ಕಿನ್ಯ ಬೆಳರಿಂಗೆ: ಸೌಹಾರ್ದ ಟ್ರೋಫಿ ಕಬಡ್ಡಿ ಪಂದ್ಯಾಟ

ಉಳ್ಳಾಲ, ಫೆ.13: ಕಿನ್ಯ ಯೂತ್ ಫ್ರೆಂಡ್ಸ್ ವತಿಯಿಂದ ಸೌಹಾರ್ದ ಟ್ರೋಫಿ ಹೊನಲು ಬೆಳಕಿನ 65 ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟವು ಕಿನ್ಯ ಬೆಳರಿಂಗೆಯಲ್ಲಿ ರವಿವಾರ ನಡೆಯಿತು.
ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟ್ರೋಫಿ ಅನಾವರಣ ಮಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲಿದ್ ಉಜಿರೆ ಮಾತನಾಡಿ ಶುಭ ಹಾರೈಸಿದರು. ವೈದ್ಯ ಡಾ.ರಾಹುಲ್ ರಾಮಾನುಜಂ ನಾಟೆಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಇದೇ ಸಂದರ್ಭದಲ್ಲಿ ನಿರ್ಗತಿಕರಿಗೆ ಆಹಾರ ಧಾನ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮೂವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ತಾಪಂ ಮಾಜಿ ಅಧ್ಯಕ್ಷ ಮೋನು, ಸದಸ್ಯ ಮುಸ್ತಫ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್, ಕಿನ್ಯ ಗ್ರಾಪಂ ಸದಸ್ಯ ಫಾರೂಕ್ ಕಿನ್ಯ, ಯುವ ಕಾಂಗ್ರೆಸ್ ಮುಖಂಡ ನಾಸಿರ್ ಸಾಮಣಿಗೆ, ಸಲೀಂ ಮೇಗಾ, ನಝೀರ್, ಇಜಾಝ್, ಸೈಯದ್ ತ್ವಾಹಾ, ರಹಿಮಾನ್ ಎ.ಕೆ., ಕಾಂಗ್ರೆಸ್ ಮುಖಂಡ ಅಬ್ಬಾಸ್, ಬಾವಾಕ ದೇರಳಕಟ್ಟೆ, ಮೋಹನ್, ಹಸೈನಾರ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು.
ಹಮೀದ್ ಕಿನ್ಯ ಸ್ವಾಗತಿಸಿದರು. ಹೈದರ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.