ರಾಜ್ಯ ಬಜೆಟ್ ಅಧಿವೇಶನ ಆರಂಭ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಭಾಷಣ

ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ವಿಧಾನಸೌಧಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದ್ದಾರೆ.
ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿರುವ ರಾಜ್ಯಪಾಲನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಜೆ.ಸಿ.ಮಾಧುಸ್ವಾಮಿ, ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಸ್ವಾಗತಿಸಿದರು.
''ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. 1.15 ಲಕ್ಷ ಹೆಕ್ಟೇರ್ ವಿಸ್ತೀರ್ಣ ಹಿಪ್ಪು ನೇರಳೆ ಬೇಸಾಯವಿದ್ದು, 1.38 ಲಕ್ಷ ರೈತ ಕುಟುಂಬ ರೇಷ್ಮೆ ಕೃಷಿ ಮಾಡುತ್ತಿದೆ. ವಾರ್ಷಿಕ 11,191 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆ ಮಾಡಲಾಗ್ತಿದೆ. ಗೋ ಸಂಪತ್ತು ರಕ್ಷಣೆಗಾಗಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಸರ್ಕಾರದಿಂದ 100 ಸರ್ಕಾರಿ ಗೋ ಶಾಲೆ ನಿರ್ಮಿಸಲಾಗುತ್ತಿದೆ. ಖಾಸಗಿ ಗೋ ಶಾಲೆಯಲ್ಲಿರೋ ಗೋ ರಕ್ಷಣೆಗೆ ಖಾಸಗಿ ಸಹಭಾಗಿತ್ವ ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆ ಆರಂಭಿಸಿದ್ದು, ಸರ್ಕಾರಿ ನೌಕರರು 26.97 ಕೋಟಿ ದೇಣಿಗೆ ನೀಡಿದ್ದಾರೆ''
- ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲರು







