ಕರ್ನಾಟಕ ಮುಸ್ಲಿಂ ಜಮಾಅತ್ ಕಾಟಿಪಳ್ಳ ಘಟಕದ ಅಧ್ಯಕ್ಷರಾಗಿ ಸಯ್ಯದ್ ಹಾಮಿದ್ ಇಸ್ಮಾಯಿಲ್ ತಂಙಳ್ ಆಯ್ಕೆ

ಸುರತ್ಕಲ್: ಕರ್ನಾಟಕ ಮುಸ್ಲಿಮರ ಸಬಲೀಕರಣ ಮತ್ತು ಅಭಿವೃದ್ಧಿಯ ಲಕ್ಷ್ಯವನ್ನಿಟ್ಟು ಸ್ಥಾಪಿತಗೊಂಡಿರುವ ಕರ್ನಾಟಕ ಮುಸ್ಲಿಂ ಜಮಾಅತ್ ನ ಕಾಟಿಪಳ್ಳ ಘಟಕವನ್ನು ಇತ್ತೀಚಿಗೆ ಕಾಟಿಪಳ್ಳದ ಯಸ್. ವೈ. ಯಸ್. ಕಚೇರಿಯಲ್ಲಿ ರೂಪೀಕರಿಸಲಾಯಿತು. ಸಯ್ಯದ್ ಹಾಮಿದ್ ಇಸ್ಮಾಯಿಲ್ ತಂಙಳ್ ರವರು ಸಭೆಯನ್ನು ಉದ್ಘಾಟಿಸಿದರು. ಯಸ್. ವೈ. ಯಸ್. ಕಾಟಿಪಳ್ಳ ಶಾಖೆಯ ಅಧ್ಯಕ್ಷರಾದ ದಾವೂದುಲ್ ಹಕೀಮ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಆಸಿಫ್ ರವರು ಸ್ವಾಗತಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಥಮ ಆಡಳಿತ ಸಮಿತಿಗೆ ಸಯ್ಯದ್ ಹಾಮಿದ್ ಇಸ್ಮಾಯಿಲ್ ತಂಙಳ್ ರವರು ಅಧ್ಯಕ್ಷರು, ಎಂ. ಅಬ್ದುಲ್ ಖಯ್ಯೂಮ್ ಪ್ರಧಾನ ಕಾರ್ಯದರ್ಶಿ, ಅಬೂಬಕರ್ ಕೈಕಂಬ ಕೋಶಾಧಿಕಾರಿ, ಯು. ಎಂ. ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಇಬ್ರಾಹಿಂ ಬಿಂದಾಸ್ ಉಪಾಧ್ಯಕ್ಷರು, ಯಾಹ್ಯಾ ಮತ್ತು ಇಬ್ರಾಹಿಂ ಎಂ. ಎಚ್. ಜೊತೆಕಾರ್ಯದರ್ಶಿಗಳಾಗಿ ಆಯ್ಕೆಯಾದರು. ಅಬೂಬಕರ್ (ಅಬ್ಬು), ಬಿ ಯೂಸುಫ್, ಬಿ ಎಂ ಷರೀಫ್, ಶೇಖಬ್ಬ ಕೂಳೂರು, ಇಸ್ಮಾಯಿಲ್ ಷರೀಫ್ ರವರನ್ನು ಕಾರ್ಯಕಾರಿ ಸಮಿತಿಗೆ ನೇಮಿಸಲಾಯಿತು.
ಇದೇ ಸಂಧರ್ಭದಲ್ಲಿ ಯಸ್ ವೈ ಯಸ್ ಕಾಟಿಪಳ್ಳ ಘಟಕದ ಮಹಾಸಭೆಯು ಅಧ್ಯಕ್ಷರಾಗಿ ದಾವೂದುಲ್ ಹಕೀಮ್, ಪ್ರಧಾನ ಕಾರ್ಯಧರ್ಶಿಯಾಗಿ ಉಮರ್ ಫಾರೂಕ್, ಕೋಶಾಧಿಕಾರಿಯಾಗಿ ಹಾರಿಸ್, ಉಪಾಧ್ಯಕ್ಷರಾಗಿ ದಾವೂದ್ ಇಬ್ರಾಹಿಂ, ದಅವಾ ಕಾರ್ಯದರ್ಶಿ ಅಬ್ದುರ್ರಝಕ್, ಸಾಂತ್ವನ ಕಾರ್ಯದರ್ಶಿಯಾಗಿ ಖಲಂದರ್ ಆಯ್ಕೆಯಾದರು.
ಕೇಂದ್ರ ಚುನಾವಣಾ ವೀಕ್ಷಕರಾಗಿ ಹಬೀಬುರ್ರಹ್ಮಾನ್ ಸಖಾಫಿ, ಹಾಜಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ಫಕ್ರುದ್ದೀನ್ ಬಾವಾ, ಇಸ್ಮಾಯಿಲ್ ಬಿ. ಎ. ಎಸ್. ಎಫ್ ಮತ್ತು ಇಸ್ಮಾಯಿಲ್ ಎಸ್. ಪಿ. ಟಿ. ಅವರು ಆಗಮಿಸಿ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಸಹಕರಿಸಿದರು.







