ಭಾರತಕ್ಕೆ ಆಗಮಿಸುವ ಚೀನಾ,ಜಪಾನ್ ಸಹಿತ 6 ದೇಶಗಳ ಪ್ರಯಾಣಿಕರಿಗೂ ಕೋವಿಡ್ ಪರೀಕ್ಷೆಯ ಅಗತ್ಯವಿಲ್ಲ

ಹೊಸದಿಲ್ಲಿ,ಫೆ.2: ಚೀನಾ (ಹಾಂಕಾಂಗ್ ಸಹಿತ),ಜಪಾನ್, ದಕ್ಷಿಣ ಕೊರಿಯ, ಸಿಂಗಾಪುರ ಹಾಗೂ ಥೈಲ್ಯಾಂಡ್‌ಗಳಿಂದ ಭಾರತಕ್ಕೆ ಆಗಮಿಸುವ ಸಂದರ್ಶಕರು, ಫೆಬ್ರವರಿ ತಮ್ಮ ಆಗಮನ ಪೂರ್ವದ ಕೋವಿಡ್-19 ಪರೀಕ್ಷಾ ವರದಿಯನ್ನು ಸಲ್ಲಿಸುವ ಅಗತ್ಯವಿಲ್ಲ ಮತ್ತು ಅವರು ‘ಏರ್ ಸುವಿಧಾ’ ಆನ್‌ಲೈನ್ ಪೋರ್ಟಲ್ ಮೂಲಕ ಸ್ವಯಂ- ಆರೋಗ್ಯ ಘೋಷಣೆಯನ್ನು ಅಪ್‌ಲೋಡ್ ಮಾಡಿದರೆ ಸಾಕೆಂದು ಕೇಂದ್ರ ಸರಕಾರ(Central Govt)ವು ಶುಕ್ರವಾರ ತಿಳಿಸಿದೆ.
ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಕೋವಿಡ್-19 ಪ್ರಕರಣಗಳ ಇಳಿಕೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಆಗಮನಕಾರರಿಗಾಗಿನ ಮಾರ್ಗದರ್ಶಿ ಸೂತ್ರಗಳನ್ನು ತನ್ನ ಸಚಿವಾಲಯವು ಪರಿಷ್ಕರಿಸಿರುವುದಾಗಿ ರಾಜೇಶ್ ಭೂಷಣ್(Rajesh Bhushan) ಅವರು ನಾಗರಿಕ ವಾಯುಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್(Rajeev Bansal)ಅವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿಯೂ ಕಳೆದ 28 ದಿನಗಳಲ್ಲಿ ಹೊಸ ಕೋವಿಡ್-29 ಪ್ರಕರಣಗಳ ಸಂಖ್ಯೆಯು ಅದಕ್ಕೂ ಹಿಂದಿನ 28 ದಿನಗಳಿದ್ದುದಕ್ಕಿಂತ ಶೇ.89ರಷ್ಟು ಇಳಿಕೆಯಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿರುವ ಅಂಕಿಅಂಶಗಳನ್ನು ಕೂಡಾ ತಾನು ಆರೋಗ್ಯ ಸಚಿವಾಲಯವು ಗಮನಕ್ಕೆ ತೆಗೆದುಕೊಂಡಿದೆಯೆಂದು ಭೂಷಣ್ ತಿಳಿಸಿದ್ದಾರೆ.
ಭಾರತದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಪ್ರಸಕ್ತ ದಿನಕ್ಕೆ 100ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆಯೆಂದು ಭೂಷಣ್ ಹೇಳಿದ್ದಾರೆ.







