Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸೂಕ್ಷ್ಮ ಭೂಕಂಪನಗಳು ಭಾರತದಲ್ಲಿ ಬೃಹತ್...

ಸೂಕ್ಷ್ಮ ಭೂಕಂಪನಗಳು ಭಾರತದಲ್ಲಿ ಬೃಹತ್ ಭೂಕಂಪದ ಅಪಾಯವನ್ನು ತಪ್ಪಿಸುತ್ತಿವೆ: ತಜ್ಞರ ಅನಿಸಿಕೆ

13 Feb 2023 12:18 AM IST
share
ಸೂಕ್ಷ್ಮ ಭೂಕಂಪನಗಳು ಭಾರತದಲ್ಲಿ ಬೃಹತ್ ಭೂಕಂಪದ ಅಪಾಯವನ್ನು ತಪ್ಪಿಸುತ್ತಿವೆ: ತಜ್ಞರ ಅನಿಸಿಕೆ

ಹೊಸದಿಲ್ಲಿ, ಫೆ.12: ಭಾರತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಸೂಕ್ಷ ಭೂಕಂಪನಗಳು, ಭೂಪದರದ ಒತ್ತಡವನ್ನು ಬಿಡುಗಡೆಗೊಳಿಸಲು ನೆರವಾಗುತ್ತವೆೆ ಹಾಗೂ ಅತ್ಯಂತ ಭೀಕರವಾದ ಭೂಕಂಪ ಸಂಭವಿಸುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಒಂದು ವೇಳೆ ಭಾರತದಲ್ಲೇನಾದರೂ ಬೃಹತ್ ಭೂಕಂಪ ಸಂಭವಿಸಿದಲ್ಲಿ ಅದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರೂಪದಲ್ಲಿ ಸಮರ್ಪಣಾ ಮನೋಭಾವದ, ಅತ್ಯಂತ ಸುಸಜ್ಜಿತ ಹಾಗೂ ತರಬೇತುಪಡೆದ ಪಡೆಯನ್ನು ಅದು ಹೊಂದಿದೆ ಎಂದವರು ಹೇಳಿದ್ದಾರೆ.

ಒಂದು ವೇಳೆ ಜನರು ಹಾಗೂ ಸಂಸ್ಥೆಗಳು ಕಟ್ಟಡ, ಮನೆಗಳನ್ನು ನಿರ್ಮಿಸುವಾಗ ಕಾನೂನುನಿಯಮಗಳು ಹಾಗೂ ಸಂಹಿತೆಗಳನ್ನು ಅನುಸರಿಸಿದಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳಿಂದ ಆಗಬಹುದಾದ ಹಾನಿಯನ್ನು ಕಡಿಮೆಗೊಳಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ತಾಗಿಕೊಂಡಿರುವ ಭಾರತದ ಪಶ್ಚಿಮ ಗಡಿಯಲ್ಲಿರುವ ಟ್ರಿಪಲ್ ಜಂಕ್ಷನ್ನಲ್ಲಿ ನಿರಂತರವಾಗಿ ಸಂಭವಿಸುವ ಸೂಕ್ಷ್ಮಮಟ್ಟದ ಭೂಕಂಪನಗಳು ಭೂಪದರ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಅಲ್ಲಿ ರಿಕ್ಟರ್ ಮಾಪಕದಲ್ಲಿ 4 ಹಾಗೂ 5 ತೀವ್ರತೆಯ ಕೆಲವು ಭೂಕಂಪನಗಳು ಸಂಭವಿಸಿವೆಯೆಂದು ಭೂಕಂಪನಶಾಸ್ತ್ರ ಕುರಿತ ರಾಷ್ಟ್ರೀಯ ಭೂವಿಜ್ಞಾನ ಕೇಂದ್ರದ ನಿರ್ದೇಶಕ ಓ.ಪಿ.ಮಿಶ್ರಾ ತಿಳಿಸಿದ್ದಾರೆ.

ಮೂರು ಭೂಪದರದ ಫಲಕಗಳು (ಟೆಕ್ಟೋನಿಕ್ ಪ್ಲೇಟ್ಸ್) ಸಂಧಿಸುವ ಕೇಂದ್ರವನ್ನು ಟ್ರಿಪಲ್ ಜಂಕ್ಷನ್ ಎಂದು ಕರೆಯಲಾಗುತ್ತದೆ. ಇವು ಭೂಗರ್ಭದ ಚಟುವಟಿಕೆಯ ಅತ್ಯಂತ ಮಹತ್ವದ ಪ್ರದೇಶಗಳಾಗಿವೆ ಹಾಗೂ ಗಣನೀಯ ಮಟ್ಟದ ಭೂಕಂಪನ ಹಾಗೂ ಜ್ವಾಲಾಮುಖಿ ಚಟುವಟಿಕೆಯ ತಾಣಗಳಾಗಿವೆ. ಭೂಪದರದ ಫಲಕಗಳ ಚಲನೆಯಿಂದಾಗಿ ಭೂಗರ್ಭದಲ್ಲಿ ಉಂಟಾಗುವ ಒತ್ತಡ ಹಾಗೂ ಎಳೆಯುವಿಕೆಯು, ಭೂಕಂಪದ ರೂಪದಲ್ಲಿ ಬಿಡುಗಡೆಗೊಳ್ಳುತ್ತದೆ.

‘‘ಟ್ರಿಪಲ್ ಜಂಕ್ಷನ್ಗಳು ಅತ್ಯಂತ ಜಿಗುಟು ಹಾಗೂ ಸಾಂಧ್ರತೆಯಿಂದ ಕೂಡಿರುತ್ತದೆ. ಒಂದು ವೇಳೆ ಅದು ಮುರಿದು ಹೋದಲ್ಲಿ ಇಡೀ ಒತ್ತಡವು ಬಿಡುಗಡೆಗೊಳ್ಳುತ್ತದೆ. ಇದರಿಂದಾ ಸಾಕಷ್ಟು ಹಾನಿಯಾಗುವುದೆಂದು ಮಿಶ್ರಾ ವಿವರಿಸಿದ್ದಾರೆ. 

ಟರ್ಕಿಯಲ್ಲಿ ಅರೇಬಿಯನ್ ಭೂಪದರ, ಆಫ್ರಿಕನ್ ಭೂಪದರ ಆಗೂ ಅನಾಟೊಲಿಯನ್ ಭೂಪದರ ಹೀಗೆ ಮೂರು ಟ್ರಿಪಲ್ ಜಂಕ್ಷನ್ಗಳಿವೆ. ಈ ಜಂಕ್ಷನ್ನಲ್ಲಿ ಉಂಟಾದ ಒಡಕಿನಿಂದಾಗಿ ಫೆ.6ರಂದು ಬೃಹತ್ ಭೂಕಂಪ ಸಂಭವಿಸಿದ್ದು, ಟರ್ಕಿ ಹಾಗೂ ಸಿರಿಯದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆಂದವರು ಹೇಳಿದ್ದಾರೆ.

‘‘ಭಾರತವು ಭೂಕಂಪನ ಚಟುವಟಿಕೆಯು ಸಕ್ರಿಯವಾಗಿರುವ ಪ್ರದೇಶದಲ್ಲಿದೆ. ಅದೃಷ್ಟವಶಾತ್ ಪ್ರತಿದಿನವೂ ಸಾಕಷ್ಟು ಸೂಕ್ಷ್ಮಭೂಕಂಪನಗಳು ಸಂಭವಿಸುತ್ತಿರುತ್ತವೆ. ಇದರಿಂದಾಗಿ ಸಂಗ್ರಹಿತ ಒತ್ತಡವು ಬಿಡುಗಡೆಗೊಳ್ಳುತ್ತದೆ’ ಎಂದು ಭೂಗರ್ಭಶಾಸ್ತ್ರಜ್ಞರೊಬ್ಬರು ತಿಳಿಸಿದ್ದಾರೆ.

share
Next Story
X