ಭಾರತ, ಚೀನಾದಿಂದ ಗುಲಾಬಿ ಆಮದು ನಿಷೇಧಿಸಿದ ನೇಪಾಳ: ಕಾರಣವೇನು?

ಕಠ್ಮಂಡು, ಫೆ.11: ಮಾಧ್ಯಮ ವರದಿಗಳ ಪ್ರಕಾರ, 'ಪ್ರೇಮಿಗಳ ದಿನಾಚರಣೆ'ಗೂ ಮುನ್ನ ಭಾರತ ಮತ್ತು ಚೀನಾದಿಂದ ತಾಜಾ ಗುಲಾಬಿಗಳ ಆಮದನ್ನು ನೇಪಾಳ ನಿಷೇಧಿಸಿದೆ ಎಂದು ಹೇಳಲಾಗಿದೆ.
ಸಸ್ಯಜನ್ಯ ರೋಗ ಹರಡುವ ಸಾಧ್ಯತೆ ಇದೆ ಎಂಬ ಕಾರಣವನ್ನು ಮುಂದು ಮಾಡಿ, ಗುಲಾಬಿ ಹೂವುಗಳಿಗೆ ಆಮದು ಪರವಾನಗಿಯನ್ನು ನೀಡಬಾರದು ಎಂದು ಗಡಿ ಕಚೇರಿಗಳಿಗೆ ನೇಪಾಳದ ಕೃಷಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸಸ್ಯಗಳ ಪ್ರತ್ಯೇಕತೆ ಮತ್ತು ಕೀಟನಾಶಕ ನಿರ್ವಹಣಾ ಕೇಂದ್ರವು ಸೂಚನೆ ನೀಡಿದೆ.
ಈ ಕುರಿತು ವರದಿ ಮಾಡಿರುವ My Republica ದಿನಪತ್ರಿಕೆಯು, ನೇಪಾಳ, ಭಾರತ ಮತ್ತು ಚೀನಾದ ಗಡಿಗಳಲ್ಲಿನ 15 ಸುಂಕ ಕಚೇರಿಗಳಿಗೆ ವಿಶೇಷ ಕಾರಣ ಹೊಂದಿರುವ ಲಿಖಿತ ಸೂಚನೆಯನ್ನು ನೀಡಿ, ಗುಲಾಬಿ ಹೂವುಗಳ ಆಮದನ್ನು ಸಸ್ಯಗಳ ಪ್ರತ್ಯೇಕತೆ ಮತ್ತು ಕೀಟನಾಶಕ ನಿರ್ವಹಣಾ ಕೇಂದ್ರವು ನಿಷೇಧಿಸಿದೆ ಎಂದು ಹೇಳಿದೆ.
ಪ್ರತಿ ವರ್ಷ ಫೆಬ್ರವರಿ 14ರಂದು ವಿಶ್ವಾದ್ಯಂತ 'ಪ್ರೇಮಿಗಳ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ.
ಸಸ್ಯಜನ್ಯ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಆಮದನ್ನು ನಿಷೇಧಿಸಲಾಗಿದೆ ಎಂದು ಸಸ್ಯಗಳ ಪ್ರತ್ಯೇಕತೆ ಮತ್ತು ಕೀಟನಾಶಕ ನಿರ್ವಹಣಾ ಕೇಂದ್ರ ಸ್ಪಷ್ಟಪಡಿಸಿದೆ.