ಗಲ್ಲಿ ಕ್ರಿಕೆಟ್: ರಾಯಲ್ ಚಾಲೆಂಜರ್ಸ್ ಕಂದಕ್ ತಂಡಕ್ಕೆ ಪ್ರಶಸ್ತಿ

ಮಂಗಳೂರು: ದಿ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಸೀಸನ್-2 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಕಂದಕ್ ತಂಡವು ಕಂದಕ್ ಬುಲ್ಸ್ ತಂಡವನ್ನು ರೋಚಕ 3 ರನ್ನಿನ ಜಯ ಗಳಿಸುವುವ ಮೂಲಕ ಪ್ರಶಸ್ತಿ ಮುಡಿಗೇರಿಸಿತು.
ರನ್ನರ್ ಆಗಿ ಕಂದಕ್ ಬುಲ್ಸ್ ತಂಡವು ಪ್ರಶಸ್ತಿ ಜಯಿಸಿತು. ಪಂದ್ಯಾಟದ ಮ್ಯಾನ್ ಆಫ್ ದಿ ಮ್ಯಾಚ್ ಹಕೀಂ ಉಸ್ಮಾನ್ ಪಡೆದುಕೊಂಡರು. ಪಂದ್ಯದ ಸರಣಿ ಶ್ರೇಷ್ಠ ಹಾಗೂ ಉತ್ತಮ ಬ್ಯಾಟ್ಸ್‌ಮನ್ ಆಗಿ ರಾಯಲ್ ಚಾಲೆಂಜರ್ಸ್ ಕಂದಕ್ ಆಟಗಾರ ಪ್ರಮೋದ್ ಪಾಲಾಯಿತು. ಉತ್ತಮ ದಾಂಡಿಗನಾಗಿ ಕಂದಕ್ ನೈಟ್ ರೈಡರ್ಸ್‌ನ ಇಸ್ಮಾಯಿಲ್ ಕೆ. ಪಡೆದುಕೊಂಡರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ದಿ.ಸರೋಜಿನಿ ಪುಂಡಲೀಕ ಕರ್ಕೇರ ಸುಪುತ್ರ ಮೋಹನ್ ಬೆಂಗ್ರೆ, ಪತ್ರಕರ್ತ ವಾಲ್ಟರ್ ನಂದಳಿಕೆ, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ರಾಜೇಶ್ ಕೆ, ಕಾರ್ಪೊರೇಟರ್ ಅಬ್ದುಲ್ ಲತೀಫ್, ದ.ಕ. ಜಿಲ್ಲಾ ಪುಟ್ಬಾಲ್ ಅಧ್ಯಕ್ಷ ಡಿ.ಎಂ.ಅಸ್ಲಂ, ಶೇಕ್ ದಾವೂದ್, ಅಝ್ಹರಿಯಾ ಪುಟ್ಬಾಲ್ ತಂಡದ ಅಬ್ದುಲ್ ಸಲಾಂ ಕಂದಕ್, ಮುಸ್ತಫಾ, ಕಾಸಿಂ ಕಂದಕ್ ಮತ್ತು ಎಲ್ಲಾ ತಂಡದ ಮಾಲಕರು ಉಪಸ್ಥಿತರಿದ್ದರು.





