ಟರ್ಕಿ: ವಾರದ ಬಳಿಕ ಭೂಕಂಪ ಅವಶೇಷಗಳಡಿ ಜೀವಂತ ಪತ್ತೆಯಾದ ಮಹಿಳೆ

ಅಂಕಾರ, ಫೆ.13: ಭೀಕರ ಭೂಕಂಪ ಸಂಭವಿಸಿದ ಒಂದು ವಾರದ ಬಳಿಕ ಕಟ್ಟಡದ ಅವಶೇಷಗಳಡಿಯಿಂದ ಮಹಿಳೆಯೊಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
40 ವರ್ಷದ ಸಿಬೆಲ್ ಕಾಯಾ ಎಂಬ ಮಹಿಳೆ ದಕ್ಷಿಣ ಗಝಿಯಾಂಟೆಪ್ ಪ್ರಾಂತದಲ್ಲಿ ಭೂಕಂಪ ಸಂಭವಿಸಿದ ಸುಮಾರು 170 ಗಂಟೆಗಳ ಬಳಿಕ ಪವಾಡಸದೃಶವಾಗಿ ರಕ್ಷಿಸಲ್ಪಟ್ಟಿದ್ದಾರೆ. ಜತೆಗೆ, ಕುಸಿದುಬಿದ್ದಿರುವ ಕಟ್ಟಡಗಳ ಕಲ್ಲುಮಣ್ಣಿನ ರಾಶಿಯ ಆಳದಲ್ಲಿರುವ ಇನ್ನೂ ಮೂವರ ಜತೆ ರಕ್ಷಣಾ ಕಾರ್ಯಕರ್ತರು ಸಂಪರ್ಕ ಸಾಧಿಸಿದ್ದಾರೆ. ತಾಯಿ, ಮಗಳು ಮತ್ತು ಒಂದು ಮಗು ಇಲ್ಲಿ ಸಿಲುಕಿರುವ ಶಂಕೆಯಿದ್ದು ಮೂವರೂ ಜೀವಂತವಾಗಿದ್ದು ಅವರನ್ನು ಹೊರತೆಗೆಯುವ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ ಎಂದು ವರದಿಯಾಗಿದೆ. ರವಿವಾರ ಟರ್ಕಿಯಲ್ಲಿ ಕುಸಿದುಬಿದ್ದ ಕಟ್ಟಡದ ರಾಶಿಯಡಿ ಸುಮಾರು 160 ಗಂಟೆ ಬದುಕುಳಿದಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿತ್ತು.
Next Story





