ಸುಳ್ಯ: ಮಸ್ಜಿದ್ ಹಾಜಿರಾ ಹಸನ್, ಸುಳ್ಯ ಕಮ್ಯುನಿಟಿ ಸೆಂಟರ್ ಉದ್ಘಾಟನೆ

ಸುಳ್ಯ: ಸುಳ್ಯ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (SECT) ಇದರ ಅಧೀನದಲ್ಲಿ ಮಸ್ಜಿದ್ ಹಾಜಿರಾ ಹಸನ್ ಹಾಗೂ ಸುಳ್ಯ ಕಮ್ಯುನಿಟಿ ಸೆಂಟರ್ ಅನ್ನು ಟೀಂ ಬಿ ಹ್ಯೂಮೆನ್ ಟ್ರಸ್ಟಿ ಹಾಗೂ ಅಲ್-ಕೋಬರ್ ಉದ್ಯಮಿ ಮುಹಮ್ಮದ್ ಯೂನುಸ್ ಹಸನ್ ಅವರು ರವಿವಾರ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ, ತಾಯಿಯನ್ನು ಕಳೆದುಕೊಂಡ ನಾನು ಅವರ ಸ್ಮರಣಾರ್ಥ ಈ ಮಸೀದಿಯನ್ನು ನಿರ್ಮಿಸಿ ಹಾಜಿರಾ ಹಸನ್ ಹೆಸರಿನಲ್ಲಿ ಸಮಾಜಕ್ಕೆ ಅರ್ಪಿಸುತ್ತಿದ್ದೇನೆ, ಇದರ ಪ್ರತಿಫಲ ಅವರಿಗೆ ಸದಾ ಲಭಿಸುತ್ತಿರಲಿ ಮತ್ತು ಜೀವನದುದ್ದಕ್ಕೂ ಇಂತಹ ಪುಣ್ಯ ಕಾರ್ಯ ಮಾಡಲು ಅಲ್ಲಾಹನು ಶಕ್ತಿ ನೀಡಲು ತಾವೆಲ್ಲರೂ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ ಮಾತನಾಡಿ, ಅಲ್ಲಾಹನು ಮಸೀದಿಯ ಯತಾರ್ಥ ಒಡೆಯನಾಗಿದ್ದು, ಇದರ ಪ್ರಯೋಜನ ಎಲ್ಲಾ ವರ್ಗದ ಜನತೆಗೂ ಸಿಗಬೇಕಾಗಿದೆ. ಆಡಳಿತ ಸಮಿತಿ ಎಂಬುದು ಮಸೀದಿಯನ್ನು ಮುನ್ನಡೆಸಲು ತೊಡಗಿಸಿಕೊಂಡರೆ ಪ್ರತಿಯೊಬ್ಬರಲ್ಲಿಯೂ ಮಸೀದಿ ತನ್ನದು ಎಂಬ ಭಾವನೆ ಮೂಡಬೇಕಾಗಿದೆ ಎಂದರು.
ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಮಾತನಾಡಿ, ಆರಾಧನಾಲಯಗಳು ಮನುಷ್ಯರಿಗೆ ನಿಕಟರಾಗುವ, ಮನುಷ್ಯತ್ವ ಕಲಿಸಿಕೊಡುವ, ಆಯಾಯ ಧರ್ಮದ ಸಂದೇಶ, ಆದರ್ಶವನ್ನು ತಿಳಿಸುವ ಕೇಂದ್ರಗಳಾಗಬೇಕು ಎಂದರು.
ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿ ಮಸೀದಿ ವಕ್ಫ್ ಘೋಷಣೆ ನೆರವೇರಿಸಿ, ಸಮಾರೋಪ ಭಾಷಣ ಮಾಡಿದರು.
ಮಂಗಳೂರು ಕಚ್ಚಿ ಮೆಮನ್ ಮಸೀದಿ ಖತೀಬ್ ಮೌಲಾನಾ ಶೊಹೈಬ್ ಹುಸೈನಿ ನದ್ವಿ, ವೇಲಂ-ಶಾಂತಿನಗರ ಜುಮಾ ಮಸೀದಿ ಖತೀಬ್ ಹುಸೈನ್ ಕಾಮಿಲ್ ಸಖಾಫಿ, ಸೌದಿ ಅರೇಬಿಯಾ ಅಲ್-ಮುಝೈನ್ ಸಿಇಒ ಹಾಗೂ ಹಿದಾಯ ಫೌಂಡೇಶನ್ ಟ್ರಸ್ಟಿ ಝಕರಿಯಾ ಜೋಕಟ್ಟೆ, ತರೀಕೆರೆ ಮುನ್ಸಿಪಲ್ ಮಾಜಿ ಅಧ್ಯಕ್ಷ ಎಚ್.ಯು. ಫಾರೂಕ್ ತರೀಕೆರೆ ಮಾತನಾಡಿದರು.
ಸೌದಿ ಅರೇಬಿಯಾ ವೈಟ್ ಸ್ಟೋನ್ ಗ್ರೂಪ್ ಸಿಇಒ ಹಾಗೂ ಟೀಂ ಬಿ ಹ್ಯೂಮೆನ್ ಟ್ರಸ್ಟಿ ಎಂ.ಶರೀಫ್ ಬೋಳಾರ್, ಹಿದಾಯ ಫೌಂಡೇಶನ್ ಮಂಗಳೂರು ಯುನಿಟ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಡೀಲ್ಸ್ ಗ್ರೂಪ್ ಎಂಡಿ ಕೆ.ಅಹ್ಮದ್ ಬಾವಾ, ಸೌದಿ ಅರೇಬಿಯಾ ರಕ್ವಾನಿ ಗ್ರೂಪ್ ಸಿಇಒ ಅಬ್ದುಲ್ ಸಲಾಂ, ರಕ್ವಾನಿ ಗ್ರೂಪ್ ಸೌದಿ ಅರೇಬಿಯಾ ಎಂಡಿ ಇಬ್ರಾಹಿಂ ಎಂ. ಹುಸೈನ್, ಸುಳ್ಯ ಕಮ್ಯುನಿಟಿ ಸೆಂಟರ್ ಉಪಾಧ್ಯಕ್ಷ ಮುಹಮ್ಮದ್ ವಝೀರ್, ಸಲಾಂ ನೂರ್ ಹಸನ್ ಬಿನ್ ಮರ್ಹೂಂ ಹಾಜಿರಾ ಹಸನ್, ಹಿದಾಯ ಫೌಂಡೇಶನ್ ಫೌಂಡರ್ ಚೆಯರ್‍ಮೆನ್ ಎಚ್.ಕೆ. ಖಾಸಿಂ ಅಹ್ಮದ್, ಪ್ಲ್ಯಾಂಟ್ ಸೊಲ್ಯುಷನ್ ಸಿಇಒ ಅಶ್ಪಾಕ್ ಅಹ್ಮದ್, ಜನರಲ್ ಸರ್ಜನ್ ಡಾ. ಅಬ್ದುಲ್ ಮಜೀದ್ ಯು, ಎಸ್.ಇ. ಮುಹಮ್ಮದ್ ಕುಂಞಿ ಕೊಯಿನಾಡ್, ಕೆ.ಎಂ. ಶರೀಫ್ ಮಂಗಳೂರು, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಯು., ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಸ್ತಫಾ ಹಾಜಿ ಕೆಂಪಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಮಸೀದಿ ನಿರ್ಮಿಸಿ ಕೊಟ್ಟ ದಾನಿ, ಉದ್ಯಮಿ ಮುಹಮ್ಮದ್ ಯೂನುಸ್ ಹಸನ್ ಅವರನ್ನು ಟೀಂ ಬಿ ಹ್ಯೂಮೆನ್ ಟ್ರಸ್ಟ್, ಜಮಾಅತೇ ಇಸ್ಲಾಮೀ ಹಿಂದ್ ಸುಳ್ಯ ಘಟಕ ಹಾಗೂ ತರೀಕೆರೆ ನಾಗರಿಕರು ಪರವಾಗಿ ಸನ್ಮಾನಿಸಲಾಯಿತು.
ಸುಳ್ಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಉಸ್ಮಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆಯರ್ಮೆನ್ ಇಬ್ರಾಹಿಂ ಅಜ್ಜಾವರ ವಂದಿಸಿದರು.
ಹಾಫಿಲ್ ಸೈಫುಲ್ಲಾ ಕಿರಾಅತ್ ಪಠಿಸಿದರು. ಡಾ.ಜಮಾಲುದ್ದೀನ್ ಹಿಂದ್ ಮಣಿಪಾಲ್ ಮತ್ತು ಅಹ್ಮದ್ ರಿಝ ಅಹ್ನಫ್ ಸಚ್ಚರಿಪೇಟೆ ಕಾರ್ಯಕ್ರಮ ನಿರೂಪಿಸಿದರು.