ಲಿಫ್ಟ್‌ನಲ್ಲಿ ಸಿಲುಕಿ 15 ವರ್ಷದ ಬಾಲಕ ಮೃತ್ಯು

ಹೊಸದಿಲ್ಲಿ: ಕೂಲರ್ ಫ್ಯಾಕ್ಟರಿಯೊಂದರ ಲಿಫ್ಟ್ ಅಡಿ ಸಿಲುಕಿ 15 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ದಿಲ್ಲಿ ಜಿಲ್ಲೆಯ ಹೊರ ವಲಯದ ಬವಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೃತ ಬಾಲಕನನ್ನು ಲೋಕೇಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕನ ತಾಯಿಯು ಆ ಫ್ಯಾಕ್ಟರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರವಿವಾರ ತನ್ನ ಪುತ್ರನನ್ನು ಜೊತೆಗೆ ಕರೆ ತಂದಿದ್ದಳು ಎಂದೂ ಪೊಲೀಸರು ಹೇಳಿದ್ದಾರೆ.
ಬಾಲಕನು ಆಟವಾಡುತ್ತಾ, ಲಿಫ್ಟ್ ಅಡಿಗೆ ಹೋಗಿದ್ದಾನೆ. ಯಾರೋ ಲಿಫ್ಟ್‌ಗಾಗಿ ಗುಂಡಿ ಒತ್ತಿದಾಗ ಕೆಳಗೆ ಬಂದಿರುವ ಎಲಿವೇಟರ್ ಅಡಿಗೆ ಸಿಕ್ಕಿ ಆತ ಮೃತಪಟ್ಟಿದ್ದಾನೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





