ಎ.ಕೆ.ಅಹ್ಮದ್ ಬಾವಾ ಹಾಜಿ ನಿಧನ

ಮಂಗಳೂರು, ಫೆ.14: ಪಡೀಲ್ ನ ಭಾರತ್ ಸ್ವಾ ಮಿಲ್ ನ ಮರ್ಹೂಂ ಇದಿನಬ್ಬ ಅವರ ಪುತ್ರ, ಅಡ್ಯಾರ್ ಕಣ್ಣೂರು ನಿವಾಸಿ ಎ.ಕೆ.ಅಹ್ಮದ್ ಬಾವಾ ಹಾಜಿ(71) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಇಂದು ಮಗ್ರಿಬ್ ಗಿಂತ ಮುಂಚೆ ಅಡ್ಯಾರ್ ಕಣ್ಣೂರು ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story