Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹರಿಯಾಣ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ...

ಹರಿಯಾಣ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ʼಅಸಾಂಪ್ರದಾಯಿಕʼ ಕೇಶವಿನ್ಯಾಸ, ಮೇಕಪ್‌ಗೆ ನಿಷೇಧ

ಆರೋಗ್ಯ ವೃತ್ತಿಪರರಿಗೆ ನೂತನ ವಸ್ತ್ರಸಂಹಿತೆ ಜಾರಿಗೊಳಿಸಲು ಸಿದ್ಧತೆ

11 Feb 2023 5:29 PM IST
share
ಹರಿಯಾಣ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ʼಅಸಾಂಪ್ರದಾಯಿಕʼ ಕೇಶವಿನ್ಯಾಸ, ಮೇಕಪ್‌ಗೆ ನಿಷೇಧ
ಆರೋಗ್ಯ ವೃತ್ತಿಪರರಿಗೆ ನೂತನ ವಸ್ತ್ರಸಂಹಿತೆ ಜಾರಿಗೊಳಿಸಲು ಸಿದ್ಧತೆ

ಚಂಡೀಗಢ: ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳಿಗೆ “ವಿಚಿತ್ರ ಕೇಶವಿನ್ಯಾಸ,  ಮೈತುಂಬಾ ಆಭರಣಗಳು, ಮೇಕಪ್ ಮತ್ತು ಉದ್ದನೆಯ ಉಗುರುಗಳು ಬಿಡುವುದಕ್ಕೆ” ಅನುಮತಿ ಇಲ್ಲ ಎಂದು ಹರಿಯಾಣ ಸರ್ಕಾರವು ಹೇಳಿದ್ದು, ಆರೋಗ್ಯ ವೃತ್ತಿಪರರಿಗೆ ವಸ್ತ್ರಸಂಹಿತೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿಗಳಲ್ಲಿ ಶಿಸ್ತು, ಏಕರೂಪತೆ ಮತ್ತು ಸಮಾನತೆಯನ್ನು ಕಾಪಾಡುವುದು ಡ್ರೆಸ್ ಕೋಡ್ ನೀತಿಯ ಉದ್ದೇಶ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

"ಆಸ್ಪತ್ರೆಯಲ್ಲಿ ಅನುಸರಿಸಲಾಗುವ ಡ್ರೆಸ್ ಕೋಡ್ ನೀತಿಯು ಉದ್ಯೋಗಿಗಳಿಗೆ ವೃತ್ತಿಪರ ಇಮೇಜ್ ಅನ್ನು ನೀಡುವುದಲ್ಲದೆ, ಸಾರ್ವಜನಿಕರಲ್ಲಿ ಸಂಸ್ಥೆಯೊಂದರ ಸೊಗಸಾದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ" ಎಂದು ವಿಜ್ ಹೇಳಿದ್ದಾರೆ.

ಕ್ಲಿನಿಕಲ್ (ವೈದ್ಯರು ಮತ್ತು ಅರೆವೈದ್ಯರು), ಸ್ವಚ್ಛತೆ ಮತ್ತು ನೈರ್ಮಲ್ಯ, ಭದ್ರತೆ, ಸಾರಿಗೆ, ತಾಂತ್ರಿಕ, ಅಡುಗೆಮನೆ, ಕ್ಷೇತ್ರ ಇತ್ಯಾದಿಗಳಲ್ಲಿ ಕೆಲಸ ಮಾಡುವ ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ಕೆಲಸದ ಸಮಯದಲ್ಲಿ ಸರಿಯಾದ ಸಮವಸ್ತ್ರದಲ್ಲಿರಬೇಕು ಎಂದು ಅವರು ಹೇಳಿದ್ದಾರೆ.

  ಆರೋಗ್ಯ ಕೇಂದ್ರಗಳಲ್ಲಿ ಫಂಕಿ ಹೇರ್ ಸ್ಟೈಲ್, ಹೆವಿ ಜ್ಯುವೆಲ್ಲರಿ, ಆಕ್ಸೆಸರೀಸ್, ಮೇಕ್ಅಪ್, ಉದ್ದನೆಯ ಉಗುರುಗಳು ಕೆಲಸದ ವೇಳೆ ಸ್ವೀಕಾರಾರ್ಹವಲ್ಲ ಎಂದು ವಿಜ್ ಹೇಳಿದ್ದಾರೆ.

ಶುಶ್ರೂಷಾ ಸಿಬ್ಬಂದಿಯನ್ನು ಹೊರತುಪಡಿಸಿ, ಬಿಳಿ ಅಂಗಿಯೊಂದಿಗೆ ಕಪ್ಪು ಪ್ಯಾಂಟ್ ಮತ್ತು ಹೆಸರಿನ ಟ್ಯಾಗ್ ಅನ್ನು ತರಬೇತಿ ಪಡೆದವರು ಧರಿಸಬೇಕು ಎಂದು ಅವರು ಹೇಳಿದರು.

"ಪುರುಷರ ಕೂದಲು ಉದ್ದವಾಗಿರಬಾರದು ಮತ್ತು ರೋಗಿಯ ಆರೈಕೆಯಲ್ಲಿ ಹಸ್ತಕ್ಷೇಪ ಮಾಡುವಂತಿರಬಾರದು" ಎಂದು ಅವರು ಹೇಳಿದ್ದಾರೆ.

"ವಿಚಿತ್ರ ಮತ್ತು ಅಸಾಂಪ್ರದಾಯಿಕ ಕೇಶವಿನ್ಯಾಸಗಳಿಗೆ  ಅನುಮತಿಸಲಾಗುವುದಿಲ್ಲ. ಉಗುರುಗಳು ಸ್ವಚ್ಛವಾಗಿರಬೇಕು, ಟ್ರಿಮ್ ಮಾಡಬೇಕು ಮತ್ತು ಚೆನ್ನಾಗಿ ಶುಚಿಗೊಳಿಸಿರಬೇಕು" ಎಂದು ಅವರು ಒತ್ತಿ ಹೇಳಿದರು.

ಯಾವುದೇ ಬಣ್ಣದ ಜೀನ್ಸ್, ಡೆನಿಮ್ ಸ್ಕರ್ಟ್‌ಗಳು ಮತ್ತು ಡೆನಿಮ್ ಉಡುಪುಗಳನ್ನು ವೃತ್ತಿಪರ ಉಡುಪುಗಳು ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಆದ್ದರಿಂದ ಅವುಗಳನ್ನು ಅನುಮತಿಸಲಾಗುವುದಿಲ್ಲ ಎಂದು ವಿಜ್ ಹೇಳಿದರು.

"ಸ್ವೆಟ್‌ಶರ್ಟ್‌ಗಳು, ಸ್ವೆಟ್‌ಸೂಟ್‌ಗಳು ಮತ್ತು ಶಾರ್ಟ್ಸ್‌ಗಳನ್ನು ಅನುಮತಿಸಲಾಗುವುದಿಲ್ಲ. ಸ್ಲಾಕ್ಸ್, ಡ್ರೆಸ್‌ಗಳು, ಸ್ಕರ್ಟ್‌ಗಳು ಮತ್ತು ಪಲಾಜೋಗಳನ್ನು ಸಹ ಅನುಮತಿಸಲಾಗುವುದಿಲ್ಲ. ಟಿ-ಶರ್ಟ್‌ಗಳು, ಸ್ಟ್ರೆಚ್ ಟಿ-ಶರ್ಟ್‌ಗಳು, ಸ್ಟ್ರೆಚ್ ಪ್ಯಾಂಟ್‌ಗಳು, ಫಿಟ್ಟಿಂಗ್ ಪ್ಯಾಂಟ್‌ಗಳು, ಲೆದರ್ ಪ್ಯಾಂಟ್‌ಗಳು, ಕ್ಯಾಪ್ರಿಸ್, ಸ್ವೆಟ್‌ಪ್ಯಾಂಟ್‌ಗಳು, ಟ್ಯಾಂಕ್ ಟಾಪ್‌ಗಳು,   ಕ್ರಾಪ್ ಟಾಪ್‌ಗಳು, ಆಫ್-ಶೋಲ್ಡರ್ ಡ್ರೆಸ್‌ಗಳು, ಸ್ನೀಕರ್ಸ್, ಚಪ್ಪಲಿಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ. ಅದೇ ರೀತಿ, ಪಾದರಕ್ಷೆಗಳು ಕಪ್ಪು, ಸ್ವಚ್ಛ, ಆರಾಮದಾಯಕವಾಗಿರಬೇಕು ಮತ್ತು ವಿಚಿತ್ರ ವಿನ್ಯಾಸಗಳಿಂದ ಮುಕ್ತವಾಗಿರಬೇಕು" ಎಂದು ಸಚಿವರು ಹೇಳಿದ್ದಾರೆ.

ವಾರಾಂತ್ಯ, ಸಂಜೆ ಮತ್ತು ರಾತ್ರಿ ಪಾಳಿ ಸೇರಿದಂತೆ 24 ಗಂಟೆಯೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಡ್ರೆಸ್ ಕೋಡ್ ಅನ್ನು ಅನುಸರಿಸದಿರುವುದು ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ ಮತ್ತು ತಪ್ಪಿತಸ್ಥ ಉದ್ಯೋಗಿಯನ್ನು ಆ ನಿರ್ದಿಷ್ಟ ದಿನಕ್ಕೆ ಗೈರುಹಾಜರೆಂದು ಗುರುತಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ಡ್ರೆಸ್ ಕೋಡ್ ಅಂತಿಮ ಹಂತದಲ್ಲಿದೆ ಎಂದು ವಿಜ್ ಹೇಳಿದರು.

‘ಖಾಸಗಿ ಆಸ್ಪತ್ರೆಗೆ ಹೋದಾಗ ಒಬ್ಬನೇ ಒಬ್ಬ ನೌಕರನೂ ಸಮವಸ್ತ್ರವಿಲ್ಲದೆ ಕಾಣಿಸುವುದಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಮತ್ತು ನೌಕರನೆಂಬ ವ್ಯತ್ಯಾಸವನ್ನು ಗುರುತಿಸುವುದು ಕಷ್ಟ’ ಎಂದ ಅವರು, ಡ್ರೆಸ್ ಕೋಡ್‌ನಿಂದ ರಾಜ್ಯದ ಆಸ್ಪತ್ರೆಗಳ ಕಾರ್ಯವೈಖರಿ ಸುಧಾರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

share
Next Story
X