ತಾನು ಕಲಿಯುತ್ತಿದ್ದ ಶಾಲೆಯ ಮೇಲೆ ದಾಳಿಗೆ ಯೋಜನೆ ರೂಪಿಸಿದ ವಿದ್ಯಾರ್ಥಿಗೆ ಜೈಲುಶಿಕ್ಷೆ

ಬರ್ಲಿನ್, ಫೆ.11: ತಾನು ಕಲಿಯುತ್ತಿರುವ ಶಾಲೆಯ ಮೇಲೆ ‘ಮಾರಣಾಂತಿಕ’ ದಾಳಿಗೆ ಯೋಜನೆ ರೂಪಿಸಿದ ವಿದ್ಯಾರ್ಥಿಗೆ 2 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಜರ್ಮನ್ ನ್ಯಾಯಾಲಯದ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
16 ವರ್ಷದ ಜೆರೆಮಿ ಆರ್. ಎಂಬ ವಿದ್ಯಾರ್ಥಿ 2022ರ ಮೇ 13ರಂದು ಬಲಪಂಥೀಯ ಉಗ್ರಗಾಮಿ ಪ್ರೇರಿತ ದಾಳಿಯನ್ನು ಆಯೋಜಿಸಿದ್ದು ಯೋಜನೆ ಕಾರ್ಯಗತಕ್ಕೆ ತುಸು ಮುನ್ನ ಆತನನ್ನು ಪೊಲೀಸರು ಬಂಧಿಸಿದ್ದರು. ಇದರಿಂದ ಸಂಭಾವ್ಯ ಭಾರೀ ಹತ್ಯಾಕಾಂಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿಹೋಗಿತ್ತು. ಈತ ಬಾಂಬ್ ತಯಾರಿ ಬಗ್ಗೆ ಇಂಟರ್‌ನೆಟ್‌ನಲ್ಲಿ ಮಾಹಿತಿ ಪಡೆದು, ಬಾಂಬ್ ತಯಾರಿಗೆ ಕಚ್ಛಾವಸ್ತು ಸಂಗ್ರಹಿಸಿದ್ದ. ಅಲ್ಲದೆ ಚೂರಿಗಳು, ಮಚ್ಚು, ಬಾಣ, ಪಿಸ್ತೂಲ್ ಮುಂತಾದ ಮಾರಕಾಸ್ತ್ರಗಳನ್ನೂ ಸಂಗ್ರಹಿಸಿದ್ದ. ಆದರೆ ದಾಳಿಗೆ ಮುನ್ನಾ ದಿನ ಆತನನ್ನು ಬಂಧಿಸಿದ್ದರಿಂದ ಈತನ ಯೋಜನೆ ವಿಫಲವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story