ಖೇಲೊ ಇಂಡಿಯಾ ಯೂತ್ ಗೇಮ್ಸ್: 5 ಚಿನ್ನ ಸಹಿತ 7 ಪದಕಗಳನ್ನು ಜಯಿಸಿದ ವೇದಾಂತ್ ಮಾಧವನ್

ಹೊಸದಿಲ್ಲಿ: ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ರಲ್ಲಿ ಏಳು ಪದಕಗಳನ್ನು ಗೆದ್ದಿದ್ದಾರೆ.
ವೇದಾಂತ್ ಟೂರ್ನಮೆಂಟ್ ನಲ್ಲಿ ಐದು ಚಿನ್ನದ ಪದಕ ಹಾಗೂ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
ಟ್ವಿಟರ್‌ನಲ್ಲಿ, ಮಾಧವನ್ ಅವರು ತಮ್ಮ ಮಗ ತನ್ನ ಪದಕಗಳೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಅಭಿಮಾನಿಗಳೊಂದಿಗೆ ಸಂತೋಷದ ಸಂದರ್ಭವನ್ನು ಆಚರಿಸಿದರು.
"ಫೆರ್ನಾಂಡಿಸ್ ಅಪೇಕ್ಷಾ (6 ಚಿನ್ನ, 1 ಬೆಳ್ಳಿ, PB $ ದಾಖಲೆಗಳು) ಹಾಗೂ ವೇದಾಂತ್ ಮಾಧವನ್ (5 ಚಿನ್ನ ಮತ್ತು 2 ಬೆಳ್ಳಿ) ಅವರ ಪ್ರದರ್ಶನದಿಂದ ತುಂಬಾ ಆಭಾರಿ ಹಾಗೂ ವಿನಮ್ರನಾಗಿದ್ದೇನೆ. ಅಚಲ ಪ್ರಯತ್ನಗಳಿಗಾಗಿ ಪ್ರದೀಪ್ ಸರ್ ಹಾಗೂ ಮಧ್ಯಪ್ರದೇಶದಲ್ಲಿ ಯಶಸ್ವಿ ಖೇಲೊ ಇಂಡಿಯಾ ಆಯೋಜಿಸಿದ್ದ ಶಿವರಾಜ್ ಚೌಹಾಣ್ ಹಾಗೂ ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.
"ದೇವರ ಕೃಪೆಯೊಂದಿಗೆ - 100 ಮೀ., 200 ಮೀ. ಮತ್ತು 1500 ಮೀಟರ್‌ಗಳಲ್ಲಿ ಚಿನ್ನ ಹಾಗೂ 400 ಮೀ. ಮತ್ತು 800 ಮೀ. ಓಟದಲ್ಲಿ ಬೆಳ್ಳಿ" ಎಂದು ಮಾಧವನ್ ಟ್ವೀಟಿಸಿಸಿದ್ದಾರೆ.
ಮಾಧವನ್ ಅವರ ಮಗ ವೇದಾಂತ್ ರಾಷ್ಟ್ರಮಟ್ಟದ ಈಜುಪಟುವಾಗಿದ್ದಾರೆ.
VERY grateful & humbled by the performances of @fernandes_apeksha ( 6 golds,1 silver,PB $ records)& @VedaantMadhavan (5golds &2 silver).Thank you @ansadxb & Pradeep sir for the unwavering efforts & @ChouhanShivraj & @ianuragthakur for the brilliant #KheloIndiaInMP. So proud pic.twitter.com/ZIz4XAeuwN
— Ranganathan Madhavan (@ActorMadhavan) February 12, 2023