ಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಬಿಜೆಪಿ ನಾಯಕನ ಹತ್ಯೆ

ರಾಯಪುರ್ (ಛತ್ತೀಸ್‌ಗಢ), ಫೆ. 11: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ಶಂಕಿತ ಮಾವೋವಾದಿಗಳು ಬಿಜೆಪಿಯ ಓರ್ವ ಸ್ಥಳೀಯ ನಾಯಕನನ್ನು ಗುಂಡು ಹಾರಿಸಿ ಕೊಂದಿದ್ದಾರೆ.
ಬಿಜೆಪಿಯ ನಾರಾಯಣಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಗರ್ ಸಾಹು(Sagar Sahu) ಎಂಬವರ ಮೇಲೆ ಛೋಟೆಡೊಂಗರ್ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಇಬ್ಬರು ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.
ಅವರನ್ನು ನಾರಾಯಣಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅವರು ಅಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಇದು ರಾಜ್ಯದಲ್ಲಿ ಈ ವಾರ ಬಿಜೆಪಿ ನಾಯಕರ ಮೇಲೆ ನಡೆದ ಎರಡನೇ ದಾಳಿಯಾಗಿದೆ.
Next Story





