ಫೆ.15ರಿಂದ ಸಜಿಪ ಚಟ್ಟೆಕ್ಕಲ್‌ನಲ್ಲಿ ಜಲಾಲಿಯ್ಯಾ ವಾರ್ಷಿಕ
ಬಂಟ್ಬಾಳ: ಸಜೀಪನಡುವಿನ ಚಟ್ಟೆಕ್ಕಲ್‌ನ ಜಲಾಲಿಯ್ಯಾ ಜುಮಾ ಮಸ್ಜಿದ್ ವತಿಯಿಂದ 11ನೇ ವಾರ್ಷಿ ಜಲಾಲಿಯ್ಯಾ ಮಜ್ಲಿಸ್ ಫೆ.15ರಿಂದ ಆರಂಭವಾಗಲಿದೆ. ಕಾರ್ಯಕ್ರಮ 11 ದಿನಗಳ ಕಾಲ ನಡೆಯಲಿದ್ದು, ಫೆ.25ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಫೆ.15ರಂದು ಝಿಯಾರತ್, ಫೆ.16ಕ್ಕೆ ನಕ್ಸಬಂದಿ ಮಜ್ಲಿಸ್, ಫೆ.17ಕ್ಕೆ ಚಿಸ್ತಿಯಾ ಕುತುಬಿಯತ್ ನಡೆಯಲಿದೆ.
ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಮುನ್ನಡೆಸುವ ಮಿಆರಾಜ್ ಸಂಗಮ ಫೆ.18ಕ್ಕೆ ನಡೆಯಲಿದ್ದು, ಫೆ.19ರಂದು ಸ್ವಲಾತ್ ವಾರ್ಷಿಕ ನೆರವೇರಲಿದೆ. ಫೆ.20ಕ್ಕೆ ರಿಫಾಇಯ್ಯಾ ರಾತೀಬ್, 21ರಂದು ಮೆಹ್ಫಿಲೆ ತೈಬಾ, ಫೆ.22ಕ್ಕೆ ಬುರ್ಧಾ ಮಜ್ಲಿಸ್ ನಡೆಯಲಿದೆ. ಫೆ.23, 24ಕ್ಕೆ ಕ್ರಮವಾಗಿ ಅಶ್ಫಾಕ್ ಫೈಝಿ ಹಾಗೂ ನೌಫಲ್ ಸಖಾಫಿ ಕಳಸ ಪ್ರವಚನ ನೀಡಲಿದ್ದು, ಫೆ.25ರಂದು ಸಮಾರೋಪ ಸಮಾರಂಭದಲ್ಲಿ ಆಟಕೋಯ ತಂಳ್ ಕುಂಬೋಳ್, ಚಟ್ಟೆಕ್ಕಲ್ ತಂಳ್ ಹಾಗೂ ಶಿಹಾಬುದ್ದೀನ್ ಬುಖಾರಿ ತಂಳ್ ಕಡಲುಂಡಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story