್ನು ಕಲ್ಯಾ ಗ್ರಾಮದ ಕುಂಟಾಡಿ ಕೆಂಪುಗುಡ್ಡೆ ನಿವಾಸಿ ಶಂಕರ ನಾಯ್ಕ್ ಎಂಬವರ ಮಗ ಹರೀಶ್ ನಾಯ್ಕ್(36) ಎಂದು ಗುರುತಿಸಲಾಗಿದೆ.
ಇವರು ಉಡುಪಿ ಸಂತೆಕಟ್ಟೆಯಲ್ಲಿರುವ ಖಾಸಗಿ ಕಂಪೆನಿಯಲ್ಲಿ ಫಿಟ್ಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಕರ್ತವ್ಯ ನಿರ್ವಹಿಸಿ ಹೊಸದಾಗಿ ಖರೀದಿಸಿದ ಬೈಕಿನಲ್ಲಿ ಮನೆ ಕಡೆಗೆ ಬರುತ್ತಿದ್ದರು.
ಈ ವೇಳೆ ಕಟ್ಟಿಂಗೇರಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಹೋಗುತ್ತಿದ್ದ ಪಿಕ್ ಅಪ್ ವಾಹನ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹರೀಶ್, ಮಣಿಪಾಲ ಆಸ್ಪತ್ರೆಯ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story