ಗೋ ಆಲಿಂಗನ ದಿನಾಚರಣೆ ಕರೆ ವಾಪಸ್: ನಗೆ ಚಟಾಕಿಗಳಿಗೆ ಸರಕಾರ ಹೆದರಿತ್ತೇ ಎಂದು ಪ್ರಶ್ನಿಸಿದ ಶಶಿ ತರೂರ್

ಹೊಸದಿಲ್ಲಿ,ಫೆ.11: ಭಾರತೀಯ ಪಶು ಕಲ್ಯಾಣ ಮಂಡಳಿಯು ಫೆ.14ರ ಪ್ರೇಮಿಗಳ ದಿನವನ್ನು ‘ಗೋ ಆಲಿಂಗನ ದಿನ ’ವನ್ನಾಗಿ ಆಚರಿಸಲು ತಾನು ನೀಡಿದ್ದ ಕರೆಯನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor) ಅವರು, ಸರಕಾರವು ತನ್ನ ವಿರುದ್ಧದ ನಗೆಚಟಾಕಿಗಳಿಗೆ ಹೆದರಿತ್ತೇ ಅಥವಾ ಇದು ಕೇವಲ ಹೇಡಿತನವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಈ ಬಗ್ಗೆ ಟ್ವೀಟಿಸಿರುವ ಅವರು,ಮೂಲ ಮನವಿಯು ವೌಖಿಕ ಸೂಚನೆಯಾಗಿತ್ತು ಎನ್ನುವುದು ನನ್ನ ಊಹೆ. ‘‘ಪ್ರೇಮಿಗಳ ದಿನವನ್ನು:ಅವರು ತಮ್ ‘ಗಯ್ (ವ್ಯಕ್ತಿ) ’ಅನ್ನು ತಬ್ಬಿಕೊಳ್ಳಲಿ ಬಿಡಿ ’’ಎಂದು ಹೇಳಿದ್ದು,‘ಗಯ್ ’ಶಬ್ದವನ್ನು ಹಿಂದು ರಾಷ್ಟ್ರವಾದಿಗಳು ‘ಗಾಯ್’ ಎಂದು ತಪ್ಪಾಗಿ ಕೇಳಿಸಿಕೊಂಡಿದ್ದರು ಎಂದು ನಾನು ಊಹಿಸಿದ್ದೇನೆ ’ ಎಂದು ಕುಟುಕಿದ್ದಾರೆ.
Next Story





