ಮಂಗಳೂರು: ಪೊಲೀಸರ ಕೊಲೆಯತ್ನ ಪ್ರಕರಣದ ಆರೋಪಿಗಳು ಖುಲಾಸೆ

ಮಂಗಳೂರು, ಫೆ.13: ನಾಲ್ಕು ವರ್ಷಗಳ ಹಿಂದೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬು ಎಂಬಲ್ಲಿ ಪೊಲೀಸರಿಗೆ ಹಲ್ಲೆ, ಕೊಲೆಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
2019ರ ಜನವರಿ 25ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ದ.ಕ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಟ್ಟು 22 ಆರೋಪಿತರನ್ನು ಖುಲಾಸೆಗೊಳಿಸಿದೆ.
11 ಆರೋಪಿಗಳ ಪರವಾಗಿ ವಕೀಲರಾದ ಉಮರ್ ಫಾರೂಕ್ ಮುಲ್ಕಿ, ಹೈದರಲಿ ಕಿನ್ನಿಗೋಳಿ, ಇರ್ಷಾದ್ ಮೊಂಟೆಪದವು ವಾದಿಸಿದ್ದರು.
Next Story





