ಜೆಡಿಎಸ್ ರಾಜ್ಯ ವಕ್ತಾರರಾಗಿ ಕುಮಾರ್ ಕೆ.ಎಚ್. ನೇಮಕ

ಬೆಂಗಳೂರು, ಫೆ.11: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ 'ರಾಜ್ಯ ವಕ್ತಾರ'ರನ್ನಾಗಿ ಕಲಾವಿದ ಹಾಗೂ ಮುಖಂಡ ಕುಮಾರ್ ಕೆ.ಎಚ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಶನಿವಾರ ಈ ಸಂಬಂಧ ಆದೇಶ ಹೊರಡಿಸಿರುವ ಜೆಡಿಎಸ್ ನ ಮಾಧ್ಯಮ ನಿರ್ವಹಣೆಯ ಸಂಯೋಜಕ ಕೆ.ಟಿ.ಶ್ರೀಕಠೇಗೌಡ, 'ತಾವು ಈ ಗುರುತರ ಜವಾಬ್ದಾರಿ ವಹಿಸಿಕೊಂಡು, ಪಕ್ಷದ ಕಾರ್ಯಕ್ರಮಗಳು ಮತ್ತು ಪಕ್ಷದ ಸರಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನ ಮಾಡುಬೇಕು ಎಂದು ಮನವಿ ಮಾಡಿದ್ದಾರೆ.
Next Story