ನಕ್ಷತ್ರಗಳಿಗಿಂತ ಬೆಂಗಳೂರಿನ ರಸ್ತೆಯಲ್ಲಿರುವ ಗುಂಡಿಗಳೇ ಜಾಸ್ತಿ: ಕಾಂಗ್ರೆಸ್
'ನಗರದ ಅಭಿವೃದ್ಧಿ ನೋಡಲು ಬನ್ನಿ' ಎಂದು ಆಹ್ವಾನಿಸಿದ್ದ ಸಿಎಂಗೆ ತಿರುಗೇಟು

ಬೆಂಗಳೂರು: ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ 'ಬೆಂಗಳೂರು ನಗರದ ಅಭಿವೃದ್ಧಿ ನೋಡಲು ಬನ್ನಿ' ಎಂದು ವಿರೋಧ ಪಕ್ಷಗಳನ್ನ ಆಹ್ವಾನಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ @BSBommai, ಪ್ರತಿದಿನ ನಿಮ್ಮ "ಗುಂಡಿ ಅಭಿವೃದ್ಧಿ"ಯ ದರ್ಶನವಾಗುತ್ತಿದೆ, ತಾವೇ ಒಮ್ಮೆ ನೋಡಲು ಬಂದರೆ ಚೆನ್ನಾಗಿರುತ್ತದೆ. ಆಕಾಶದಲ್ಲಿನ ನಕ್ಷತ್ರಗಳಿಗಿಂತ ಬೆಂಗಳೂರಿನ ರಸ್ತೆಯಲ್ಲಿರುವ ಗುಂಡಿಗಳೇ ಜಾಸ್ತಿ ಇವೆ. ಹೀಗಿರುವಾಗ "ಅಭಿವೃದ್ಧಿ" ಎಂಬ ಪದ ಹೇಳಲು ನೈತಿಕತೆ ಇದೆಯೇ?'' ಎಂದು ಪ್ರಶ್ನೆ ಮಾಡಿದೆ.
ಇತ್ತೀಚೆಗೆ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ''ಮೂರೂವರೆ ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಅನ್ನು ಬೆಂಗಳೂರು ನಗರ ಅಭಿವೃದ್ಧಿಗೆ ಕೊಟ್ಟಿದ್ದೇವೆ. ನಗರವು ಅಭಿವೃದ್ಧಿ ಪಥದಲ್ಲಿಯೇ ಸಾಗಿದೆ. ನಕಾರಾತ್ಮಕ ಮಾತನಾಡುವ ಎಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇವೆ. ಬನ್ನಿ, ಬೆಂಗಳೂರನ್ನು ನೋಡಿ ಹೇಗೆ ಅಭಿವೃದ್ಧಿಯಾಗಿದೆ'' ಎಂದು ವಿರೋಧ ಪಕ್ಷಗಳನ್ನ ಆಹ್ವಾನಿಸಿದ್ದರು.
ಬೆಂಗಳೂರಿನ ಅಭಿವೃದ್ಧಿ ನೋಡಲು ಬನ್ನಿ ಎಂದು ಸವಾಲು ಹಾಕಿದ @BSBommai ಅವರೇ,
— Karnataka Congress (@INCKarnataka) February 10, 2023
ಪ್ರತಿದಿನ ನಿಮ್ಮ "ಗುಂಡಿ ಅಭಿವೃದ್ಧಿ"ಯ ದರ್ಶನವಾಗುತ್ತಿದೆ, ತಾವೇ ಒಮ್ಮೆ ನೋಡಲು ಬಂದರೆ ಚೆನ್ನಾಗಿರುತ್ತದೆ!
ಆಕಾಶದಲ್ಲಿನ ನಕ್ಷತ್ರಗಳಿಗಿಂತ ಬೆಂಗಳೂರಿನ ರಸ್ತೆಯಲ್ಲಿರುವ ಗುಂಡಿಗಳೇ ಜಾಸ್ತಿ ಇವೆ.
ಹೀಗಿರುವಾಗ "ಅಭಿವೃದ್ಧಿ" ಎಂಬ ಪದ ಹೇಳಲು ನೈತಿಕತೆ ಇದೆಯೇ? pic.twitter.com/cjkVjbGC15







