Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಶ್ರೀರಾಮಕೃಷ್ಣ ಮಠದಿಂದ ಶ್ರೀ ಸ್ವಾಮಿ...

ಶ್ರೀರಾಮಕೃಷ್ಣ ಮಠದಿಂದ ಶ್ರೀ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ನಿರ್ಗಮನ

ಶೀಘ್ರದಲ್ಲೇ ಬೆಳಗಾವಿ ಜಿಲ್ಲೆಯ ಪ್ರಭಾವಿ ಜಗದ್ಗುರು ಪೀಠದ ಅಧಿಕಾರ

12 Feb 2023 6:51 PM IST
share
ಶ್ರೀರಾಮಕೃಷ್ಣ ಮಠದಿಂದ ಶ್ರೀ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ನಿರ್ಗಮನ
ಶೀಘ್ರದಲ್ಲೇ ಬೆಳಗಾವಿ ಜಿಲ್ಲೆಯ ಪ್ರಭಾವಿ ಜಗದ್ಗುರು ಪೀಠದ ಅಧಿಕಾರ

ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠದಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡಿರುವ  ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅವರು  ಶೀಘ್ರದಲ್ಲೇ ಉತ್ತರ ಕರ್ನಾಟಕದ ಖ್ಯಾತ ಜಗದ್ಗುರು ಪೀಠವೊಂದರ ಪೀಠಾಧಿಪತಿಯಾಗಲಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ರವಿವಾರ ತಮ್ಮ ನಿರ್ಧಾರವನ್ನು  ಪ್ರಕಟಿಸಿದ ಶ್ರೀ ರಾಮಕೃಷ್ಣ  ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ತಮ್ಮ ಮುಂದಿನ  ಜಗದ್ಗುರು ಮಠದ ಹೆಸರನ್ನು ಬಹಿರಂಗಪಡಿಸಲಿಲ್ಲ. ಬೆಳಗಾವಿ ಜಿಲ್ಲೆಯ ಪ್ರಭಾವಿ ಜಗದ್ಗುರು ಪೀಠಕ್ಕೆ ತಾನು ತೆರಳುತ್ತಿರುವೆ. ತಮ್ಮ ನಿರ್ಧಾರಕ್ಕೆ ಭಕ್ತರು , ಹಿತೈಷಿಗಳು ತಮಗೆ ಅನುಮತಿ ನೀಡುವಂತೆ ಮನವಿ ಮಾಡಿದರು.

2014ರಿಂದ ತಮ್ಮನ್ನು ಬೇರೆ ಬೇರೆ ಮಠಗಳಿಗೆ, ಸಂಸ್ಥಾನಗಳಿಗೆ, ಪೀಠಗಳಿಗೆ ಉತ್ತರಾಧಿಕಾರಿ, ಪೀಠಾಧಿಪತಿಯಾಗಿ  ಬರುವಂತೆ  ಹಿರಿಯ ಸನ್ಯಾಸಿಗಳು  ಅನೇಕ ಭಕ್ತವೃಂದ ಮನವಿ ಮಾಡಿತ್ತು. ಕಳೆದ 6 ತನಕ  ಹಿಂದಿನ ತನಕ  ತಾನು ಆ ಎಲ್ಲ ಅವಕಾಶಗಳನ್ನು ನಯವಾಗಿ ತಿರಸ್ಕರಿಸುತ್ತ ಬಂದಿದ್ದೆ. ಆದರೆ ಇದೀಗ  ಈ ವಿಚಾರವಾಗಿ ನಮ್ಮ ಮಠದ ಅನೇಕ ಹಿರಿಯ ಸನ್ಯಾಸಿಗಳ ಬಳಿ ವಿನಿಮಯ ಮಾಡಿಕೊಂಡು ಈ ನಿರ್ಧಾರ ಕೈಗೊಂಡಿದ್ದೇನೆ.  16 ವಷರ್ಗಳ ಕಾಲ ಮಂಗಳೂರು ಜನತೆ ನೀಡಿದ ಪ್ರೀತಿ ,ವಿಶ್ವಾಸ ಸ್ನೇಹ ಸಹಕಾರಗಳಿಗೆ ತಾನು ಚಿರಋಣಿಯಾಗಿರುವೆ ಎಂದು ಅಭಿಪ್ರಾಯಪಟ್ಟರು.

ಶ್ರೀರಾಮಕೃಷ್ಣ ಮಠದಲ್ಲಿ 2006 ರಿಂದ 2023ರ ತನಕ ಮಂಗಳೂರಿನ ತನ್ನ ಜೀವನ ಸೇವೆಯಲ್ಲಿಯೇ ಸಾರ್ಥಕತೆ ಎಂಬ ಭಾವವನ್ನು ಜಾಗೃತಗೊಳಿಸಿದೆ. ಸ್ವಾಮಿ ವಿವೇಕಾನಂದರ 150ನೇ  ಜನ್ಮೋತ್ಸವವನ್ನು ಸುಮಾರು 125 ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನಮಾನಸದಲ್ಲಿ ವಿವೇಕಾನಂದರ ಜೀವನ ಸಂದೇಶಗಳನ್ನು ಪ್ರಸಾರ ಮಾಡಲು ಸಹಕಾರಿಯಾಗಿದೆ. 10 ಸಾವಿರ ಯುವಕರ ಜಾಥಾ ಹಾಗೂ ಮೂರು ದಿನಗಳ ಯುವ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವ ಜವಾಬ್ದಾರಿ ಸ್ಮರಣೀಯವಾದವುಗಳು ಎಂದರು.

ಸ್ವಚ್ಛ ಮಂಗಳೂರು ಅಭಿಯಾನ. ಸುಮಾರು ಐದು ವಷರ್ಗಳ ಕಾಲ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಾವಿರಾರು ಜನರು ಭಾಗಿಯಾಗಿ ಅಭಿಯಾನವು ಆಂದೋಲನದ ಸ್ವರೂಪವನ್ನು ಪಡೆಯಿತು. ಸುಮಾರು 4,000 ಕಾರ್ಯಕರ್ತರು ಈ ಅಭಿಯಾನದ ತೊಡಗಿಸಿಕೊಂಡಿದ್ದರು.   ಕೇವಲ ಮೊದಲ ಹತ್ತು ಶ್ರಮದಾನಗಳಿಗೆ ಮಠದಿಂದ ಸಹಕಾರ ನೀಡಿದರೆ ಸಾಕು ಅಂದಿದ್ದೆ. ಸರಿಯಾಗಿ ಹತ್ತನೇ ಶ್ರಮದಾನಕ್ಕೆ ಅಂದಿನ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧಮೇರ್ಂದ್ರ ಪ್ರಧಾನ್ ಖುದ್ದಾಗಿ ಪೋನ್ ಮಾಡಿ ಬಂದು ಶ್ರಮದಾನದಲ್ಲಿ ಭಾಗವಹಿಸಿ ಸಂತೋಷಪಟ್ಟರು ಹಾಗೂ ಮುಂದೆ ನಡೆಯುವ ಎಲ್ಲ ಅಭಿಯಾನಗಳಿಗೆ ಎಂಆರ್‌ಪಿಎಲ್ ಸಹಕಾರ ಪ್ರಕಟಿಸಿದ್ದರು.

ಇಲ್ಲಿಯ ತನಕ ಶ್ರೀಮಠದಿಂದ ನೀಡಿದ ಜವಾಬ್ದಾರಿವನ್ನು ಶ್ರದ್ಧಾ ಭಕ್ತಿ ನಿಸ್ವಾರ್ಥತೆಯಿಂದ ಕೈಗೊಂಡು ಸೇವೆಯಲ್ಲಿಯೇ ಸಾರ್ಥಕತೆ ಎಂಬ ಮನೋಭಾವದಿಂದ ಮಾಡಲು ಪ್ರಯತ್ನಿಸಿದ್ದೇನೆ. ಇಂದಿನವರೆಗೂ ತಾನು ಕೈಗೊಂಡ ಯಾವುದೇ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಪಡೆಯಲು ಮನವಿ ಪತ್ರ ಮಾಡಿದ ನೆನಪಿಲ್ಲ. ಆದರೆ ಎಲ್ಲ ಯೋಜನೆಗಳಿಗೆ ಬೇಕಾದ ಹತ್ತಾರು ಕೋಟಿ ರೂಪಾಯಿಗಳ ಆರ್ಥಿಕ ಸಂಪನ್ಮೂಲ ತಾನೇ ತಾನಾಗಿ ಹರಿದು ಬಂದಿದೆ. ಆಶ್ರಮದ ಒಳಗೆ ಹಾಗೂ ಹೊರಗಿನ ಕಾರ್ಯಕ್ರಮಗಳ ಸಂಘಟನೆಯ ಜೊತೆಗೆ ಮಠದ ನೂತನ ಕಟ್ಟಡ ನಿರ್ಮಾಣ, ಈಗಿರುವ ಹಳೆಯ ಕಟ್ಟಡದ ನವೀಕರಣದ ಕಾರ್ಯಗಳ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸಿದ್ದು ತನ್ನ ಸುಯೋಗವೆಂದೇ ಭಾವಿಸುತ್ತೇನೆ.

ಇನ್ನು ಸ್ವಚ್ಛ ಭಾರತದ ಮುಂದುವರಿದ ಭಾಗವಾಗಿ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್  ಎನ್ನುವ ಸ್ಟಾರ್ಟ್ ಅಪ್ ತಮ್ಮ  ಪರಿಕಲ್ಪನೆಯಲ್ಲಿ ಬೆಳೆದ ಕೂಸು. ಕಸದ ವೈಜ್ಞಾನಿಕ ನಿರ್ವಹಣೆ, ಹಸಿರು ಉದ್ಯೋಗ ಸೃಷ್ಟಿ, ದೇಶದ ಸಂಪನ್ಮೂಲದ ಮರುಬಳಕೆ, ಪರಿಸರ ಸ್ನೇಹಿ ಪರಿಕರಗಳ ಬಳಕೆ, ಪರಿಸರ ಸಂರಕ್ಷಣೆ ಒಟ್ಟಾರೆ ದೇಶದ ಬಹು ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸುವ ಸಂಸ್ಥೆಯನ್ನು ಹುಟ್ಟು ಹಾಕಿರುವುದಕ್ಕೆ ಹೆಮ್ಮೆಯಿದೆ. ಇಂದು ಆ ಸಂಸ್ಥೆಯಲ್ಲಿ ನೇರವಾಗಿ 60  ಮಂದಿಗೆ  ಉದ್ಯೋಗ ಸೃಷ್ಟಿಯಾಗಿದೆ. ಇನ್ನು ಸ್ವಚ್ಛ ಮಂಗಳೂರು ಫೌಂಡೇಶನ್ ಎಂಬ ಸಂಸ್ಥೆಯನ್ನು ಆಸಕ್ತ ಸ್ವಯಂಸೇವಕರ ಮೂಲಕ ರೂಪಿಸಲಾಗಿದೆ. ಆ ಸಂಸ್ಥೆಯ ಸ್ವಚ್ಛತಾ ಕಾರ್ಯಗಳು ಶ್ರಮದಾನಗಳು ಹಾಗೂ ಇನ್ನಿತರ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದು ಹೇಳಿದರು.

share
Next Story
X