'ಬಾದಾಮಿಯಿಂದಲೇ ಸ್ಪರ್ಧಿಸಿ': ಸಿದ್ದರಾಮಯ್ಯಗೆ ಮನವಿ ಮಾಡಲು ಬೆಂಗಳೂರಿಗೆ ಬಂದ ಅಭಿಮಾನಿಗಳು

ಬೆಂಗಳೂರು: ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಮನವಿ ಮಾಡಿಕೊಳ್ಳಲು ಬೆಂಗಳೂರಿನ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದಾರೆ.
ಸುಮಾರು 300ಕ್ಕೂ ಹೆಚ್ಷು ವಾಹನಗಳಲ್ಲಿ ವಿರೋಧ ಪಕ್ಷ ನಾಯಕರ ಸರ್ಕಾರಿ ನಿವಾಸದ ಬಳಿ ಆಗಮಿಸಿರುವ ಬಾದಾಮಿ ಕ್ಷೇತ್ರದ ಅಭಿಮಾನಿಗಳು ಹಾಗೂ ಜನ ಪ್ರತಿನಿಧಿಗಳು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಿದ್ದಾರೆ.
ಈಗಾಗಲೇ ಕೋಲಾರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಸಿದ್ದರಾಮಯ್ಯ, 'ಬಾದಾಮಿ ನನಗೆ ದೂರ ಆಗುತ್ತದೆ. ಇದರಿಂದ ಅಲ್ಲಿನ ಜನರ ಜೊತೆಗೆ ಹೆಚ್ಚು ಬೆರೆಯುವುದಕ್ಕೆ ಆಗುತ್ತಿಲ್ಲ, ಬಾದಾಮಿಯಿಂದ ಸ್ಪರ್ಧೆ ಅಸಾಧ್ಯ ಎಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೋಲಾರ: ಚುನಾವಣಾ 'ವಾರ್ ರೂಮ್' ಉದ್ಘಾಟಿಸಿದ ಸಿದ್ದರಾಮಯ್ಯ
ಭಾಗ್ಯಗಳ ಭಾಗ್ಯವಿದಾತ ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಿಯೆಂದು ಒತ್ತಾಯ ಮಾಡೋಕೆ ನೂರಾರು ವಾಹನ ಸಮೇತ #ಸಿದ್ದರಾಮಯ್ಯನವರ ನಿವಾಸಕ್ಕೆ ವಾಹನ ಸವಾರಿ ಹೊರಟ ಬಾದಾಮಿ ಕ್ಷೇತ್ರದ ಜನರು.#IYCKarnataka #ಭಾಗ್ಯವಿದಾತ #Siddaramaiah pic.twitter.com/1lSrd6eAfZ
— Goudrusarkar - ಗೌಡ್ರುಸರ್ಕಾರ್ (@Gs_0107) February 14, 2023







