ದ.ಕ. ಜಿಲ್ಲೆಯ 7 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಮಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ನೀಡಲಾಗುವ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ದ.ಕ. ಜಿಲ್ಲೆಯ 7 ಮಂದಿ ಆಯ್ಕೆಯಾಗಿದ್ದಾರೆ.
ಇದರ ಜೊತೆಗೆ ದ.ಕ. ಜಿಲ್ಲೆ ಮೂಲದ ಸದ್ಯ ಬೆಂಗಳೂರಿನಲ್ಲಿ ವೃತ್ತಿ ಸಂಬಂಧ ನೆಲೆಸಿರುವ 6 ಮಂದಿಗೆ ಪ್ರಶಸ್ತಿ ಸಂದಿವೆ.
ಪ್ರಶಸ್ತಿಗೆ ಆಯ್ಕೆಯಾದವರ ವಿವರ ಇಂತಿವೆ.
ದ.ಕ.ಜಿಲ್ಲೆಯ ಆನಂದ ಶೆಟ್ಟಿ (ಹೊಸದಿಗಂತ), ಆರ್.ರಾಮಕೃಷ್ಣ (ಸಂಯುಕ್ತ ಕರ್ನಾಟಕ), ಪಿ.ಬಿ.ಹರಿಪ್ರಸಾದ್ ರೈ(ವಿಜಯವಾಣಿ) , ಬಿ.ರವೀಂದ್ರ ಶೆಟ್ಟಿ(ವಿಜಯ ಕರ್ನಾಟಕ), ಗುರುವಪ್ಪ ಬಾಳೆಪುಣಿ(ಹೊಸದಿಗಂತ), ಪ್ರದೀಶ್.ಎಚ್.ಮರೋಡಿ(ಪ್ರಜಾವಾಣಿ) , ಶ್ರೀನಿವಾಸ ನಾಯಕ್ ಇಂದಾಜೆ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ದ.ಕ. ಮೂಲದ ಸುಕನ್ಯ (ಟಿವಿ 9), ಎಸ್.ರವಿಪ್ರಕಾಶ್(ಪ್ರಜಾವಾಣಿ), ಸುಧಾಕರ ದರ್ಬೆ(ಕನ್ನಡ ಪ್ರಭ), ಗಿರೀಶ್ ರಾವ್(ಉದಯವಾಣಿ), ಜ್ಯೋತಿ ಇರ್ವತ್ತೂರು, ಸುರೇಶ್ ಬೆಳಗಜೆ ಇವರಿಗೆ ಪ್ರಶಸ್ತಿ ಲಭಿಸಿದೆ.
Next Story