ಕೋಲ್ಕತ್ತ: ಅದಾನಿ-ಹಿಂಡನ್ಬರ್ಗ್ ಪ್ರಕರಣದ JPC ತನಿಖೆಗೆ ಆಗ್ರಹಿಸಿ ಆಪ್ ರ‍್ಯಾಲಿ

ಕೋಲ್ಕತಾ,ಫೆ.12: ಆಪ್ ಕಾರ್ಯಕರ್ತರು ರವಿವಾರ ಕೋಲ್ಕತಾದಲ್ಲಿ ರ್ಯಾಲಿಯನ್ನು ನಡೆಸಿ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ರೀಸರ್ಚ್ ಮಾಡಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (JPC-Joint Parliamentary Committee)ಯಿಂದ ತನಿಖೆಗೆ ಆಗ್ರಹಿಸಿದರು.
ನಗರದ ವೆಲ್ಲಿಂಗ್ಟನ್ ಸ್ಕ್ವೇರ್ನಿಂದ ಆರಂಭಗೊಂಡ ರ‍್ಯಾಲಿ ಮುರಳಿಧರ ಸೇನ್ ಸ್ಟ್ರೀಟ್ನಲ್ಲಿರುವ ಬಿಜೆಪಿ ರಾಜ್ಯ ಕೇಂದ್ರಕಚೇರಿ ಬಳಿ ಸಮಾರೋಪಗೊಳ್ಳಬೇಕಿತ್ತಾದರೂ ಇನ್ನೂ 500 ಮೀ.ಇರುವಾಗಲೇ ಕಾಲೇಜ್ ಸ್ಟ್ರೀಟ್ ನಲ್ಲಿ ಕಲಕತ್ತಾ ವಿವಿ ಬಳಿ ಅಂತ್ಯಗೊಂಡಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ನರೇಂದ್ರ ಮೋದಿ ಸರಕಾರವು ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಅದಾನಿ ಗ್ರೂಪ್ ಗೆ ಒಲವು ತೋರಿಸಿದೆ ಎಂದು ಆರೋಪಿಸಿದ ಆಪ್ ಕಾರ್ಯಕರ್ತರು,ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಗುಂಪು ಮತ್ತು ಎಲ್ಐಸಿ ಅದಾನಿ ಗ್ರೂಪ್ ಗೆ ಸಾಲಗಳನ್ನು ನೀಡಿವೆ,ತನ್ಮೂಲಕ ಸಾರ್ವಜನಿಕರ ಹಣವನ್ನು ಮಾರುಕಟ್ಟೆಯ ಏರಿಳಿತಗಳಿಗೆ ಒಡ್ಡಲಾಗಿದೆ ಎಂದು ಹೇಳಿದರು.
‘ಅದಾನಿ ಗ್ರೂಪ್ ನ ಹಣಕಾಸು ಕುರಿತು ಸಮಗ್ರ ತನಿಖೆಯನ್ನು ನಾವು ಬಯಸಿದ್ದೇವೆ ಮತ್ತು ಅದಕ್ಕಾಗಿ ಜೆಪಿಸಿಯನ್ನು ರಚಿಸುವುದು ಅಗತ್ಯವಾಗಿದೆ ’ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಆಪ್ ನಾಯಕರೋರ್ವರು ತಿಳಿಸಿದರು.
ಇದನ್ನುಓದಿ: ಸುಮಾರು 10,000 ಮಕ್ಕಳು ತಮ್ಮ ಕುಟುಂಬದೊಂದಿಗೆ ಬೀದಿಯಲ್ಲಿ ಬದುಕುತ್ತಿದ್ದಾರೆ: ಕೇಂದ್ರ ಸರ್ಕಾರ







