Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ13 Feb 2023 12:01 AM IST
share
ಓ ಮೆಣಸೇ...

ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ದೇವೇಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರವಲ್ಲ- ಅರವಿಂದ ಬೆಲ್ಲದ, ಶಾಸಕ
ಅವರು ಉದ್ದೇಶಿಸುವುದು ಕೂಡಾ ಕೇವಲ ಅಧಿಕಾರ ಮಾತ್ರವಾಗಿದ್ದರೆ?

ಹನುಮಾಬಾದ್‌ನಲ್ಲಿ ನನ್ನ ಮಗ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಮಗನ ಗೆಲುವು ನಿಶ್ಚಿತ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
  ಆತನಿಗೆ ತನ್ನದಾದ ಯಾವ ಗುರುತೂ ಇಲ್ಲವಾದರೆ ಆತ ಗೆದ್ದರೇನು, ಸೋತರೇನು?

ಚುನಾವಣೆ ಸಮೀಪಿಸುತ್ತಿರುವುದರಿಂದ ಇನ್ನು ಮೂರು ತಿಂಗಳು ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಮಾಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ- ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕಿ
  ಈವರೆಗೆ ಏನು ಮಾತ್ರ ಮಾಡುತ್ತಿದ್ದಿರಿ ಎಂಬ ಬಗ್ಗೆ ಈ ರೀತಿ ಬಹಿರಂಗ ತಪ್ಪೊಪ್ಪಿಗೆಯ ಅಗತ್ಯವೇನಿತ್ತು?

ಸಿದ್ದರಾಮಯ್ಯ ಮತ್ತು ಡಿಕೆಶಿ ಸೋಲಿನ ಭಯದಿಂದ ನಿದ್ದೆಯಲ್ಲಿಯೂ ಮೋದಿ, ಬಿಜೆಪಿ ಕನಸು ಕಾಣುತ್ತಿದ್ದಾರೆ- ಆರ್.ಅಶೋಕ್, ಸಚಿವ
ಯಾರೋ ತುಂಬಾ ಹತ್ತಿರ ಮಲಗಿದವರ ವರದಿಯಂತಿದೆಯಲ್ಲಾ!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಸಂಸ್ಕೃತರಲ್ಲ, ಶೃಂಗೇರಿ ಮಠ ವನ್ನು ಧ್ವಂಸ ಮಾಡಿದ, ಗಾಂಧೀಜಿಯನ್ನು ಕೊಂದ ವಂಶಕ್ಕೆ ಸೇರಿದ ಬ್ರಾಹ್ಮಣರು- ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಅವರನ್ನು ಬ್ರಾಹ್ಮಣರು ಅಂತ ಕರೆದರೆ ಅವರಿಗಷ್ಟೇ ಸಾಕು. ಸುಸಂಸ್ಕೃತ ಇತ್ಯಾದಿ ಬಿರುದುಗಳನ್ನು ಅವರು ಸ್ವತಃ ತಮಗೂ ಇತರರಿಗೂ ತಾವೇ ಕೊಟ್ಟುಕೊಳ್ಳುತ್ತಾರೆ.

ದುಡಿಮೆಗೆ ತಕ್ಕ ಗೌರವ ಇಲ್ಲದಿರುವುದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಹಿಂದಿರುವ ಪ್ರಮುಖ ಕಾರಣ- ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಅಶಿಕ್ಷಿತರನ್ನು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಪ್ರತಿಷ್ಠಾಪಿಸಿದರೆ ಶಿಕ್ಷಣಕ್ಕಿರುವ ಗೌರವ ಪಾತಾಳಕ್ಕಿಳಿಯುವುದಿಲ್ಲವೇ?

ಅದಾನಿ ಸಮೂಹದ ಷೇರುಗಳಲ್ಲಿ ಆಗಿರುವ ಕುಸಿತವು ನಿರ್ದಿಷ್ಟವಾಗಿ ಕಂಪೆನಿಗೆ ಸಂಬಂಧಿಸಿದ ಸಮಸ್ಯೆ- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಭಾರತವನ್ನೇ ಅದಾನಿಗೆ ಮಾರಿಕೊಂಡ ಮೇಲೆ, ಭಾರತದ ಆರ್ಥಿಕತೆ ಮತ್ತು ವರ್ಚಸ್ಸಿಗೆ ಆಗಿರುವ ಹಾನಿ ಕೂಡಾ ಅದಾನಿ ಕಂಪೆನಿಯದ್ದೇ ಸಮಸ್ಯೆ ಅಂದು ಬಿಡಿ.

ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದರೆ ಅವರ ಶಾಪ ತಟ್ಟದೇ ಇರುವುದಿಲ್ಲ- ದಿನೇಶ್ ಗುಂಡೂರಾವ್, ಶಾಸಕ
ನಾಡಿನಲ್ಲಿ ಎಲ್ಲೆಡೆ ಮೆರೆದಿರುವ ಹಸಿವು, ದಾರಿದ್ರ, ಭ್ರಷ್ಟಾಚಾರ, ಹಿಂಸೆ, ಅಪರಾಧಗಳೆಲ್ಲ ಅವರ ಗತ ಕಾಲದ ಶಾಪದ ಫಲಗಳೇ ?

ಸಿ.ಎಂ. ಇಬ್ರಾಹೀಂರಿಗೆ ಜೆಡಿಎಸ್ ಪಕ್ಷದಲ್ಲಿ ಜೋಕರ್ ಪಾತ್ರ ಕೊಡಲಾಗಿದೆ- ಛಲವಾದಿ ನಾರಾಯಣ ಸ್ವಾಮಿ, ವಿ.ಪ. ಸದಸ್ಯ
ಮತ್ತು ಅವರು ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಸುಳ್ಳು ಎಷ್ಟೇ ದೊಡ್ಡದಿರಲಿ, ಎಷ್ಟು ದೊಡ್ಡವರೇ ಹೇಳಲಿ, ಎಷ್ಟು ಬಾರಿ ಹೇಳಲಿ ಅಂತಿಮವಾಗಿ ಅದು ಸತ್ಯದ ಮುಂದೆ ಸೋಲಲೇಬೇಕು- ಮೋದಿ, ಪ್ರಧಾನಿ
ಇದೇನು, ಅದಾನಿ ಹಗರಣದಿಂದಾಗಿ ಮನವರಿಕೆಯಾದ ಸತ್ಯವೇ?

ಒಬ್ಬ ವ್ಯಕ್ತಿ (ಗೋಡ್ಸೆ) ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ- ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ
ಈ ದೊಡ್ಡ ಮಾತು ಎಲ್ಲ ಸಮುದಾಯಗಳಿಗೂ ಅನ್ವಯಿಸುತ್ತದೆಯೇ ಸ್ವಾಮೀಜಿ?

ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ಪ್ರಗತಿ, ಶಾಂತಿ, ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ- ರಾಜನಾಥ್ ಸಿಂಗ್, ಕೇಂದ್ರ ಸಚಿವ
ಆ ಪರಂಪರೆಯನ್ನು ನಾಶ ಮಾಡಿದ ಕೀರ್ತಿ ನಿಮ್ಮ ಪಾಳಯಕ್ಕೆ ಸಲ್ಲುತ್ತದೆ.

ಮುಂದಿನ ಚುನಾವಣೆ ಟಿಪ್ಪು ಮತ್ತು ಸಾವರ್ಕರ್ ನಡುವೆ ನಡೆಯಲಿದೆ- ನಳಿನ್ ಕುಮಾರ್ ಕಟೀಲು, ಸಂಸದ
ಟಿಪ್ಪು ಈ ನೆಲದ ಕಣ ಕಣದಲ್ಲಿ ಮೆರೆಯುತ್ತಿದ್ದಾರೆ. ಪಲಾಯನ ವಾದಿ ಸಾವರ್ಕರ್‌ರನ್ನು ಎಲ್ಲಿಂದ ಹಿಡಿದು ತರುತ್ತೀರಿ?

ರಾಜಕೀಯ ಹಿನ್ನೆಲೆಯ ವಕೀಲರನ್ನು ಉನ್ನತ ಕೋರ್ಟ್‌ಗಳಿಗೆ ನ್ಯಾಯಾಧೀಶರನ್ನಾಗಿ ನೇಮಿಸುವುದರಲ್ಲಿ ಯಾವುದೇ ತಪ್ಪಿಲ್ಲ- ಕಿರಣ್ ರಿಜಿಜು, ಕೇಂದ್ರ ಸಚಿವ
ಈ ನಿಮ್ಮ ಔದಾರ್ಯವನ್ನು ರಾಜಕೀಯ ಹಿನ್ನೆಲೆ ಇರುವ ಕೈದಿಗಳಿಗೆ ಯಾವಾಗ ವಿಸ್ತರಿಸುತ್ತೀರಿ?

ರಾಜ್ಯದಲ್ಲಿ ನಾವು ಮಾಡಿರುವ ಕೆಲಸಗಳನ್ನು ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ- ಸಿದ್ದರಾಮಯ್ಯ, ಮಾಜಿ ಸಿಎಂ
ನೀವು ಸೋನಿಯಾ ಗಾಂಧಿಯ ಪುರುಸೊತ್ತಿಗಾಗಿ ಕಾದು ಕುಳಿತಿದ್ದ ಪರಿಣಾಮ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಯಡಿಯೂರಪ್ಪರ ಹೆಸರಿಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು- ಬಸವರಾಜ ಬೊಮ್ಮಾಯಿ, ಸಿಎಂ
ಒಂದಷ್ಟು ಕಾಯಬಹುದಲ್ಲಾ! ಆ ಮನುಷ್ಯನ ಬಗ್ಗೆ ನಿಮಗೆಲ್ಲ ಅಷ್ಟು ಅಸಹನೆ ಯಾಕೆ?

ಜನರಿಗೆ ಕಮಲ ಕೆರೆಯಲ್ಲಿದ್ದರೆ, ತೆನೆ ಹೊಲದಲ್ಲಿದ್ದರೆ, ಕೈ ಅಧಿಕಾರದಲ್ಲಿದ್ದರೆ ಚಂದ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಭ್ರಷ್ಟರು ಜೈಲಲ್ಲಿದ್ದರೆ ಇನ್ನೂ ಚಂದ.

ಪ್ರಸಕ್ತ ಸಾಲಿನ ಪ್ರೇಮಿಗಳ ದಿನ (ಫೆ.14)ದಂದು ಗೋಮಾತೆಯನ್ನು ಅಪ್ಪಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು- ಭಾರತದ ಪ್ರಾಣಿ ಕಲ್ಯಾಣ ಮಂಡಳಿ
ಹೋರಿಗಳಿಗೆ ಏನಾದರೂ ಸಲಹೆ ಉಂಟೇ?

ಬಿಎಸ್‌ವೈ ಬಗ್ಗೆ ಅನುಕಂಪದ ಮಾತಾಡಿ ಹುಳಿ ಹಿಂಡುವ ಸಿದ್ದರಾಮಯ್ಯ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ- ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಬಿಎಸ್‌ವೈ ಕುರಿತು ಅನುಕಂಪದ ಮಾತನ್ನು ಕೂಡಾ ಕೇಳಲು ತಯಾರಿಲ್ಲದ ನೀವು, ಅವರ ವಿರುದ್ಧ ಈ ಮಟ್ಟದ ದ್ವೇಷ ಬೆಳೆಸಿಕೊಂಡಿರುವುದಕ್ಕೆ ಕಾರಣವೇನು?

ಜಾತಿ-ಧರ್ಮ ಮೀರಿದ ಪಕ್ಷ ನಮ್ಮದು- ಅಶ್ವತ್ಥ ನಾರಾಯಣ, ಸಚಿವ
ಮನುಷ್ಯತ್ವವನ್ನೇ ಮೀರಿದ ಮೇಲೆ ಮೀರುವುದಕ್ಕೆ ಬೇರೇನು ಉಳಿಯುತ್ತೆ?

ಪ್ರಧಾನಿ ಮೋದಿಯವರಿಗೆ ನಾನು ಪ್ರತಿನಿಧಿಸುತ್ತಿರುವ ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಮೇಲೇಕೆ ಕಣ್ಣು- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಒಟ್ಟು ನಿಮ್ಮ ತಂಟೆಗೆ ಬರದೇ ಇದ್ದರೆ ಸಾಕು. ಅಲ್ಲವೇ?

ಮಾಜಿ ಸಿಎಂ ಕುಮಾರಸ್ವಾಮಿ ಹಾಕುವುದೆಲ್ಲ ಠುಸ್ ಬಾಂಬ್‌ಗಳೇ - ಎಸ್.ಮುನಿಸ್ವಾಮಿ, ಸಂಸದ
ಹಾಕಿದ ಠುಸ್ ಬಾಂಬಿಗೆ ಪೇಶ್ವೆಗಳು ಇಷ್ಟೆಲ್ಲಾ ಗದ್ದಲ ಮಾಡುತ್ತಿದ್ದಾರಲ್ಲ?

ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದೇ ಭಾವಿಸಿದ್ದೇನೆ- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಅದಾನಿ ಕೂಡ ಆ ಸೌಭಾಗ್ಯಕ್ಕಾಗಿ ಆನಂದ ಬಾಷ್ಪ ಸುರಿಸುತ್ತಿದ್ದಾರೆ. ಸದ್ಯದಲ್ಲೇ ಬಿಜೆಪಿಯ 7-8 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ- ಎಂ.ಬಿ.ಪಾಟೀಲ್, ಕಾಂಗ್ರೆಸ್ ನಾಯಕ
ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾದ ಬಳಿಕ ಇರಬೇಕು.

ವಿದ್ಯುತ್ ಸರಬರಾಜಿನಲ್ಲಿ ಸ್ಪರ್ಧಾತ್ಮಕತೆ ತರಲು ಖಾಸಗಿ ಎಸ್ಕಾಂಗಳಿಗೆ ಪರವಾನಿಗೆ ನೀಡಲು ಸರಕಾರದ ಯತ್ನ ಮುಂದುವರಿದಿದೆ- ಆರ್.ಕೆ.ಸಿಂಗ್, ಕೇಂದ್ರ ಸಚಿವ
ಗ್ರಾಹಕರನ್ನು ಶೋಷಿಸುವುದಕ್ಕೂ ಸ್ಪರ್ಧೆಯೇ?

share
ಪಿ.ಎ. ರೈ
ಪಿ.ಎ. ರೈ
Next Story
X