ಮೂರು ಉಪಗ್ರಹಗಳೊಂದಿಗೆ ಹೊಸ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)(ISRO) ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎರಡನೇ ಆವೃತ್ತಿಯ ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಸ್‌ಎಲ್‌ವಿ) ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಗಸ್ಟ್ 9 ರಂದು ಎಸ್‌ಎಸ್‌ಎಲ್‌ವಿ ಯ ಮೊದಲ ಪರೀಕ್ಷಾರ್ಥ ಹಾರಾಟವು ಭಾಗಶಃ ವೈಫಲ್ಯದಲ್ಲಿ ಕೊನೆಗೊಂಡಿತ್ತು, ಏಕೆಂದರೆ ರಾಕೆಟ್ ಅದರ ಉಪಗ್ರಹ ಪೇಲೋಡ್ ಅನ್ನು ಅವುಗಳ ಉದ್ದೇಶಿತ ಕಕ್ಷೆಗಳಲ್ಲಿ ಸೇರಿಸಲು ವಿಫಲವಾಗಿ್ತು.
ಎಸ್‌ಎಸ್‌ಎಲ್‌ವಿ -ಡಿ2 ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 9:18 ಕ್ಕೆ ಮೂರು ಉಪಗ್ರಹಗಳೊಂದಿಗೆ ಆಕಾಶಕ್ಕೆ ಹಾರಿತು. ಇದರಲ್ಲಿ ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಉಪಗ್ರಹವೂ ಸೇರಿದೆ.
"ಮಿಷನ್ ಯಶಸ್ವಿಯಾಗಿ ನೆರವೇರುತ್ತದೆ. SSLV-D2 ರಾಕೆಟ್ EOS-07, Janus-1, ಹಾಗೂ AzaadiSAT-2 ಅನ್ನು ತಮ್ಮ ಉದ್ದೇಶಿತ ಕಕ್ಷೆಗಳಲ್ಲಿ ಇರಿಸಿದೆ" ಎಂದು ಬಾಹ್ಯಾಕಾಶ ಸಂಸ್ಥೆ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ ಯಶಸ್ವಿ ಉಡಾವಣೆ ಕುರಿತು ಪ್ರಕಟಿಸಿದೆ.
ಕಕ್ಷೆಗೆ ಸೇರಿಸಲಾದ ಮೂರು ಉಪಗ್ರಹಗಳೆಂದರೆ: ಇಸ್ರೋದ EOS -07, ಅಮೆರಿಕ ಮೂಲದ ಸಂಸ್ಥೆ ಆಂಟಾರಿಸ್‌ನ Janus-1 ಹಾಗೂ ಚೆನ್ನೈ ಮೂಲದ ಸ್ಪೇಸ್‌ಕಿಡ್ಜ್‌ನ AzaadiSAT-2.





