Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸ್ಟಿರಾಯ್ಡಿ ಬಳಸುವ ಮುನ್ನ ಇರಲಿ ಎಚ್ಚರ

ಸ್ಟಿರಾಯ್ಡಿ ಬಳಸುವ ಮುನ್ನ ಇರಲಿ ಎಚ್ಚರ

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ12 Feb 2023 10:55 AM IST
share
ಸ್ಟಿರಾಯ್ಡಿ ಬಳಸುವ ಮುನ್ನ ಇರಲಿ ಎಚ್ಚರ

ಸ್ಟಿರಾಯ್ಡಿಗಳು ದೈಹಿಕ ಮತ್ತು ಮಾನಸಿಕ ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಗಳಾಗಿವೆ ಎಂಬುದನ್ನು ಬಹುತೇಕರು ತಿಳಿದಿಲ್ಲ. ಅವುಗಳನ್ನು ಬಳಸುವ ಕ್ರೀಡಾಪಟುಗಳಾಗಲೀ, ಜನಸಾಮಾನ್ಯರಾಗಲೀ ಸಾಮಾನ್ಯ ಅಥವಾ ಗಂಭೀರವಾದ ಅನಾರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಕಳೆದ ವಾರ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಉದ್ದೀಪನಾ ಮದ್ದು ಸೇವಿದ್ದರು ಎಂಬ ಕಾರಣಕ್ಕೆ 21 ತಿಂಗಳವರೆಗೆ ನಿಷೇಧ ಹೇರಲಾಯಿತು. ಉದ್ದೀಪನಾ ದ್ರವ್ಯ ಪರೀಕ್ಷಾ ಮಾದರಿಗಳಲ್ಲಿ ಹಿಗೆನಮೈನ್ ಎಂಬ ಉದ್ದೀಪನಾ ಮದ್ದು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ನಿಷೇಧ ಹೇರಲಾಗಿದೆ. ಇದು ಕೇವಲ ದೀಪಾ ಕರ್ಮಾಕರ್ ಅವರೊಬ್ಬರ ಕತೆಯಲ್ಲ. ಇತ್ತೀಚಿನ ಬಹಳ ಕ್ರೀಡಾ ಪಟುಗಳು ಸೇರಿದಂತೆ ಯುವಪೀಳಿಗೆಯೂ ಉದ್ದೀಪನ ಮದ್ದು ಸೇವನೆಗೆ ಅಂಟಿಕೊಂಡಿರುವುದು ಕಳವಳಕಾರಿ ಎನಿಸುತ್ತದೆ. 

ಕ್ರೀಡಾ ಪಟುಗಳು ದೈಹಿಕವಾಗಿ ಸದೃಢರಾಗಿರಬೇಕಾದುದು ಅನಿವಾರ್ಯ. ಅವರ ದೈಹಿಕ ಸದೃಢತೆ ಇತರ ಯುವಕರಿಗೆ ಮಾದರಿಯಾಗಿರುತ್ತದೆ. ಕ್ರೀಡಾಪಟುಗಳು, ಕ್ರೀಡೆಯಲ್ಲಿ ಜಯಗಳಿಸುವ ಮೂಲಕ ತಂಡಕ್ಕೆ ಯಶಸ್ಸು ತಂದುಕೊಡುವ ಒತ್ತಡದಲ್ಲಿರುತ್ತಾರೆ. ಈ ಕಾರಣಕ್ಕಾಗಿ ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ದೈಹಿಕ ಶ್ರಮದಂತಹ ಶಿಸ್ತುಬದ್ಧ ಜೀವನದಿಂದ ದೈಹಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕು. ಆದರೆ ಕೆಲವರು ಇದಕ್ಕೆ ವಿರುದ್ಧವಾಗಿ ಕೃತಕ ವಸ್ತುಗಳ ಮೂಲಕ ದೈಹಿಕ ಸದೃಡತೆಯ ಹಿಂದೆ ಬೀಳುತ್ತಾರೆ. 

ಅಂತಹವರು ಅನಿವಾರ್ಯವಾಗಿ ಸ್ಟಿರಾಯ್ಡಿಗಳ ಮೊರೆ ಹೋಗುತ್ತಾರೆ. ಕೆಲವು ವೇಳೆ ವೈದ್ಯರ ಸಲಹೆಯ ಮೇರೆಗೆ ಸ್ಟಿರಾಯ್ಡಿ ತೆಗೆದುಕೊಳ್ಳುವುದುಂಟು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ ಸ್ಟಿರಾಯ್ಡಿಗೆ ಮೊರೆ ಹೋಗುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅತ್ಲೆಟಿಕ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಸ್ಟಿರಾಯ್ಡಿ ಗಳನ್ನು ಬಳಸುವುದು ಮೋಸ ಎಂದು ಪರಿಗಣಿಸಲಾಗುತ್ತದೆ ಮತ್ತು ಕ್ರೀಡಾಪಟುಗಳಿಗೆ ದಂಡ ವಿಧಿಸಲು ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲು ಕಾರಣವಾಗಬಹುದು. ಬಹಳಮುಖ್ಯವಾಗಿ, ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸ್ಟಿರಾಯ್ಡಿಗಳನ್ನು ಬಳಸುವುದು ಗಂಭೀರವಾದ ಹಾಗೂ ದೀರ್ಘಕಾಲೀನ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು.

ಮಾನವನ ದೈನಂದಿನ ಕಾರ್ಯಚಟುವಟಿಕೆಗಳಿಗೆ ಹಾರ್ಮೊನ್‌ಗಳ ಸ್ರವಿಸುವಿಕೆ ಅತ್ಯಗತ್ಯ. ಪ್ರತಿ ವ್ಯಕ್ತಿಯಲ್ಲೂ ನಿರ್ದಿಷ್ಟ ಪ್ರಮಾಣದ ಹಾರ್ಮೊನ್‌ಗಳು ನೈಸರ್ಗಿಕವಾಗಿ ಸ್ರವಿಸುತ್ತವೆ. ಕೆಲವು ವೇಳೆ ದೈಹಿಕ ಅನಾರೋಗ್ಯದ ಸಂದರ್ಭದಲ್ಲಿ ಹಾರ್ಮೊನ್ ಸ್ರವಿಸುವಿಕೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಇದನ್ನು ಸರಿದೂಗಿಸಲು ಹೊರಗಿನಿಂದ ಕೃತಕ ರಾಸಾಯನಿಕಗಳ ಮೂಲಕ ಹಾರ್ಮೊನ್‌ಗಳು ಸ್ರವಿಸುವಂತೆ ಮಾಡಲಾಗುತ್ತದೆ. ಹಾರ್ಮೊನ್‌ಗಳು ಸ್ರವಿಸುವಂತೆ ಮಾಡುವ ರಾಸಾಯನಿಕಗಳೇ ಸ್ಟಿರಾಯ್ಡಿಗಳು. ಇವನ್ನು ಉದ್ದೀಪನ ಮದ್ದು ಎಂದು ಸಹ ಕರೆಯಲಾಗುತ್ತದೆ. 

ಸಂಧಿವಾತದಂತಹ ಕೆಲವು ಪರಿಸ್ಥಿತಿಗಳಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಅಸ್ತವ್ಯಸ್ತತೆಯಿಂದ ಕೀಲುಗಳು ಅಥವಾ ದೇಹದ ಇತರ ಭಾಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇದು ಚಿಕಿತ್ಸೆ ನೀಡದೆ ಬಿಟ್ಟರೆ ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಈ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಕಡಿಮೆ ಮಾಡಲು ಸ್ಟಿರಾಯ್ ್ಡಗಳನ್ನು ಬಳಸಬಹುದು. ಸ್ಟಿರಾಯ್ಡಿಗಳು ನಮ್ಮ ಸ್ಥಿತಿಯನ್ನು ಗುಣಪಡಿಸುವುದಿಲ್ಲ. ಆದರೆ ಸಂಧಿವಾತ, ಉರಿಯೂತ, ಬಿಗಿತದಂತಹ ನೋವುಗಳನ್ನು ಕಡಿಮೆ ಮಾಡುತ್ತವೆ. ಕೆಲ ಕಾರಣಗಳಿಗಾಗಿ ಕ್ರೀಡಾಪಟುಗಳು ಆಗಾಗ ದೈಹಿಕ ನೋವು ಅನುಭವಿಸುವಂತಾಗುತ್ತದೆ. ಈ ನೋವನ್ನು ಮರೆಮಾಚಲು ಅವರು ಉದ್ದೀಪನ ಮದ್ದು ಸೇವಿಸುತ್ತಾರೆ. ಸ್ಟಿರಾಯ್ಡಿಗಳು ವಿವಿಧ ರೂಪಗಳಲ್ಲಿ ಬರುತ್ತವೆ. 

ಮಾತ್ರೆಗಳು, ಸಿರಪ್‌ಗಳು, ದ್ರವಗಳು, ಇನ್ಹೇಲರ್‌ಗಳು, ಮೂಗಿನ ದ್ರವೌಷಧಗಳು, ಚುಚ್ಚುಮದ್ದುಗಳು, ಕ್ರೀಮ್‌ಗಳು, ಲೋಷನ್‌ಗಳು ಮತ್ತು ಜೆಲ್‌ಗಳ ರೂಪದಲ್ಲಿ ಸಿಗುತ್ತದೆ. (ಅನಿವಾರ್ಯ ಕಾರಣದಿಂದ ಸ್ಟಿರಾಯ್ಡಿಗಳ ಹೆಸರನ್ನು ಬಳಸಿಲ್ಲ). ಬಹುತೇಕ ಸ್ಟಿರಾಯ್ಡಿಗಳು ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. ಆದರೆ ಕೆಲವು ಕ್ರೀಮ್‌ಗಳು ಅಥವಾ ಮೂಗಿನ ದ್ರವೌಷಧಗಳನ್ನು ಔಷಧಾಲಯಗಳು ಮತ್ತು ಅಂಗಡಿಗಳಿಂದ ಖರೀದಿಸಬಹುದು.

ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸ್ಟಿರಾಯ್ಡಿಗಳು ಸಾಮಾನ್ಯವಾಗಿ ನೈಸರ್ಗಿಕ ಟೆಸ್ಟೋಸ್ಟೆರಾನ್ ಅನ್ನು ಉದ್ದೀಪಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. ಸ್ಟಿರಾಯ್ಡಿ ಬಳಕೆಯಿಂದ ಸ್ನಾಯುವಿನ ಗಾತ್ರ, ಶಕ್ತಿ ಮತ್ತು ಕೊಬ್ಬು ಮುಕ್ತ ದೇಹದ ತೂಕ ಹೆಚ್ಚಳವಾಗುತ್ತದೆ. ಇವೆಲ್ಲವೂ ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಭಾವಿಸಲಾಗಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸ್ಟಿರಾಯ್ಡಿಗಳು ದೈಹಿಕ ಮತ್ತು ಮಾನಸಿಕ ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಗಳಾಗಿವೆ ಎಂಬುದನ್ನು ಬಹುತೇಕರು ತಿಳಿದಿಲ್ಲ. 

ಅವುಗಳನ್ನು ಬಳಸುವ ಕ್ರೀಡಾಪಟುಗಳಾಗಲೀ, ಜನಸಾಮಾನ್ಯರಾಗಲೀ ಸಾಮಾನ್ಯ ಅಥವಾ ಗಂಭೀರವಾದ ಅನಾರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸ್ಟಿರಾಯ್ಡಿ ಬಳಕೆಯು ಅನೇಕ ದೈಹಿಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಮೊಡವೆ, ಚರ್ಮದ ಕಲೆಗಳು, ಪುರುಷರಲ್ಲಿ ಅಕಾಲಿಕ ಕೂದಲು ಉದುರುವಿಕೆ, ಮಹಿಳೆಯರಲ್ಲಿ ಗೊಗ್ಗರು ಧ್ವನಿ, ಮಹಿಳೆಯರಲ್ಲಿ ದೇಹ ಮತ್ತು ಮುಖದ ಕೂದಲಿನ ಅತಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಸ್ಟಿರಾಯ್ಡಿ ಬಳಕೆಯು ಲೈಂಗಿಕ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಅನಿಯಮಿತ ಮುಟ್ಟಾಗುವಿಕೆ, ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಸ್ತನ ಹಿಗ್ಗುವಿಕೆ, ಪುರುಷರ ವೃಷಣಗಳ ಕುಗ್ಗುವಿಕೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ. 

ಸ್ಟಿರಾಯ್ಡಿ ಬಳಕೆಯು ಯಕೃತ್ತಿನ ತೊಂದರೆಗಳು, ಹೃದಯದ ತೊಂದರೆಗಳು, ಸ್ಟ್ರೋಕ್, ರಕ್ತ ಹೆಪ್ಪುಗಟ್ಟುವಿಕೆ, ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಸ್ಟಿರಾಯ್ಡಿ ಬಳಕೆಯು ಮಾನಸಿಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಸ್ಟಿರಾಯ್ಡಿ ಬಳಕೆದಾರರು ಅತಿಯಾಗಿ ಆಕ್ರಮಣಕಾರಿ ಮನೋಭಾವ ಹೊಂದುತ್ತಾರೆ. ಈ ಸ್ಥಿತಿಯನ್ನು ಸಾಮಾನ್ಯವಾಗಿ ರಾಯ್ಡಿ ಕ್ರೋಧ ಎಂದು ಕರೆಯಲಾಗುತ್ತದೆ. ಅನಿಯಂತ್ರಿತ ಆಕ್ರಮಣಶೀಲತೆಯು ಕೌಟುಂಬಿಕ ಕಲಹಕ್ಕೆ ಕಾರಣವಾಗಬಹುದು. ಇದರಿಂದ ಖಿನ್ನತೆ ಆವರಿಸಿ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಕ್ರೀಡಾಪಟುಗಳಾಗಲೀ ಅಥವಾ ಸಾಮಾನ್ಯ ಜನರಾಗಲೀ, ವೈದ್ಯರ ಸಲಹೆಯ ಮೇರೆಗೆ ಮಾತ್ರ ಸ್ಟಿರಾಯ್ಡಿ ಬಳಸಬೇಕು. 

ಆರೋಗ್ಯಕ್ಕೆ ಪೂರಕವಾಗಬೇಕಿದ್ದ ಸ್ಟಿರಾಯ್ಡಿಗಳು ಇಂದು ಕಾಳ ಸಂತೆಯಲ್ಲಿ ಬಿಕರಿಯಾಗುತ್ತಿರುವುದು ದುರಂತದ ಸಂಗತಿ. ಸ್ಟಿರಾಯ್ಡಿಗಳು ಎಲ್ಲೆಂದರಲ್ಲಿ ದೊರೆಯುವುದನ್ನು ಮೊದಲು ತಪ್ಪಿಸಬೇಕು. ಸ್ಟಿರಾಯ್ಡಿಗಳ ಮಾರಾಟಕ್ಕೆ ಕಟ್ಟೆಚ್ಚರದ ನೀತಿ ಅನುಸರಿಸುವಂತಾಗಬೇಕು. ಪೋಷಕರು ಮತ್ತು ತರಬೇತುದಾರರು ಯುವ ಕ್ರೀಡಾಪಟುಗಳು ಸ್ಟಿರಾಯ್ಡಿಗಳನ್ನು ಬಳಸದೆಯೇ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು. ಫಿಟ್‌ನೆಸ್ ಮತ್ತು ಕಾರ್ಯಕ್ಷಮತೆಯ ಗುರಿಗಳನ್ನು ಪೂರೈಸಲು ಸರಿಯಾದ ಆಹಾರವನ್ನು ತಿನ್ನುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಉತ್ತಮ ಒಟ್ಟಾರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಪಾಲನೆಗಾಗಿ ಪರ್ಯಾಯ ತಂತ್ರಗಳನ್ನು ಅನುಸರಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸಲು ಸಾಕಷ್ಟು ಅವಕಾಶಗಳಿವೆ. ಇದಕ್ಕೆ ಎಲ್ಲರ ಬೆಂಬಲ ಮತ್ತು ಸಹಕಾರ ಅಗತ್ಯ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X