ಧಾರವಾಡ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ಜಲಮಂಡಳಿ ಕಾರ್ಮಿಕ!

ಧಾರವಾಡ: ಕಳೆದ ಎಂಟು ತಿಂಗಳುಗಳಿಂದ ಸಂಬಳವಿಲ್ಲದೇ ಪರದಾಡುತ್ತಿರುವ ಜಲಮಂಡಳಿ ಕಾರ್ಮಿಕರು ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸೂಕ್ತ ಸ್ಪಂದನೆ ಸಿಗದ ಕಾರಣ ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರ್ಮಿಕನೊಬ್ಬ ಧಾರವಾಡದ ಜುಬ್ಲಿ ವೃತ್ತದಲ್ಲಿ ಇರುವ ಮೊಬೈಲ್ ಟವರ್ ಏರಿ ನ್ಯಾಯ ಬೇಕು ಎಂದು ಒತ್ತಾಯಿಸಿರುವ ಘಟನೆ ವರದಿಯಾಗಿದೆ.
ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಕೈಯಲ್ಲಿ ಬೇಡಿಕೆ ಫಲಕ ಸಹಿತ ಟವರ್ ಏರಿದ ಕಾರ್ಮಿಕ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ, ''ಕಳೆದ ಏಳು ತಿಂಗಳಿನಿಂದ ನಮಗೆ ವೇತನ ನೀಡದೆ ಬಾಕಿ ಉಳಿಸಿದ್ದಾರೆ. ಕೂಡಲೇ ಬಾಕಿ ವೇತನ ನೀಡ ಬೇಕು'' ಎಂದು ಆಗ್ರಹಿಸಿದ್ದಾರೆ.
Next Story