Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜ್ಯಪಾಲರನ್ನು ನೇಮಿಸುವುದು ಹೇಗೆ ಮತ್ತು...

ರಾಜ್ಯಪಾಲರನ್ನು ನೇಮಿಸುವುದು ಹೇಗೆ ಮತ್ತು ಅವರ ಪಾತ್ರ ವಿವಾದಕ್ಕೀಡಾಗುವುದು ಏಕೆ?

12 Feb 2023 9:45 PM IST
share
ರಾಜ್ಯಪಾಲರನ್ನು ನೇಮಿಸುವುದು ಹೇಗೆ ಮತ್ತು ಅವರ ಪಾತ್ರ ವಿವಾದಕ್ಕೀಡಾಗುವುದು ಏಕೆ?

ಹೊಸದಿಲ್ಲಿ,ಫೆ.12: ಕೇಂದ್ರವು ಆರು ರಾಜ್ಯಗಳಿಗೆ ರವಿವಾರ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿದೆ,ಜೊತೆಗೆ ಹಾಲಿ ಸೇವೆಯಲ್ಲಿರುವ ಏಳು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ರಾಷ್ಟ್ರಪತಿ ಭವನವು ಬಿಡುಗಡೆಗೊಳಿಸಿರುವ ಹೇಳಿಕೆಯಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಲೆ.ಜ.ಕೆ.ಟಿ ಪರ್ನಾಯಕ್ರನ್ನು ಅರುಣಾಚಲ ಪ್ರದೇಶ, ಲಕ್ಷ್ಮಣ್ ಪ್ರಸಾದ್ ಆಚಾರ್ಯರನ್ನು ಸಿಕ್ಕಿಂ,‌ ಸಿ.ಪಿ.ರಾಧಾಕೃಷ್ಣನ್ ರನ್ನು ಜಾರ್ಖಂಡ್, ಶಿವಪ್ರತಾಪ್ ಶುಕ್ಲಾರನ್ನು ಹಿಮಾಚಲ ಪ್ರದೇಶ,‌ ಗುಲಾಬಚಂದ್ ಕಟಾರಿಯಾರನ್ನು ಅಸ್ಸಾಂ ಮತ್ತು ನ್ಯಾ(ನಿ).ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶ ರಾಜ್ಯಪಾಲರನ್ನಾಗಿ ನೇಮಕಗೊಳಿಸಿದ್ದಾರೆ. ಈ ಗಣ್ಯರು ಇದೇ ಮೊದಲ ಬಾರಿಗೆ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಆಂಧ್ರಪ್ರದೇಶದ ರಾಜ್ಯಪಾಲ ವಿಶ್ವಭೂಷಣ ಹರಿಚಂದನರನ್ನು ಛತ್ತೀಸ್ಗಡ, ಮಣಿಪುರ ರಾಜ್ಯಪಾಲ ಎಲ್.ಗಣೇಶನ್ ರನ್ನು ನಾಗಾಲ್ಯಾಂಡ್, ಛತ್ತೀಸ್ಗಡದ ರಾಜ್ಯಪಾಲ ಅನುಸೂಯಾ ಉಯಿಕೆರನ್ನು ಮಣಿಪುರ, ಬಿಹಾರದ ರಾಜ್ಯಪಾಲ ಫಗು ಚೌಹಾಣರನ್ನು ಮೇಘಾಲಯ, ಹಿಮಾಚಲ ಪ್ರದೇಶದ ರಾಜ್ಯಪಾಲ ಆರ್.ವಿ.ಅರ್ಲೇಕರ್ ರನ್ನು ಬಿಹಾರ, ಜಾರ್ಖಂಡ್ ರಾಜ್ಯಪಾಲ ರಮೇಶ ಬೈಸ್ ರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ಮತ್ತು ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿ.(ನಿ.) ಬಿ.ಡಿ.ಮಿಶ್ರಾರನ್ನು ಲಡಾಖ್ ನ ಲೆಫ್ಟಿನಂಟ್ ಗವರ್ನರ್ ಆಗಿ ವರ್ಗಾವಣೆ ಮಾಡಲಾಗಿದೆ.

ರಾಜ್ಯಪಾಲರು ಹೇಗೆ ನೇಮಕಗೊಳ್ಳುತ್ತಾರೆ?


‘ಪ್ರತಿಯೊಂದು ರಾಜ್ಯವು ಓರ್ವ ರಾಜ್ಯಪಾಲರನ್ನು ಹೊಂದಿರುತ್ತದೆ ’ ಎಂದು ಸಂವಿಧಾನದ 153ನೇ ವಿಧಿಯು ಹೇಳುತ್ತದೆ. ಸಂವಿಧಾನವು ಅಸ್ತಿತ್ವಕ್ಕೆ ಬಂದ ಕೆಲವು ವರ್ಷಗಳ ನಂತರ ತಿದ್ದುಪಡಿಯ ಮೂಲಕ ಒಬ್ಬರೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು.

155ನೇ ವಿಧಿಯಂತೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಕಗೊಳಿಸುತ್ತಾರೆ. 156ನೇ ವಿಧಿಯು ಹೇಳುವಂತೆ ರಾಷ್ಟ್ರಪತಿಗಳು ಬಯಸಿದಷ್ಟು ಅವಧಿಗೆ ರಾಜ್ಯಪಾಲರು ಹುದ್ದೆಯಲ್ಲಿರುತ್ತಾರೆ, ಆದರೆ ಅವರ ಸಾಮಾನ್ಯ ಅಧಿಕಾರಾವಧಿಯು ಐದು ವರ್ಷಗಳದ್ದಾಗಿರುತ್ತದೆ. ಐದು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ ರಾಜ್ಯಪಾಲರನ್ನು ತೆಗೆಯಲು ರಾಷ್ಟ್ರಪತಿಗಳು ಬಯಸಿದರೆ ಅವರು ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. 

ರಾಷ್ಟ್ರಪತಿಗಳು ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸುವುದರಿಂದ ವಸ್ತುತಃ ರಾಜ್ಯಪಾಲರನ್ನು ನೇಮಕಗೊಳಿಸುವುದು ಮತ್ತು ವಜಾಗೊಳಿಸುವದು ಕೇಂದ್ರ ಸರಕಾರವೇ ಆಗಿರುತ್ತದೆ. 157 ಮತ್ತು 158ನೇ ವಿಧಿಗಳಲ್ಲಿ ರಾಜ್ಯಪಾಲರ ಅರ್ಹತೆಗಳು ಮತ್ತು ಅವರ ಹುದ್ದೆಗೆ ಷರತ್ತುಗಳ ಬಗ್ಗೆ ಹೇಳಲಾಗಿದೆ. ರಾಜ್ಯಪಾಲರು ಭಾರತದ ಪ್ರಜೆಯಾಗಿರಬೇಕು ಮತ್ತು 35 ವರ್ಷಗಳನ್ನು ಪೂರೈಸಿರಬೇಕು. ಅವರು ಸಂಸತ್ ಅಥವಾ ವಿಧಾನ ಮಂಡಲದ ಸದಸ್ಯರಾಗಿರಬಾರದು ಮತ್ತು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
   
ರಾಜ್ಯಪಾಲ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧ

ರಾಜ್ಯಪಾಲರ ಹುದ್ದೆಯನ್ನು ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸುವ ರಾಜಕೀಯೇತರ ಮುಖ್ಯಸ್ಥ ಎಂದು ಪರಿಗಣಿಸಲಾಗಿದೆ. ಆದರೂ ರಾಜ್ಯಪಾಲರು ಸಂವಿಧಾನದಡಿ ಕೆಲವು ಅಧಿಕಾರಗಳನ್ನು ಹೊಂದಿರುತ್ತಾರೆ. ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗೆ ಒಪ್ಪಿಗೆಯನ್ನು ನೀಡುವುದು ಅಥವಾ ತಡೆಹಿಡಿಯುವುದು, ರಾಜ್ಯ ವಿಧಾನಭೆಯಲ್ಲಿ ಪಕ್ಷವೊಂದು ತನ್ನ ಬಹುಮತವನ್ನು ಸಾಬೀತುಗೊಳಿಸಲು ಅಗತ್ಯ ಸಮಯಾವಕಾಶವನ್ನು ಅಥವಾ ಚುನಾವಣೆಗಳಲ್ಲಿ ತ್ರಿಶಂಕು ಫಲಿತಾಂಶವಿದ್ದ ಪ್ರಕರಣಗಳಲ್ಲಿ ಬಹುಮತವನ್ನು ಸಾಬೀತುಗೊಳಿಸಲು ಯಾವ ಪಕ್ಷವನ್ನು ಮೊದಲು ಆಹ್ವಾನಿಸಬೇಕು ಎನ್ನುವುದನ್ನು ನಿರ್ಧರಿಸುವುದು ಇತ್ಯಾದಿಗಳು ಈ ಅಧಿಕಾರಗಳಲ್ಲಿ ಒಳಗೊಂಡಿದ್ದು, ಇವು ಅವರ ಸ್ಥಾನಕ್ಕೆ ಹೆಚ್ಚಿನ ಮಹತ್ವವನ್ನು ಕಲ್ಪಿಸುತ್ತವೆ. 

ದಶಕಗಳಿಂದಲೂ ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಆಣತಿಯ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ ಮತ್ತು ರಾಜ್ಯ ಸರಕಾರಗಳಿಂದ, ವಿಶೇಷವಾಗಿ ವಿರೋಧ ಪಕ್ಷಗಳಿಂದ ‘ಕೇಂದ್ರದ ಏಜೆಂಟ್’ಗಳಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಅಲ್ಲದೆ ಪರಸ್ಪರ ಭಿನ್ನಾಭಿಪ್ರಾಯವಿದ್ದಾಗ ರಾಜ್ಯಪಾಲರು ಮತ್ತು ರಾಜ್ಯ ಸರಕಾರ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಯಾವುದೇ ನಿಬಂಧನೆಗಳನ್ನು ಸಂವಿಧಾನವು ನಿಗದಿಗೊಳಿಸಿಲ್ಲ. ಇದು ಸಾಂಪ್ರದಾಯಿಕವಾಗಿ ಪರಸ್ಪರರ ವ್ಯಾಪ್ತಿಗಳಿಗೆ ಗೌರವದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಆದರೂ ಇತ್ತೀಚಿಗೆ ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ಕಟುವಾದ ವಾಗ್ವಾದಗಳು ನಡೆದಿವೆ. ಹಾಲಿ ರಾಜ್ಯಸಭೆಯ ಸಭಾಪತಿಗಳಾಗಿರುವ ಜಗದೀಪ ಧನಕರ್,ಆರ್.ಎನ್.ರವಿ ಮತ್ತು ಆರಿಫ್ ಮುಹಮ್ಮದ್ ಖಾನ್ ಅವರಂತಹ ರಾಜ್ಯಪಾಲರು ಅನುಕ್ರಮವಾಗಿ ಪಶ್ಚಿಮ ಬಂಗಾಳ,ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳಿಂದ ಪಕ್ಷಪಾತದ ವರ್ತನೆಯ ಆರೋಪಗಳನ್ನು ಎದುರಿಸಿದ್ದಾರೆ.
              
ಇಂತಹ ಸಂಘರ್ಷಕ್ಕೆ ಕಾರಣವೇನು?

ರಾಜ್ಯಪಾಲರು ರಾಜಕೀಯವಾಗಿ ನೇಮಕಗೊಳ್ಳುವುದು ಇದಕ್ಕೆ ಕಾರಣ ಎಂದಿರುವ ಸಂವಿಧಾನ ತಜ್ಞ ಡಾ.ಫೈಝನ್ ಮುಸ್ತಫಾ ಅವರು,ರಾಜ್ಯಪಾಲರು ರಾಜಕೀಯೇತರ ವ್ಯಕ್ತಿಯಾಗಿರಬೇಕು ಎನ್ನುವುದು ಸಂವಿಧಾನ ಸಭೆಯ ಚಿಂತನೆಯಾಗಿತ್ತು. ಆದರೆ ರಾಜಕಾರಣಿಗಳು ರಾಜ್ಯಪಾಲರಾಗುತ್ತಾರೆ ಮತ್ತು ನಂತರ ಚುನಾವಣೆಗಳಲ್ಲಿ ಹೋರಾಡಲು ರಾಜೀನಾಮೆ ನೀಡುತ್ತಾರೆ ಎಂದು ಅಭಿಪ್ರಾಯಿಸಿದ್ದಾರೆ.

ಮುಖ್ಯಮಂತ್ರಿಗಳು ಜನರಿಗೆ ಉತ್ತರದಾಯಿಯಾಗಿದ್ದಾರೆ. ಆದರೆ ರಾಜ್ಯಪಾಲರು ಕೇಂದ್ರವನ್ನು ಹೊರತುಪಡಿಸಿ ಯಾರಿಗೂ ಉತ್ತರಿಸಬೇಕಿಲ್ಲ. ನೀವಿದನ್ನು ಸಾಂವಿಧಾನಿಕ ನೈತಿಕತೆ ಮತ್ತು ಮೌಲ್ಯಗಳ ಲೇಪನದಿಂದ ಮರೆಮಾಚಬಹುದು,ಆದರೆ ಸತ್ಯವೆಂದರೆ ಸಂವಿಧಾನದಲ್ಲಿಯೇ ಮೂಲಭೂತ ದೋಷವಿದೆ ಎನ್ನುತ್ತಾರೆ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಸಂವಿಧಾನ ತಜ್ಞ ಅಲೋಕ್ ಪ್ರಸನ್ನ.
‌
ವಾಸ್ತವದಲ್ಲಿ ರಾಜ್ಯಪಾಲರ ಮೇಲೆ ದೋಷಾರೋಪ ಹೊರಿಸಲು ಯಾವುದೇ ಅವಕಾಶವಿಲ್ಲ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಧ್ಯೆ ನಿರ್ದಿಷ್ಟವಾಗಿ ಕಹಿ ಮತ್ತು ದೀರ್ಘಕಾಲದ ಕಚ್ಚಾಟವಿದ್ದಾಗ ಕೇಂದ್ರ ಸರಕಾರವು ಐದು ವರ್ಷಗಳವರೆಗೆ ರಾಜ್ಯ ಸರಕಾರಕ್ಕೆ ಸಮಸ್ಯೆಗಳನ್ನು ಬಳಸಲು ರಾಜಭವನವನ್ನು ಬಳಸಬಹುದು.

‘‘ರಾಜ್ಯಪಾಲರು ತಮ್ಮ ನೇಮಕಾತಿ ಮತ್ತು ಹುದ್ದೆಯಲ್ಲಿ ತಮ್ಮ ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟಕ್ಕೆ ಋಣಿಗಳಾಗಿರುತ್ತಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ವಿಮುಖವಾಗಿರುವ ಸಂದರ್ಭದಲ್ಲಿ ರಾಜ್ಯಪಾಲರು ಕೇಂದ್ರ ಸಚಿವ ಸಂಪುಟದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ಆತಂಕವಿದೆ. ವಾಸ್ತವದಲ್ಲಿ ಇಂದು ರಾಜ್ಯಪಾಲರನ್ನು ‘ಕೇಂದ್ರದ ಏಜಂಟರು’ಎಂದು ಹೀನಾಯವಾಗಿ ಕರೆಯಲಾಗುತ್ತಿದೆ ’’ ಎಂದು 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಸಂವಿಧಾನದ ಕಾರ್ಯವಿಧಾನವನ್ನು ಪುನರ್ಪರಿಶೀಲಿಸಲು ರಚಿಸಿದ್ದ ರಾಷ್ಟ್ರೀಯ ಆಯೋಗವು ಬೆಟ್ಟು ಮಾಡಿತ್ತು.
 

share
Next Story
X