ಉಡುಪಿ: ಡಿಕೆಎಸ್‌ಸಿ ಕುವೈಟ್ ಸಮಿತಿ ಅಧ್ಯಕ್ಷರಾಗಿ ಯೂಸುಫ್ ಅಬ್ಬಾಸ್ ಪುನರಾಯ್ಕೆ

ಉಡುಪಿ, ಫೆ.12: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿಕೆಎಸ್‌ಸಿ) ಇದರ ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಹಬೂಲದ ಕ್ಯಾಲಿಕಟ್ ಲೈವ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಜರಗಿತು.
ಡಿಕೆಎಸ್‌ಸಿ ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎ. ಸುಲೈಮಾನ್ ಮಿಲನ್ ಸೂರಿಂಜೆ ಉಸ್ತುವಾರಿ ವಹಿಸಿದ್ದರು. ಶಫೀಕ್ ಅಹ್ಸನಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ 2023ನೇ ಸಾಲಿನ ಆಡಳಿತ ಹಾಗೂ ಕಾರ್ಯಕಾರಿ ಸಮಿತಿ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯೂಸುಫ್ ಅಬ್ಬಾಸ್ ಅವರನ್ನು ಪುನರಾಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಶಫೀಕ್ ಅಹ್ಸನಿ ಉಸ್ತಾದ್, ಪ್ರಧಾನ ಪಾರ್ಯದರ್ಶಿಯಾಗಿ ಲಿಯಾಕತ್ ಅಲಿ ಗಂಗಾವಳಿ, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಶೇಡಿಯಾ ಆಯ್ಕೆಯಾದರು.
ಶಾಹುಲ್ ಹಮೀದ್ ಉಸ್ತಾದ್ ದುವಾ ನೆರವೇರಿಸಿದರು. ಸಲೀಂ ಮೂಡಬಿದಿರೆ ಕಿರಾಅತ್ ಪಾಠಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಗಂಗಾವಳಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಇಂತಿಯಾಜ್ ಸೂರಿಂಜೆ ವಾರ್ಷಿಕ ಮತ್ತು ಆಯವ್ಯಯ ವರದಿ ಮಂಡಿಸಿದರು.
ಸಂವಹನ ಹಾಗೂ ಪ್ರಕಾಶನಾ ಕಾರ್ಯದರ್ಶಿ ಮುಹಮ್ಮೆದ್ ಯೂಸುಫ್ ಮುನಿಯಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





