ಚಾಕುವಿನಿಂದ ಇರಿದು ಪತ್ನಿಯ ಕೊಲೆ

ಬೆಂಗಳೂರು, ಫೆ.13: ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆಗೈದಿರುವ ಘಟನೆ ಇಲ್ಲಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
34 ವರ್ಷದ ಕೌಸರ್ ಮುಬೀನ್ ಕೊಲೆಯಾಗಿರುವ ಪತ್ನಿ ಎಂದು ತಿಳಿದು ಬಂದಿದೆ.
ನಗರದ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿಪ್ರತ್ಯೇಕವಾಗಿ ವಾಸವಿದ್ದ ಪತ್ನಿ ಕೌಸರ್ ಮುಬೀನ್ ಬಳಿ ಬಂದು ಪತಿ ಜಗಳವಾಡಿದ್ದಾನೆ. ಈ ವೇಳೆ ಮನೆ ಬಾಗಿಲಲ್ಲೇ ಪತಿ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೌಸರ್ ಮುಬೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Next Story





