ಪಾಕ್: ಧರ್ಮನಿಂದನೆ ಆರೋಪಿಯ ಹತ್ಯೆ ಪ್ರಕರಣ; 50 ಆರೋಪಿಗಳ ಬಂಧನ

ಇಸ್ಲಮಾಬಾದ್, ಫೆ.13: ಪಾಕಿಸ್ತಾನದಲ್ಲಿ ಧರ್ಮನಿಂದನೆ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಕನಿಷ್ಟ 50 ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಶನಿವಾರ ಪೂರ್ವ ಪಂಜಾಬ್ ಪ್ರಾಂತದ ನಂಕಾನಾ ಜಿಲ್ಲಾ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದ ಸಶಸ್ತ್ರಧಾರಿಗಳ ತಂಡವೊಂದು ಠಾಣೆಯಲ್ಲಿದ್ದ ಧರ್ಮನಿಂದನೆ ಆರೋಪಿ ವಾರಿಸ್ ಎಂಬಾತನನ್ನು ಠಾಣೆಯಿಂದ ಹೊರಗೆಳೆದು ತಂದು ಥಳಿಸಿ ಹತ್ಯೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕನಿಷ್ಟ 50 ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಶಂಕಿತರನ್ನು ಬಂಧಿಸಲು ಇನ್ನೂ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸರ್ಫ್ರಾರ್ ಆಲ್ಪ ಹೇಳಿದ್ದಾರೆ
Next Story