ವಿಜಯಪುರ | ಯುವತಿ ಜೊತೆ ಅಸಭ್ಯ ವರ್ತನೆ ಆರೋಪ; ಅವಳಿ ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ವಿಜಯಪುರ, ಫೆ.10: ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಅವಳಿ ಸಹೋದರರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿರುವ ಘಟನೆಯೊಂದು ವಿಜಯಪುರ ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ವರದಿಯಾಗಿದೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತೇಜು ಚೌಹಾಣ್ ಮತ್ತು ರಾಜು ವಿಠಲ್ ಚೌಹಾಣ್ ಎಂಬ ಯುವಕರಿಬ್ಬರು ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ತೆರಳಿದ್ದ ಹೆಗಡಿಹಾಳ ತಾಂಡಾದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ಗ್ರಾಮದ ಲಂಬಾಣಿ ಸಮುದಾಯದ ಮುಖಂಡರು ಯುವಕರಿಬ್ಬರನ್ನು ಕರೆಸಿ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ.
ಪ್ರಕರಣ ದಾಖಲು:
ಘಟನೆ ಸಂಬಂಧ ರಾಜು ವಿಠಲ್ ಚೌಹಾಣ್ ನೀಡಿದ ದೂರಿನನ್ವಯ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 20 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Next Story