ಪುತ್ತೂರು: ರೈಲು ನಿಲ್ದಾಣದ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಪುತ್ತೂರು, ಫೆ.13: ಪುತ್ತೂರು ರೈಲು ನಿಲ್ದಾಣದ ಹಳಿ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.
ರೈಲು ನಿಲ್ದಾಣದ ಪ್ಲಾಟ್ ಫಾರಂನಿಂದ ಎಡಕ್ಕೆ ಚಲಿಸಿದರೆ ಎಪಿಎಂಸಿ ರೈಲ್ವೇ ಗೇಟ್‌ಗೆ ಸಮೀಪ ರೈಲ್ವೇ ನಾಮಫಲಕದ ಪಕ್ಕದಲ್ಲಿರುವ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಪತ್ತೆಯಾಗಿಲ್ಲ. ಕಾಲಿನಲ್ಲಿ ಗೆಜ್ಜೆ, ಸೀರೆ ಕಂಡುಬಂದಿದ್ದು, ಸುಮಾರು 35ರಿಂದ 40 ವರ್ಷದ ಮಹಿಳೆ ಆಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ.
ಎರಡು ಮೂರು ದಿನದ ಹಿಂದೆಯೇ ಮಹಿಳೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಮತ್ತು ರೈಲ್ವೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story





