Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜ್ಯದ 4 ವರ್ಷಗಳ ಆಡಳಿತ: ಕೃಷಿ...

ರಾಜ್ಯದ 4 ವರ್ಷಗಳ ಆಡಳಿತ: ಕೃಷಿ ಕ್ಷೇತ್ರದ ನಿರ್ಲಕ್ಷ್ಯ, ಪೊಳ್ಳು ಭರವಸೆಗಳ ಕಾಲ

ಸಾಧನೆ’ಯ ಪರಾಮರ್ಶೆ

ಕೆ.ಪಿ. ಸುರೇಶಕೆ.ಪಿ. ಸುರೇಶ12 Feb 2023 9:35 AM IST
share
ರಾಜ್ಯದ 4 ವರ್ಷಗಳ ಆಡಳಿತ: ಕೃಷಿ ಕ್ಷೇತ್ರದ ನಿರ್ಲಕ್ಷ್ಯ, ಪೊಳ್ಳು ಭರವಸೆಗಳ ಕಾಲ
ಸಾಧನೆ’ಯ ಪರಾಮರ್ಶೆ

ಕರ್ನಾಟಕ ರಾಜ್ಯ ಸರಕಾರದ ನಾಲ್ಕು ವರ್ಷಗಳ ಆಡಳಿತದ ಬಜೆಟ್ ಆಧಾರಿತ ಪರಾಮರ್ಶೆಯನ್ನು ಬೆಂಗಳೂರಿನ Bangalore Academic Group ಸಂಘಟಿಸಿದ್ದು, ವಿವಿಧ ಕ್ಷೇತ್ರಗಳ ಪರಿಣಿತರ ಸರಣಿ ಪರಾಮರ್ಶೆ ಇಲ್ಲಿದೆ.

ರಾಜ್ಯಕ್ಕೆ ಲಭಿಸಬೇಕಿದ್ದ ಜಿಎಸ್ಟಿ ಪರಿಹಾರ ಮತ್ತು 15ನೇ ಹಣಕಾಸು ಆಯೋಗದಿಂದ ನ್ಯಾಯಯುತ ಅನುದಾನದ ಮೊತ್ತವನ್ನು ಒತ್ತಾಯ ಪೂರ್ವಕ ಕೇಳಲು ಧೈರ್ಯವಿಲ್ಲದ ರಾಜ್ಯ ಸರಕಾರ ಸುಮಾರು 72 ಸಾವಿರ ಕೋಟಿ ರೂ. ಸಾಲ ಹೆಚ್ಚುವರಿಯಾಗಿ ಮಾಡಿ ಇದೀಗ ಈ ಸಾಲಿನಲ್ಲಿ ರಾಜ್ಯದ ಸಾಲದ ಹೊರೆ 5.4 ಲಕ್ಷ ಕೋಟಿಗೇರಿದೆ. ಸಾಲ/ ಬಡ್ಡಿ ಮರುಪಾವತಿ ಮೊತ್ತವೇ 30 ಸಾವಿರ ಕೋಟಿ ರೂಪಾಯಿ.

ಈ ಬಾರಿಯ ಬಜೆಟ್ ಸೇರಿ ಕರ್ನಾಟಕದ ರಾಜ್ಯ ಸರಕಾರ ನಾಲ್ಕು ಬಜೆಟ್ ಮಂಡಿಸಿದ ಸಾಧನೆ ಮಾಡಿದಂತಾಗುತ್ತದೆ. ಈ ನಾಲ್ಕು ವರ್ಷಗಳಲ್ಲಿ ಈ ಸರಕಾರ ಪ್ರಮುಖವಾಗಿ ಮೂರು ಆಘಾತಗಳನ್ನು ಎದುರಿಸಿದೆ. 1. 2019ರ ಅಭೂತಪೂರ್ವ ಪ್ರವಾಹ. 2. ಕೋವಿಡ್ ಮಾರಿ. 3. 15ನೇ ವಿತ್ತ ಆಯೋಗದ ಬದಲಾದ ಮಾನದಂಡಗಳಿಂದ ಉಂಟಾದ ಆರ್ಥಿಕ ಅನುದಾನ ಕೊರತೆ.

ಪ್ರವಾಹದಿಂದ ಕರ್ನಾಟಕ ಅನುಭವಿಸಿದ ನಷ್ಟ ಸರಕಾರಿ ಲೆಕ್ಕದ ಪ್ರಕಾರವೇ ಸುಮಾರು 40 ಸಾವಿರ ಕೋಟಿ ರೂ. ಕೇಂದ್ರ ಸರಕಾರದಿಂದ ಈ ನಷ್ಟದ ಶೇ.10ರಷ್ಟು ಪರಿಹಾರವೂ ದೊರಕಲಿಲ್ಲ. ತರುವಾಯ ಆವರಿಸಿದ ಕೋವಿಡ್ ಮಾರಿಯ ಹೊಡೆತದಿಂದಾಗಿ ಸರಕಾರದ ಆದಾಯ ಕುಸಿತ ಆಗಿದ್ದಷ್ಟೇ ಅಲ್ಲ, ಕೇಂದ್ರವೂ ತೆರಿಗೆ ಪರಿಹಾರ ಮತ್ತು ಅನುದಾನ ಎರಡರಲ್ಲೂ ಕಣ್ಣಾಮುಚ್ಚಾಲೆ ಆಡಿತು. ಹಣಕಾಸು ಆಯೋಗದ ಬದಲಾದ ಲೆಕ್ಕಾಚಾರದಿಂದ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ಅನುದಾನ ಕಡಿತವಾಗಿದೆ. 

ಈ ದುರ್ಭರ ಸನ್ನಿವೇಶದಲ್ಲಿ ಒಂದು ಸರಕಾರ ತನ್ನ ಆದ್ಯತೆಗಳನ್ನು ಕೇಂದ್ರೀಕರಿಸಿ ಪುನಶ್ಚೇತನಕ್ಕೆ ಸಮಗ್ರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿತ್ತು. ನತದೃಷ್ಟ ಪ್ರಜೆಗಳ ಕನಿಷ್ಠ ನಿರೀಕ್ಷೆ ಇದು.

ಈ ನಾಲ್ಕುವರ್ಷಗಳಲ್ಲಿ ಯಡಿಯೂರಪ್ಪ, ತರುವಾಯ ಬೊಮ್ಮಾಯಿ ಅವರ ತಲಾ ಎರಡು ಬಜೆಟ್ಗಳ ಕಾರ್ಯಕ್ರಮಗಳ ವಿವರ ನೋಡೋಣ
ಯಡಿಯೂರಪ್ಪನವರಿಗಿಂತ ಮೊದಲು ಆಡಳಿತ ನಡೆಸಿದ್ದ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಬಜೆಟ್ನಲ್ಲಿ ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ., ಶೂನ್ಯ ಬಂಡವಾಳ ಕೃಷಿಯ ಪ್ರಯೋಗಾತ್ಮಕ ಅನುಷ್ಠಾನಕ್ಕೆ 40 ಕೋಟಿ ರೂ., ಸಾವಯವ ಕೃಷಿಗೆ 35 ಕೋಟಿ ರೂ., ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಧನ ನೀಡುವ ರೈತ ಸಿರಿ ಯೋಜನೆಗೆ 10 ಕೋಟಿ ರೂ., ಮಳೆ ಆಶ್ರಿತ ಭತ್ತ ಬೆಳೆಗಾರರಿಗೆ ಪ್ರೋತ್ಸಾಹ ಯೋಜನೆಗೆ 5 ಕೋಟಿ ರೂ., ಮಾರುಕಟ್ಟೆ ಮಧ್ಯಪ್ರವೇಶಕ್ಕೆ 510 ಕೋಟಿ ರೂ. ಹಾಗೂ ಈರುಳ್ಳಿ ಟೊಮ್ಯಾಟೋ ಹಾಗೂ ಆಲೂಗೆಡ್ಡೆ ಬೆಲೆ ಸ್ಥಿರೀಕರಣಕ್ಕೆ 50 ಕೋಟಿ ರೂ. ಹಾಗೂ ಸಿರಿಧಾನ್ಯ ಮಾರುಕಟ್ಟೆ ವ್ಯವಸ್ಥೆಗೆ 10 ಕೋಟಿ ರೂ., ಕೃಷಿ ಉತ್ಪನ್ನ ಅಡಮಾನ ಸಾಲದ ಬಡ್ಡಿ ಮನ್ನಾಕ್ಕೆ 200 ಕೋಟಿ ರೂ. ಅನುದಾನ ಘೋಷಿಸಿದ್ದರು.
ಯಡಿಯೂರಪ್ಪನವರು ಬಹುತೇಕ ಈ ಯೋಜನೆಗಳನ್ನು ಒಂದೋ ಕೈ ಬಿಟ್ಟಿದ್ದಾರೆ ಇಲ್ಲಾ ಅನುದಾನ ಕಡಿತಗೊಳಿಸಿದ್ದಾರೆ.

ಉದಾ: ಮಾರುಕಟ್ಟೆ ಮಧ್ಯಪ್ರವೇಶಕ್ಕೆ 2,000 ಕೋಟಿ ರೂ. ಘೋಷಿಸಿ ನಂತರ ಕೈ ಬಿಡಲಾಗಿದೆ.
21-22ರ ಬಜೆಟ್ನಲ್ಲಿ ಸಾವಯವ ಗೊಬ್ಬರ ಪೂರೈಕೆಗಾಗಿ 500 ಕೋಟಿ ರೂ. ಘೋಷಿಸಿ ಕೈ ಬಿಡಲಾಗಿದೆ.
ಮಹಿಳಾ ಮೀನುಗಾರರಿಗೆ ಮತ್ತು ಒಳನಾಡು ಮೀನುಗಾರರಿಗೆ ವಿವಿಧ ಸೌಲಭ್ಯ ಘೋಷಿಸಿ ಬಳಿಕ ಇಡೀ ಕಾರ್ಯಕ್ರಮಗಳ ಸರಣಿಯನ್ನೇ ಕೈ ಬಿಡಲಾಗಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳ ಸಾವಯವ ಇಂಗಾಲ ಅಪಾಯಕಾರಿಯಾಗಿ ಕುಸಿದಿದ್ದು ಬಹುತೇಕ ಜಿಲ್ಲೆಗಳ ಕೃಷಿ ಭೂಮಿ ಈ ಮಾನದಂಡದ ಪ್ರಕಾರ ಕೃಷಿಗೆ ಅಯೋಗ್ಯ ಎನ್ನಬಹುದು. ಇಕ್ರಿಸಾಟ್ತಯಾರಿಸಿರುವ ಕರ್ನಾಟಕದ ಮಣ್ಣಿನ ಅಟ್ಲಾಸ್ನಲ್ಲಿ ಈ ವಿವರಗಳಿವೆ. ಇದಕ್ಕೆ ತಾತ್ವಿಕವಾಗಿ ಸ್ಪಂದಿಸುವ ಸರಕಾರ ಸಾವಯವ ಇಂಗಾಲ ಹೆಚ್ಚಿಸಲು ಕಾರ್ಯಕ್ರಮ ಘೋಷಿಸಿ ಕೇವಲ 10 ಕೋಟಿ ರೂಪಾಯಿ ಅನುದಾನ ನಿಗದಿಸುತ್ತದೆ.
ಇಡೀ ರಾಜ್ಯದ ಅಡಿಕೆ ಬೆಳೆಗಾರರನ್ನು ಬೆಚ್ಚಿ ಬೀಳಿಸಿರುವ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡು ಹಿಡಿಯಲು 25 ಕೋಟಿ ರೂ. ಘೋಷಿಸಿದರೂ ಇಂದಿನವರೆಗೆ ಯಾವುದೇ ಪ್ರಗತಿಯಾಗಿಲ್ಲ. ಸಂಕಷ್ಟ ಹೆಚ್ಚುತ್ತಲೇ ಇದೆ.

ಈ ಮಧ್ಯೆ ಪರಿಸರ ಸೂಚಿಗಳ ಪ್ರಕಾರ ಅಮೂಲ್ಯವಾಗಿರುವ ಪಶ್ಚಿಮ ಘಟ್ಟದ ಪಶ್ಚಿಮಕ್ಕೆ ಹರಿವ ನದಿ ಮೂಲಗಳ ಮೇಲೆ ಕಣ್ಣು ಹಾಕಿದ ಸರಕಾರ ಅತ್ಯಂತ ಅವೈಜ್ಞಾನಿಕವಾಗಿರುವ ನೀರು ತಿರುಗಿಸುವ ‘ಪಶ್ಚಿಮ ವಾಹಿನಿ’ ಎಂಬ ಕಾರ್ಯಕ್ರಮ ಘೋಷಿಸಿ ಅದಕ್ಕೆ 500 ಕೋಟಿ ರೂ. ಅನುದಾನ ಘೋಷಿಸಿದೆ. ಇದಕ್ಕೆ ಒಟ್ಟಾರೆ ಸುಮಾರು 4,000 ಕೋಟಿ ರೂ. ಯೋಜನಾ ವೆಚ್ಚ ನಿರ್ಧರಿಸಿದೆ.

ಇದೇ ವೇಳೆ, ಈ ಸರಕಾರ ರಾಜ್ಯದ ಬಲಾಢ್ಯ ಜಾತಿ ಮಂಡಳಿಗಳನ್ನು ಸ್ಥಾಪಿಸಿ ಅವುಗಳಿಗೆ ಒಟ್ಟಾರೆಯಾಗಿ 1,550 ಕೋಟಿ ರೂ. ಅನುದಾನ ಘೋಷಿಸಿದೆ!
ಪ್ರತಿಮೆ ನಿರ್ಮಾಣಗಳಿಗೆ 250 ಕೋಟಿ ರೂ. ಅನುದಾನ ನೀಡಿದೆ.

ಬೊಮ್ಮಾಯಿ ಸರಕಾರ 2022ರ ಬಜೆಟ್ನಲ್ಲಿ ಪಂಚ ಸೂತ್ರ ಎಂಬ ನುಡಿಗಟ್ಟು ಬಳಸಿದೆ. (ನವ ಭಾರತಕ್ಕಾಗಿ ನವಕರ್ನಾಟಕ ಎಂಬ ಪದವೂ ಬಳಸಿದೆ, ಇರಲಿ!) ಈ ಪಂಚಸೂತ್ರಗಳಲ್ಲಿ ಕೃಷಿಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಹೆಚ್ಚಿನ ಅಭಿವೃದ್ಧಿ ಎಂಬ ಸೂತ್ರ ಇದೆ.
ಈ ಕೃಷಿ ಅಭಿವೃದ್ಧಿ ಸಾಧಿಸಲು ಏನು ಕಾರ್ಯಕ್ರಮಗಳಿವೆ ಎಂದು ನೋಡಿದರೆ ರೈತ ಶಕ್ತಿ ಹೆಸರಿನಲ್ಲಿ ಡೀಸೆಲ್ ಸಬ್ಸಿಡಿ ನೀಡುವ ಕಾರ್ಯಕ್ರಮ, ಸೆಕೆಂಡರಿ ಕೃಷಿ ನಿರ್ದೇಶನಾಲಯದ ಸ್ಥಾಪನೆ ಮುಖ್ಯವಾದುದು.

ಇದು ಬಿಟ್ಟರೆ ಸಹಜ ಕೃಷಿಯನ್ನು ಕೃಷಿ ವಿವಿಗಳ ಮೂಲಕ ತಲಾ ಸಾವಿರ ಹೆಕ್ಟೇರ್ ಪ್ರಯೋಗ ನಡೆಸುವುದು.
ಇದಕ್ಕೆ ಅನುದಾನ ಎಷ್ಟೆಂದರೆ 20 ಕೋಟಿ ರೂ. ಹಿಂದಿನ ಸರಕಾರ 50 ಕೋಟಿ ರೂ. ಅನುದಾನ ನೀಡಿತ್ತು.
ಬೊಮ್ಮಾಯಿ ಸರಕಾರ ಕೇಂದ್ರ ಸರಕಾರದ ತಾಳೆ ಎಣ್ಣೆ ಬೆಳೆ ಬೆಳೆಯಲು 35 ಕೋಟಿ ರೂ. ಅನುದಾನ ನೀಡಿದೆ! ಪಾರಂಪರಿಕವಾಗಿ ಎಣ್ಣೆಕಾಳು ಬೆಳೆಯುತ್ತಿರುವ ಪ್ರದೇಶಗಳಿಗೆ ಪ್ರೋತ್ಸಾಹದ ಉಪಕ್ರಮ ಇಲ್ಲ. ಇದೇ ರೀತಿ ಸಿರಿ ಧಾನ್ಯಗಳಿಗೆ ಕರ್ನಾಟಕವೇ ತವರು.! ಈ ಹಿಂದಿನ ಸರಕಾರ ಮಿಲ್ಲೆಟ್ ಬೆಳೆಯಲು ಹೆಕ್ಟೇರಿಗೆ 10 ಸಾವಿರ ರೂ. ಸಹಾಯ ಧನ ನೀಡುವ ಕಾರ್ಯಕ್ರಮ ಜಾರಿ ಮಾಡಿತ್ತು. ಬೊಮ್ಮಾಯಿ ಸರಕಾರ ಈ ಸಹಾಯ ಧನವನ್ನು ರೂ. 6 ಸಾವಿರಕ್ಕಿಳಿಸಿದೆ.

ಇದೇ ವೇಳೆ ಕೃಷಿ ಮತ್ತು ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಗಣನೀಯವಾಗಿ ಇಳಿಸಿದೆ.
ಇದಕ್ಕಿಂತ ಹೆಚ್ಚು ಆರ್ಥಿಕ ಸಿನಿಕತನವೆಂದರೆ ಯಾವುದೇ ಮಂಜೂರಾತಿ ಇನ್ನೂ ದೊರಕದ, ಆದರೆ ರಾಜಕೀಯವಾಗಿ ಒತ್ತಡ ಬೀರಿರುವ ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆಗಳಿಗೆ ತಲಾ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು.

ರಾಜ್ಯಕ್ಕೆ ಲಭಿಸಬೇಕಿದ್ದ ಜಿಎಸ್ಟಿ ಪರಿಹಾರ ಮತ್ತು 15ನೇ ಹಣಕಾಸು ಆಯೋಗದಿಂದ ನ್ಯಾಯಯುತ ಅನುದಾನದ ಮೊತ್ತವನ್ನು ಒತ್ತಾಯ ಪೂರ್ವಕ ಕೇಳಲು ಧೈರ್ಯವಿಲ್ಲದ ರಾಜ್ಯ ಸರಕಾರ ಸುಮಾರು 72 ಸಾವಿರ ಕೋಟಿ ರೂ. ಸಾಲ ಹೆಚ್ಚುವರಿಯಾಗಿ ಮಾಡಿ ಇದೀಗ ಈ ಸಾಲಿನಲ್ಲಿ ರಾಜ್ಯದ ಸಾಲದ ಹೊರೆ 5.4 ಲಕ್ಷ ಕೋಟಿಗೇರಿದೆ. ಸಾಲ/ ಬಡ್ಡಿ ಮರುಪಾವತಿ ಮೊತ್ತವೇ 30 ಸಾವಿರ ಕೋಟಿ ರೂಪಾಯಿ.
ಮುಖ್ಯವಾಗಿ ಸರಕಾರದ ಧೋರಣೆ ಮತ್ತು ಮನೋಭಾವದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬೇಕು.

1. ಸರಕಾರದ ಯೋಜನೆಗಳೆಂಬುದು ಒಂದು ಸಾತತ್ಯದ ಆಡಳಿತ ಎಂಬುದನ್ನು ನಿರ್ಲಕ್ಷಿಸಲಾಗಿದೆ. ಈ ಕಾರಣಕ್ಕೇ ಹಿಂದಿನ ಯೋಜನೆಗಳ ತಾರ್ಕಿಕ ಮುಂದುವರಿಕೆ ಇಲ್ಲದಂತಾಗಿದೆ.
2. ಕೇಂದ್ರ ಸರಕಾರದ ಯೋಜನೆಗಳೊಳಗೆ ತನ್ನ ಯೋಜನೆಗಳನ್ನು ವಿಲೀನಗೊಳಿಸಿ ಅಷ್ಟರ ಮಟ್ಟಿಗೆ ಹಣಕಾಸಿನ ಪಾಲುದಾರಿಕೆಯ ಕಷ್ಟದಿಂದ ನುಣುಚಿಕೊಳ್ಳುವ ಧೋರಣೆ ಬೆಳೆದಿದೆ. ಇದು ಒಕ್ಕೂಟ ತತ್ವದ ಬುನಾದಿಗೇ ಅಪಾಯ ಎಂಬುದು ಅರಿವಿಲ್ಲದಂತೆ ಸರಕಾರ ವರ್ತಿಸುತ್ತಿದೆ.
3. ಚುನಾವಣಾ ಗೆಲುವಿನ ಸೈತಾನನ ಪ್ರಚೋದನೆಯ ಹುಚ್ಚು ಎಷ್ಟರ ಮಟ್ಟಿಗೆ ಹತ್ತಿದೆಯೆಂದರೆ, ಸಮಗ್ರ ಅಭ್ಯುದಯದ ಯೋಜನೆಗಳಿಗೆ ಹಣಕಾಸಿನ ಅಭಾವದ ನೆಪ ಹೇಳುವ ಸರಕಾರ ಜಾತಿಗಳನ್ನು ಆಕರ್ಷಿಸಲು ಜಾತಿ ನಿಗಮಗಳನ್ನು ಸ್ಥಾಪಿಸಿ ಅವುಗಳಿಗೆ ಸಾವಿರಾರು ಕೋಟಿ ರೂ. ಸುರಿಯುತ್ತಿದೆ. ಹಾಗೇ ಪ್ರತಿಮಾ ನಿರ್ಮಾಣದ ಹೊಸ ವ್ಯಸನಕ್ಕೂ ಪ್ರೋತ್ಸಾಹ ನೀಡುತ್ತಿದೆ.

ಕಳೆದ ನಾಲ್ಕು ವರ್ಷಗಳ ಒಟ್ಟಾರೆ ಚಲನೆ ಗಮನಿಸಿದರೆ ಕುಂಟುತ್ತಿರುವ ರಾಜ್ಯದ ಅಭಿವೃದ್ಧಿಗೆ ಸಮಗ್ರ ಪರಿಹಾರ ಹುಡುಕುವ ಮನಸ್ಸೇ ಇಲ್ಲದಂತೆ ಸರಕಾರ ವರ್ತಿಸುತ್ತಿದೆ.

share
ಕೆ.ಪಿ. ಸುರೇಶ
ಕೆ.ಪಿ. ಸುರೇಶ
Next Story
X