15 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ; BDA ಆಯುಕ್ತರಾಗಿ ಜಿ.ಕುಮಾರ್ ನಾಯಕ್ ನೇಮಕ

ಬೆಂಗಳೂರು, ಫೆ. 11: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜ್ಯ ಸರಕಾರ 15 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ತಕ್ಷಣವೇ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ಶನಿವಾರ ಆದೇಶ ಹೊರಡಿಸಲಾಗಿದೆ.
ಜಿ.ಕುಮಾರ್ ನಾಯಕ್-ಆಯುಕ್ತರು ಬೆಂಗಳೂರು ಅಭಿವೃದ್ದಿ ಪಾಧಿಕಾರ(ಬಿಡಿಎ) ಬೆಂಗಳೂರು, ಡಾ.ರಮಣರೆಡ್ಡಿ ಇ.ವಿ.-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಬೆಂಗಳೂರು, ಕಪಿಲ್ ಮೋಹನ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಂಧನ ಇಲಾಖೆ, ಉಮಾಶಂಕರ್ ಎಸ್.ಆರ್.-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ, ರಶ್ಮಿ ವಿ.ಮಹೇಶ್-ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ.
ಸೆಲ್ವಕುಮಾರ್ ಎಸ್.-ಪ್ರಧಾನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಹುದ್ದೆ ನಿರೀಕ್ಷೆಯಲ್ಲಿದ್ದ ಮನೋಜ್ ಜೈನ್-ಕಾರ್ಯದರ್ಶಿ ಅಲ್ಪಸಂಖ್ಯಾಂತ ಕಲ್ಯಾಣ ಇಲಾಖೆ ಬೆಂಗಳೂರು, ಡಾ.ಶಿವಶಂಕರ್ ಎನ್. -ವ್ಯವಸ್ಥಾಪಕ ನಿರ್ದೇಶಕರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ನಳಿನಿ ಅತುಲ್-ನಿರ್ದೇಶಕರು ಸಾಮಾಜಿಕ ಸಮೀಕ್ಷೆ ಗ್ರಾಮೀಣಾಭಿವೃದ್ದಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
ಮೊಹಮ್ಮದ್ ರೋಷನ್-ವ್ಯವಸ್ಥಾಪಕ ನಿರ್ದೆಶಕರು ‘ಹೆಸ್ಕಾಂ’ ಹುಬ್ಬಳ್ಳಿ, ಭೋಯರ್ ಹರ್ಷಲ್ ನಾರಾಯಣರಾವ್-ಸಿಇಓ ಜಿಲ್ಲಾ ಪಂಚಾಯತ್ ಬೆಳಗಾವಿ, ಭನ್ವರ್ ಸಿಂಗ್ ಮೀನಾ-ಪ್ರಧಾನ ವ್ಯವಸ್ಥಾಪಕ ಕೃಷ್ಣಾ ಮೇಲ್ದಂಡೆ ಯೋಜನೆ ಬಾಗಲಕೋಟೆ, ಪ್ರಕಾಶ್ ಜಿ.ಟಿ. ನಿಟ್ಟಾಲಿ-ಸಿಇಒ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ಎನ್.ಮೊಹಮ್ಮದ್ ಅಲಿ ಅಕ್ರಮ್ ಶಾ-ಹೆಚ್ಚುವರಿ ನಿರ್ದೆಶಕರು ಸಕಾಲ ಮಿಷನ್ ಬೆಂಗಳೂರು, ರವಿ ಎಂ.ತಿರ್ಲಾಪುರ್-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ.







